ಹತ್ತೇ ನಿಮಿಷದಲ್ಲಿ ಮುಗಿದು ಹೋಯ್ತು ಕಲಾಪ

ವಿಧಾನ ಪರಿಷತ್‍ನಲ್ಲಿ ವಿಧೇಯಕ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಒಂದು ದಿನ ವಿಸ್ತರಣೆಗೊಂಡ ವಿಧಾನಸಭೆ ಕಲಾಪ ಕೇವಲ ಹತ್ತೇ ನಿಮಿಷದಲ್ಲಿ ಮುಕ್ತಾಯಗೊಂಡಿತು. ಇದಕ್ಕೆ ಕಾರಣ `ಮೂರ್ಖರ ದಿನ'!...
ವಿಧಾನ ಪರಿಷತ್‍ ಅಧಿವೇಶನ
ವಿಧಾನ ಪರಿಷತ್‍ ಅಧಿವೇಶನ

ವಿಧಾನಸಭೆ: ವಿಧಾನ ಪರಿಷತ್‍ನಲ್ಲಿ ವಿಧೇಯಕ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಒಂದು ದಿನ ವಿಸ್ತರಣೆಗೊಂಡ ವಿಧಾನಸಭೆ ಕಲಾಪ ಕೇವಲ ಹತ್ತೇ ನಿಮಿಷದಲ್ಲಿ ಮುಕ್ತಾಯಗೊಂಡಿತು. ಇದಕ್ಕೆ ಕಾರಣ `ಮೂರ್ಖರ ದಿನ'!

ಈ ಮೂಲಕ ರಾಜ್ಯ ವಿಧಾನಮಂಡಲದ ಇತಿಹಾಸದ ಅಪರೂಪದ ಘಟನೆಗಳ ಸಾಲಿಗೆ ಬುಧವಾರದ ಕಲಾಪವೂ ಸೇರ್ಪಡೆಗೊಂಡಿದೆ. ಮೇಲ್ಮನೆಯಿಂದ ಅಂಗೀಕಾರಗೊಂಡ ಎರಡು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಈ ಸಂದರ್ಭದಲ್ಲಿ ಸದನದಲ್ಲಿ ಮೂವರು ಸಚಿವರು ಸೇರಿ ಕಾಂಗ್ರೆಸ್‍ನ 32, ಬಿಜೆಪಿಯ 10 ಹಾಗೂ ಜೆಡಿಎಸ್‍ನ ನಾಲ್ವರು ಶಾಸಕರು ಮಾತ್ರ ಹಾಜರಿದ್ದರು.

ಸದನಕ್ಕೆ ಶಾಸಕರು ಕಡಿಮೆ ಸಂಖ್ಯೆಯಲ್ಲಿ ಹಾಜರಾಗುವುದಕ್ಕೆ ಕಾರಣ `ಮೂರ್ಖರ ದಿನ'! ಮಂಗಳವಾರ ಕಲಾಪ ಕೊನೆಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಹೆಚ್ಚಿನ ಶಾಸಕರು ನಾಲ್ಕು ಗಂಟೆಯ ನಂತರ ತಮ್ಮ ತಮ್ಮ ಊರುಗಳಿಗೆ ತೆರಳುವುದಕ್ಕೆ ಸಿದಟಛಿತೆ ನಡೆಸಿದ್ದರು. ಆದರೆ ಪಂಚಾಯಿತ್ ರಾಜ್ ತಿದ್ದುಪಡಿ, ಭಾಷಾ ಕಲಿಕೆ ಮತ್ತು ಕಡ್ಡಾಯ-ಉಚಿತ ಶಿಕ್ಷಣ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್‍ನಲ್ಲಿ ಒಪ್ಪಿಗೆ ದೊರೆತಿರಲಿಲ್ಲ. ಪಂಚಾಯತ್ ರಾಜ್ ವಿಧೇಯಕಕ್ಕಂತೂ ಉಭಯ ಸದನದಲ್ಲಿ ಒಪ್ಪಿಗೆ ಪಡೆಯಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇತ್ತು. ಆದರೆ, ಮಂಗಳವಾರ ಸಾಯಂಕಾಲ 7.30ರ ವರೆಗೆ ಕಾಯ್ದರೂ ಪ್ರಯೋಜನವಾಗಲಿಲ್ಲ. ಅದಾದ ಮೇಲೆ ಮೇಲ್ಮನೆಯಲ್ಲಿ ಅಂಗೀಕೃತಗೊಂಡ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆಯು ವುದಕ್ಕೆ ಸಂಖ್ಯಾಬಲದ ಕೊರತೆ ಅಪಾಯವಿತ್ತು.

