ಡಾ. ಸಾ.ಶಿ. ಮರುಳಯ್ಯ ಸೇರಿ 91 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ

ಡಾ. ಸಾ.ಶಿ. ಮರುಳಯ್ಯ
ಡಾ. ಸಾ.ಶಿ. ಮರುಳಯ್ಯ

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ಸಾ.ಶಿ. ಮರುಳಯ್ಯ, ಜಿ.ಎಸ್. ಸಿದ್ದಲಿಂಗಯ್ಯ ಹಾಗೂ ಎಸ್.ಜಿ. ಮಾಲತಿ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 91 ಗಣ್ಯರಿಗೆ 2015ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲಾಗಿದೆ.

ನಾಳೆ ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂದು ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ಏ.4ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಹಿಂದೆ ಎರಡು ದಿನಗಳ ಕಾಲ ನಡೆಯುತ್ತಿದ್ದ ಕೆಂಪೇಗೌಡ ಜಯಂತಿಯನ್ನು ಈ ಬಾರಿ ಪಾಲಿಕೆ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಒಂದು ದಿನಕ್ಕೆ ಇಳಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ವಾರ್ಡ್ ಮಟ್ಟದಲ್ಲಿ ಕೆಂಪೇಗೌಡ ಜಯಂತಿ ಆಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ನಾಳೆ ಬೆಳಗ್ಗೆ 8 ಗಂಟೆಗೆ ಮೇಯರ್ ಎನ್.ಶಾಂತಕುಮಾರಿ ಅವರು ಎನ್.ಆರ್.ಚೌಕದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿ ವಿಜೇತರು: ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ: ವೇದ ವಿ. ಭಟ್, ಕೆ. ಚೆನ್ನಯ್ಯ, ಟಿ. ರಾಜಾರಾಮ್, ಡಾ. ವಸುಧಾ ಶ್ರೀನಿವಾಸ್, ಕುಮಾರಿ ಸ್ಫೂರ್ತಿ, ಆನಂದ ಮೂದಲಗೆರೆ, ಶ್ರೀಕಾಂತ ನಾಗೇಂದ್ರ ಶಾಸ್ತ್ರಿ. ಸಮಾಜ ಸೇವೆಗಾಗಿ ಹೆಚ್.ಬಿ. ರಾಜೇಗೌಡ, ಬಿ.ಎಂ. ನಾರಾಯಣ ಸ್ವಾಮಿ, ಡಿ. ದಾಸಪ್ಪ ಗೌಡ, ಭಾರ್ಗವಿ. ಎಂ.ಎಸ್. ರೇಣುಕಾಪ್ರಸಾದ್, ಡಾ. ರಿತಿಕಾ ಮಂಜುಳಾ, ಎ.ಬಿ. ಶಿವಕುಮಾರ್, ಎಂ. ಸಿದ್ದಪ್ಪ ನೇಗಲಾಲ, ಶ್ರೀನಿವಾಸನ್, ವಿ. ನಾಗರಾಜ. ರಂಗಭೂಮಿ ಸೇವೆಗಾಗಿ, ಕೆ.ಜಿ. ವೆಂಕಟೇಶ್, ಭಾಗ್ಯಶ್ರೀ, ಟಿ.ವಿ. ಗುರುಮೂರ್ತಿ, ವೆಂಕಟೇಶಯ್ಯ, ಲಕ್ಷ್ಮೀ ಶ್ರೀನಿವಾಸ್, ಟಿ.ಎಲ್. ರಮೇಶ್, ಎಸ್. ಗಂಗಪ್ಪ, ಪಿ. ಹುಚ್ಚಪ್ಪ, ವಿಜಯ್‌‌ ಕುಮಾರ್ ಜೀತೂರಿ. ಚಲನಚಿತ್ರ : ನಟ, ನಿರ್ಮಾಪಕ ರವಿಶಂಕರ್, ನಾಗತಿಹಳ್ಳಿ ರಮೇಶ್, ಕೆ.ಎಸ್. ಶ್ರೀನಿವಾಸ ಕುಮಾರ್, ಆರ್.ಟಿ. ರಮಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com