ಪ್ರೇಮಲತಾ ಬಟ್ಟೆಯಲ್ಲಿ ವಿರ್ಯಾಣು ಪತ್ತೆ?

ಅತ್ಯಾಚಾರ ಪ್ರಕರಣ ಸಂಬಂಧ ಪ್ರೇಮಲತಾ ಅವರು ಸಾಕ್ಷಿಗಾಗಿ ನೀಡಿದ್ದ ಬಟ್ಟೆಯಲ್ಲಿ ವೀರ್ಯಾಣು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಶ್ರೀಗಳು ಮತ್ತು ಆರೋಪ ಮಾಡಿರುವ ಗಾಯಕಿ ಪ್ರೇಮಲತಾ
ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಶ್ರೀಗಳು ಮತ್ತು ಆರೋಪ ಮಾಡಿರುವ ಗಾಯಕಿ ಪ್ರೇಮಲತಾ

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಅವರಿಗೆ ಹಿನ್ನಡೆಯಾಗಿದ್ದು, ಪ್ರೇಮಲತಾ ಅವರು ಸಾಕ್ಷಿಗಾಗಿ ನೀಡಿದ್ದ ಬಟ್ಟೆಯಲ್ಲಿ ವೀರ್ಯಾಣು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಈ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದ ಪ್ರೇಮಲತಾ ಅವರ ಬಟ್ಟೆಯಲ್ಲಿ ಗಂಡಿನ ವಿರ್ಯಾಣುವಿನ ಅಂಶ ಪತ್ತೆಯಾಗಿದೆ. ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಮ್ಮ ವರದಿ ನೀಡಿದ್ದು, ವರದಿಯಲ್ಲಿ ಪ್ರೇಮಲತಾ ಅವರ ಬಟ್ಟೆಯಲ್ಲಿ ಗಂಡಿನ ವೀರ್ಯಾಣು ಪತ್ತೆಯಾಗಿದೆ ಎಂದು ಮಾತ್ರ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ವೀರ್ಯಾಣು ಶ್ರೀಗಳದ್ದೇ ಎಂದು ಸ್ಪಷ್ಟವಾಗಿ ತಿಳಿಸಲಾಗಿಲ್ಲ.

ಆದರೆ ಪ್ರಸ್ತುತ ಸಾಕ್ಷ್ಯಾಧಾರದಿಂದ ಶ್ರೀಗಳ ಮೇಲೆ ಆರೋಪ ಮಾಡಿರುವ ಪ್ರೇಮಲತಾ ಅವರ ಆರೋಪಕ್ಕೆ ಬಲ ಬಂದಂತಾಗಿದೆ. ಈ ಹಿಂದೆ ರಾಘವೇಶ್ವರ ಶ್ರೀಗಳು ತಮ್ಮ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಸಾಕ್ಷಿಗಾಗಿ ಘಟನೆ ವೇಳೆ ತಾವು ಧರಿಸಿದ್ದ ಉಡುಪುಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದರು. ಈ ಉಡುಪುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದೀಗ ಪರೀಕ್ಷಾ ವರದಿ ಹೊರಬಿದ್ದಿದೆ.

ಆದರೆ ಪ್ರಸ್ತುತ ಹೊರಬಂದಿರುವ ಫಲಿತಾಂಶ ಸಂಪೂರ್ಣವಾಗಿಲ್ಲ. ಏಕೆಂದರೆ ಪರೀಕ್ಷಾ ವರದಿಯಲ್ಲಿ ಕೇವಲ ಗಂಡು ವೀರ್ಯಾಣು ಪತ್ತೆಯಾಗಿದೆ ಎಂದು ಮಾತ್ರ ತಿಳಿಸಲಾಗಿದ್ದು, ಇದು ರಾಘವೇಶ್ವರ ಶ್ರೀಗಳದ್ದೇ ಎಂದು ಸ್ಪಷ್ಟವಾಗಿ ಹೇಳಿಲ್ಲ. ಹೀಗಾಗಿ ಶ್ರೀಗಳ ವಿರುದ್ಧ ಆರೋಪ ಸಾಬೀತಾಗಲು ಶ್ರೀಗಳನ್ನು ಕೂಡ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿದೆ. ಆ ಪರೀಕ್ಷೆಯಲ್ಲಿ ದೊರೆತ ವೀರ್ಯಾಣು ಮತ್ತು ಪ್ರೇಮಲತಾ ಬಟ್ಟೆಯಲ್ಲಿ ದೊರೆತ ವೀರ್ಯಾ ಎರಡೂ ಒಂದೇ ಆಗಿದ್ದರೆ ಮಾತ್ರ ಪ್ರಕರಣ ಪ್ರೇಮಲತಾ ಅವರ ಪರವಾಗಿ ವಾಲುತ್ತದೆ.

ಆದರೆ ಇದಕ್ಕೂ ಕಾನೂನು ತೊಡಕಿದ್ದು, ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಹೈಕೋರ್ಟ್ ತಡೆ ನೀಡಿದ್ದು, ಪ್ರಕರಣದ ಕೊನೆಯ ಹಂತದ ವಿಚಾರಣೆ ಮುಂದುವರೆದಿದೆ. ಹೀಗಾಗಿ ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆಸುವಲ್ಲಿನ ತಡೆಯನ್ನು ಹೈಕೋರ್ಟ್ ತೆರವುಗೊಳಿಸದರೆ ಮಾತ್ರ ಪ್ರಕರಣಕ್ಕೆ ಪ್ರಮುಖ ತಿರುವು ದೊರೆಯುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com