• Tag results for ಬಿಬಿಎಂಪಿ

ಕೋವಿಡ್ ವ್ಯಾಕ್ಸಿನ್ ಗೆ ಒಟಿಪಿ ಬರದಿದ್ದರೇ ಕೈಯ್ಯಾರೆ ನಮೂದಿಸಬಹುದು: ಬಿಬಿಎಂಪಿ ಆಯುಕ್ತ

ಕೋವಿಡ್ ಲಸಿಕೆ ಪಡೆಯಲು ಒಂದು ವೇಳೆ ಒಟಿಪಿ ಜನರೇಟರ್ ಆಗದಿದ್ದ ವೇಳೆ ಕೈಯ್ಯಲ್ಲಿ ನಮೂದಿಸಿಕೊಂಡು  ಲಸಿಕೆ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

published on : 18th January 2021

ರಾಜ್ಯದ 243 ಕಡೆ ಕೊರೊನಾ ಲಸಿಕೆ ವಿತರಣೆ: ಎಲ್ಲಾ ಕೇಂದ್ರಗಳಲ್ಲಿ ಮೊದಲ ಲಸಿಕೆ ಪೌರ ಕಾರ್ಮಿಕರಿಗೆ

ರಾಜ್ಯದ 243 ಕಡೆಗಳಲ್ಲಿ ಶನಿವಾರ (ಜನವರಿ 16) ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

published on : 16th January 2021

370 ಟಿಬೆಟಿಯನ್ನರಿಗೆ ಮೊದಲ ಸುತ್ತಿನಲ್ಲಿ ಕೋವಿಡ್ ಲಸಿಕೆ!

ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಕೋವಿಡ್ ಲಸಿಕಾ ವಿತರಣಾ ಕಾರ್ಯಕ್ರಮದಲ್ಲಿ 370 ಟಿಬೆಟಿಯನ್ನರಿಗೆ ಮೊದಲ ಸುತ್ತಿನಲ್ಲಿ ಕೋವಿಡ್ ಲಸಿಕೆ ನೀಡುವ ಸಾಧ್ಯತೆ ಇದೆ.

published on : 14th January 2021

ಕೋವಿಡ್ ಲಸಿಕೆ ಪಡೆದವರ ಆರೋಗ್ಯದ ಮೇಲೆ ತಜ್ಞರ ನಿಗಾ; ಸಜ್ಜಾಗಿರಲಿದೆ ಆಂಬುಲೆನ್ಸ್‌

ಪ್ರಾಥಮಿಕ ಹಂತದಲ್ಲಿ ಕೋವಿಡ್ ಲಸಿಕೆ ಪಡೆಯುವ ಆರೋಗ್ಯ ಕಾರ್ಯಕರ್ತ ಆರೋಗ್ಯದ ಮೇಲೆ ತಜ್ಞರು ತೀವ್ರ ನಿಗಾ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

published on : 14th January 2021

ಬೆಂಗಳೂರು: ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದ ಕೋವಿಡ್ ಲಸಿಕೆ: ಆಯುಕ್ತ ಮಂಜುನಾಥ್ ಪ್ರಸಾದ್

ನಿರೀಕ್ಷೆಯಂತೆಯೇ ಕೋವಿಡ್ ಲಸಿಕೆಗಳು ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದು, ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ  ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

published on : 14th January 2021

ಬೆಂಗಳೂರಿನ ಆರು ಕೇಂದ್ರಗಳಿಂದ ಕೋವಿಡ್ ಲಸಿಕೆ ವಿತರಣೆಗೆ ಚಾಲನೆ

ತೀವ್ರ ಕುತೂಹಲ ಕೆರಳಿಸಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಇಂದಿನಿಂದ ಚಾಲನೆ ನೀಡಲಾಗುತ್ತಿದ್ದು, ಬೆಂಗಳೂರಿನ ಆರು ಕೇಂದ್ರಗಳಿಂದ ಕೋವಿಡ್ ಲಸಿಕೆ ವಿತರಣೆಗೆ ಚಾಲನೆ ನೀಡಲಾಗುತ್ತದೆ. 

published on : 14th January 2021

ಹೊಸ ಕಾಯ್ದೆ ಜಾರಿ: ಬಿಬಿಎಂಪಿ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳ ನಿಯೋಜನೆಯೇ ಸವಾಲು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಂದಿನಿಂದ ಹೊಸ ಕಾಯ್ದೆ ಜಾರಿಯಾಗಿದ್ದು.  ಈ ಕಾಯ್ದೆ ಅನ್ವಯದ ಬಿಬಿಎಂಪಿ ಹುದ್ದೆಗಳಿಗೆ ಇದೀಗ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಬೇಕಿದೆ.