ಹೀಗಾಗಿ ಕಲಾಪವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಬೇಕಾಯಿತು. ಸದನದಲ್ಲಿ ಶಾಸಕರ ಉಪಸ್ಥಿತಿ ಅಗತ್ಯ ಪ್ರತಿಪಕ್ಷಗಳಿ ಗಿಂತಲೂ ಆಡಳಿತ ಪಕ್ಷಕ್ಕೆ ಅನಿವಾರ್ಯ ವಾಗಿತ್ತು. ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಆರಂಭದಲ್ಲಿ ಎಲ್ಲ ಶಾಸಕರಿಗೂ ಎಸ್ ಎಂಎಸ್ ಮೂಲಕ ವಿಪ್ಹ್ ಜಾರಿ ಮಾಡಿದರು. ಇದನ್ನು ನಂಬುವುದಕ್ಕೆ ಯಾರೂ ಸಿದ್ದರಿರಲಿಲ್ಲ. ಕೊನೆಗೆ ಎಲ್ಲರಿಗೂ ದೂರವಾಣಿ ಕರೆ ಮಾಡಿದರೂ ನಂಬಲಿಲ್ಲ. ನಾಳೆ ಏಪ್ರಿಲ್ 1. ಹೀಗಾಗಿ ಶಾಸಕರನ್ನು ಮೂರ್ಖರನ್ನಾಗಿ ಮಾಡುವ ಉದ್ದೇಶದಿಂದ ಅಶೋಕ್ `ಕಾಗೆ ಹಾರಿಸುತ್ತಿರಬಹುದು' ಎಂದು ತಿಳಿದರು.

ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಭಾಗದ ಶಾಸಕರಲ್ಲಿ ಹಲವರು ತಮ್ಮ ಮನೆ ಸೇರಿದ್ದರು. ಬೆಳಗ್ಗೆ 11 ಗಂಟೆಗೆ ಶುರವಾಗಬೇಕಿದ್ದ ಕಲಾಪ ಆರಂಭವಾದದ್ದು ಮಧ್ಯಾಹ್ನ 2.30ಕ್ಕೆ. ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್‍ನಲ್ಲಿ 1.30ರವರೆಗೂ ಚರ್ಚೆ ನಡೆಸಿ ಒಪ್ಪಿಗೆ ನೀಡಲಾದ ನಂತರ ಪಂಚಾಯತ್‍ರಾಜ್ ಮತ್ತು ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು. ಕಲಾಪ ಪಟ್ಟಿಯಲ್ಲಿ 10 ಗಮನ ಸೆಳೆಯುವ ಸೂಚನೆಗಳನ್ನು ಪ್ರಸ್ತಾಪಿಸಲಾಗಿತ್ತಾದರೂ, ಚರ್ಚೆ ನಡೆಯಲಿಲ್ಲ. 60 ಗಂಟೆ 9 ನಿಮಿಷ ಚರ್ಚೆ ಒಟ್ಟು 14 ದಿನಗಳ ಕಾಲ ನಡೆದ ಕಲಾಪದಲ್ಲಿ 60 ಗಂಟೆ 9 ನಿಮಿಷ ಚರ್ಚೆ ನಡೆದಿದೆ. ಬಜೆಟ್ ಬಗ್ಗೆ 22 ಗಂಟೆ 19 ನಿಮಿಷಗಳ ಕಾಲ 22 ಸದಸ್ಯರು ಮಾತನಾಡಿದ್ದಾರೆ. ಧನವಿನಿಯೋಗ ಸೇರಿ ಒಟ್ಟು 15 ವಿಧೇಯಕಗಳು ಅಂಗೀಕಾರಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com