ನೆಲಕಚ್ಚಿದ 'ಸ್ವಚ್ಛ ಭಾರತ ಮಿಷನ್‌': ಶೂನ್ಯ ಸಾಧಕರ ವಿರುದ್ಧ 'ಆರೋಪ ಪಟ್ಟಿ'

ಶೌಚಾಲಯ ನಿರ್ಮಿಸದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ವಿರುದ್ಧ ಕ್ರಮ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಸ್ವಚ್ಛ ಭಾರತ ಮಿಷನ್ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಸರ್ಕಾರ ಚಾಟಿ ಏಟು ಬೀಸಿದೆ.

ಈ ಅಭಿಯಾನದಲ್ಲಿ ನಿಗದಿತ ಸಂಖ್ಯೆಯಲ್ಲಿ ಶೌಚಾಲಯ ನಿರ್ಮಿಸದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ತಾಲೂಕು ಪಂಚಾಯಿತಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳ ವಿರುದ್ಧ ಇಲಾಖಾ ಆರೋಪ ಪಟ್ಟಿ(ಚಾರ್ಜ್ ಶೀಟ್) ತಯಾರಿಸಿ ವಾರದೊಳಗೆ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಸ್ವಚ್ಛ ಭಾರತ ಮಿಷನ್ ಯೋಜನೆ ಕುಂಟುತ್ತ ಸಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಕಾಲಕ್ಕೆ ಶೌಚಾಲಗಳನ್ನು ನಿರ್ಮಿಸಿ, ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆ ಇದು.

ಯೋಜನೆ ಅನುಷ್ಠಾನದಲ್ಲಿ ಶೇ.48ಕ್ಕಿಂತ ಕಡಿಮೆ ಸಾಧನೆ ಮಾಡಿದ ತಾಲೂಕುಗಳ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ರಾಜ್ಯದ 16 ಜಿಲ್ಲೆಗಳ 56 ತಾಲೂಕುಗಳಲ್ಲಿ ಯೋಜನೆ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಲ್ಲಿ 17 ತಾಪಂಗಳದ್ದು ಶೂನ್ಯ ಸಾಧನೆ.

ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸುವಂತೆ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಸಂಬಂಧಿಸಿದ ಜಿಪಂ ಸಿಇಓಗಳಿಗೆ ಆದೇಶಿಸಿದ್ದಾರೆ.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದೇ ಯೋಜನೆ ವಿಫಲಗೊಳ್ಳಲು ಪ್ರಮುಖ ಕಾರಣ. ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಮುನೀಶ್ ಮೌದ್ಗಿಲ್, ಆಯುಕ್ತ, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಶೂನ್ಯ ಸಾಧನೆ
ಸಕಲೇಶಪುರ, ಬಂಗಾರಪೇಟೆ, ಕೋಲಾರ, ಮಾಲೂರು, ಮುಳುಬಾಗಿಲು, ಶ್ರೀನಿವಾಸಪುರ, ಸುಳ್ಯ, ಭದ್ರಾವತಿ, ಹೊಸನಗರ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ, ದೇವನಹ
ಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ

ವಿಫಲ ತಾಲೂಕುಗಳು
ಧಾರವಾಡ: ಕಲಘಟಗಿ, ಧಾರವಾಡ, ಹುಬ್ಬಳ್ಳಿ, ನವಲಗುಂದ, ಕುಂದಗೋಳ
ಕೋಲಾರ: ಕೋಲಾರ, ಬಂಗಾರಪೇಟೆ, ಮಾಲೂರು, ಮುಳುಬಾಗಿಲು, ಶ್ರೀನಿವಾಸಪುರ
ಶಿವಮೊಗ್ಗ: ಭದ್ರಾವತಿ, ಹೊಸನಗರ, ತೀರ್ಥಹಳ್ಳಿ,, ಶಿಕಾರಿಪುರ, ಶಿವಮೊಗ್ಗ, ಸೊರಬ
ಕಲಬುರಗಿ: ಚಿತ್ತಾಪುರ, ಅಫ್ಜಲಪುರ, ಆಳಂದ, ಗುಲ್ಲರ್ಗಾ, ಚಿಂಚೋಳಿ, ಜೇವರ್ಗಿ, ಸೇಡಂ
ಯಾದಗಿರಿ: ಸುರಪುರ, ಯಾದಗಿರಿ, ಶಹಾಪುರ
ಚಿಕ್ಕಬಳ್ಳಾಪುರ: ಗೌರಿಬಿದನೂರು, ಗುಡಿಬಂಡೆ, ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ
ಚಾಮರಾಜನಗರ: ಗುಂಡ್ಲುಪೇಟೆ
ಮೈಸೂರು: ನಂಜನಗೂಡು, ಕೃಷ್ಣರಾಜನಗರ, ಟಿ.ನರಸಿಪುರ, ಹೆಗ್ಗಡದೇವನಕೋಟೆ
ಚಿಕ್ಕಮಗಳೂರು: ಮೂಡಿಗೆರೆ, ತರೀಕೆಸೆ, ನರಸಿಂಹರಾಜಪುರ, ಚಿಕ್ಕಮಗಳೂರು
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ
ಬೆಂಗಳೂರು ನಗರ: ಕನಕಪುರ, ಮಾಗಡಿ, ರಾಮನಗರ
ಹಾಸನ: ಸಕಲೇಶಪುರ
ಮಡಿಕೇರಿ: ಸೋಮವಾರಪೇಟೆ
ಗದಗ: ಶಿರಹಟ್ಟಿ
ಮಂಡ್ಯ: ಮಂಡ್ಯ
ದಕ್ಷಿಣ ಕನ್ನಡ: ಸುಳ್ಯ

-ರಾಯಣ್ಣ.ಆರ್.ಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com