ಮಡೆ ಸ್ನಾನ: ನಾಳೆ ಪ್ರತಿಭಟನೆ

ಕುಕ್ಕೆ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಜರಗುವ ಮಡೆ ಮಡೆಸ್ನಾನವನ್ನು ಸದ್ಯಕ್ಕೆ ಮುಂದುವರಿಸುವಂತೆ...
ಮಡೆಸ್ನಾನ
ಮಡೆಸ್ನಾನ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಜರಗುವ ಮಡೆ ಮಡೆಸ್ನಾನವನ್ನು ಸದ್ಯಕ್ಕೆ ಮುಂದುವರಿಸುವಂತೆ ಹೈಕೋರ್ಟ್ ನೀಡಿದ ಮಧ್ಯಾಂತರ ಆದೇಶವನ್ನು ಖಂಡಿಸಿ, ನಾಳೆ (ಮಂಗಳವಾರ) ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಜಾಗೃತಿ ವೇದಿಕೆ ಪ್ರತಿಭಟನೆ ನಡೆಸಲಿದೆ.

ಕುಕ್ಕೆ ಸುಬ್ರಮಣ್ಯ ದೇಗುಲದಲ್ಲಿ ಬ್ರಾಹ್ಮಣರು ಊಟ ಮಾಡಿದ ಎಂಜಲೆಲೆಯಲ್ಲಿ ಭಕ್ತರು ಹೊರಳಾಡುವ ಮಡೆ ಸ್ನಾನವನ್ನು ನಿಷೇಧಿಸಬೇಕೆಂದು ವ್ಯಾಪಕ ಕೂಗು ಎದ್ದಿತ್ತು. ಆದರೆ ಮಡೆಸ್ನಾನ ಮುಂದುವರಿಸುವಂತೆ ಹೈಕೋರ್ಟ್ ಮಧ್ಯಾಂತರ ಆದೇಶ ಹೊರಡಿಸಿತ್ತು.
 
ಪ್ರತಿಭಟನೆಯ ಬಗ್ಗೆ ವೇದಿಕೆಯ ಅಧ್ಯಕ್ಷ ಕೆ.ಎಸ್ .ಶಿವರಾಮು ಅವರು ಮಾತನಾಡಿದ್ದು, ಈ ಅಮಾನವೀಯ ಮತ್ತು ವಿಚಾರಹೀನ ಪದ್ದತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ನ್ಯಾಯಾಂಗ ಹೋರಾಟ ನಡೆಸುವ ಬದಲು ಜನರನ್ನು ಜಾಗೃತಿಗೊಳಿಸಬೇಕಾದುದು ಮುಖ್ಯ. ಆದ್ದರಿಂದಲೇ ನಾವು ಪ್ರತಿಭಟನೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ.

ಅದೇ ವೇಳೆ ರಾಜ್ಯ ಸರ್ಕಾರ ಪಂಕ್ತಿ ಭೇದವನ್ನು ನಿಷೇಧಕ್ಕೊಳಪಡಿಸದೇ ಇದ್ದರೆ ನಾವು ಅದರ ವಿರುದ್ಧವೂ ಪ್ರತಿಭಟನೆ ನಡೆಸುತ್ತೇವೆ ಎಂದು ಶಿವರಾಮು ಹೇಳಿದ್ದಾರೆ .

ನಾಳೆ ಬೆಳಗ್ಗೆ 10.30ಕ್ಕೆ ಡೆಪ್ಯುಟಿ ಕಮಿಷನರ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಯಲಿದ್ದು, ಇದರಲ್ಲಿ ದಲಿತ ಸಂಘಗಳು, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಹಲವಾರು ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com