published on : 12th January 2021

ಬೆಂಗಳೂರಿನ ಲಸಿಕೆ ಸಂಗ್ರಹ ವ್ಯವಸ್ಥೆ ಪರಿಶೀಲಿಸಿದ ಆಡಳಿತಾಧಿಕಾರಿ ಗೌರವ್‌ ಗುಪ್ತ

ಕೋವಿಡ್‌ ಲಸಿಕೆ ಸಂಗ್ರಹ ಮತ್ತು ವಿತರಣೆಯ ಸಿದ್ಧತೆ ಕುರಿತು ಪರಿಶೀಲಿಸಲು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಬೆಂಗಳೂರಿನ ದಾಸಪ್ಪ ಆಸ್ಪತ್ರೆಗೆ ಭೇಟಿ ನೀಡಿದರು. ಬಿಬಿಎಂಪಿ ಮೊದಲನೇ ಹಂತದಲ್ಲಿ 1.71 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಿಸಲು ಸಿದ್ಧತೆ ನಡೆಸಿದೆ.

published on : 12th January 2021

ಕೋವಿಡ್-19: ಬೆಂಗಳೂರಿನಲ್ಲಿ 1,507 ಕೇಂದ್ರದಲ್ಲಿ ಲಸಿಕೆಗೆ ವ್ಯವಸ್ಥೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಹ ಹಂತದ ಕೋವಿಡ್ ಲಸಿಕೆ ಹಾಕುವುದಕ್ಕೆ 1,507 ಕೇಂದ್ರಗಳನ್ನು ಗುರುತಿಸಲಾಗಿದ್ದು, ಮೇಲ್ವಿಚಾರಣೆಗೆ 300 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು. 

published on : 10th January 2021

ಬಿಬಿಎಂಪಿ ವಿಧೇಯಕ-2020ಕ್ಕೆ ರಾಜ್ಯಪಾಲರ ಅಂಕಿತ: ಜನವರಿ 11ರಿಂದ ಹೊಸ ಆಡಳಿತ ಜಾರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಮಾಡುವಂತಹ ಮಹತ್ವದ ಮಸೂದೆ ಬಿಬಿಎಂಪಿ ವಿಧೇಯಕ-2020ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಜ.11ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. 

published on : 9th January 2021

ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ

 ಬಿಬಿಎಂ‍ಪಿ ಗುತ್ತಿಗೆದಾರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಹಾಲಕ್ಷ್ಮೀ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

published on : 7th January 2021

ರಸ್ತೆ ಇಕ್ಕೆಲಗಳಲ್ಲಿ ಇಂಟರ್ನೆಟ್, ಕೇಬಲ್ ವೈರ್ ಅವಾಂತರ: ಪರಿಹಾರ ಹುಡುಕುವಂತೆ ಬಿಬಿಎಂಪಿಗೆ 'ಹೈ' ಸೂಚನೆ

ಸಿಲಿಕಾನ್ ಸಿಟಿಯ ರಸ್ತೆಗಳ ಇಕ್ಕೆಲಗಳಲ್ಲಿ ಮರಗಳಿಗೆ ಇಂಟರ್ನೆಟ್ ಹಾಗೂ ಕೇಬಲ್ ವೈರ್'ಗಳನ್ನು ನೇತು ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ವಿಚಾರ ಕುರಿತು ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುಂತೆ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ. 

published on : 7th January 2021

ಲೇ ಔಟ್ ಗಳ ಅಕ್ರಮ ಕಟ್ಟಡಗಳ ಸಕ್ರಮಗೊಳಿಸಲು ಬಿಡಿಎ ಕಾಯ್ದೆಗೆ ತಿದ್ದುಪಡಿ: ಹೈಕೋರ್ಟ್ ನಲ್ಲಿ ಪಿಐಎಲ್ 

ಬಿಬಿಎಂಪಿ ಗೆ ಈಗಾಗಲೇ ಹಸ್ತಾಂತರಿಸಲಾಗಿರುವ ಲೇ ಔಟ್ ಗಳಲ್ಲಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಬಿಡಿಎ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದೆ.

published on : 5th January 2021

ಶೇ.50 ರಷ್ಟು ತೆರಿಗೆ ಮನ್ನಾ ಮಾಡಿ: ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ರಾಜ್ಯದ ಬಿಜೆಪಿ ಸರ್ಕಾರದ ಅವ್ಯವಹಾರಗಳನ್ನು ಬಯಲಿಗೆಳೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಇಡೀ ವರ್ಷ ಹೋರಾಟ ನಡೆಸಲಾಗುವುದು. ಸರ್ಕಾರದ ತೆರಿಗೆ ಹೆಚ್ಚಳ ನೀತಿಯ ವಿರುದ್ಧ ನಿರಂತರ ಧ್ವನಿ ಎತ್ತಲಾಗುವುದು ಎಂದು ಕೆಪಿಸಿಸf ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು. 

published on : 5th January 2021

ಜ.10ರಿಂದ ಮಾ.31ರವರೆಗೆ ಪಿಂಚಣಿ ಪ್ರಮಾಣಪತ್ರಗಳ ನವೀಕರಣ ಅಭಿಯಾನ: ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ನಿವೃತ್ತಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅಂಗವಿಕಲತೆ, ಅಪ್ರಾಪ್ತ ವಯಸ್ಸಿನ ಪಿಂಚಣಿದಾರರ '2021-22ನೇ ಸಾಲಿನ ಜೀವಿತ ಪ್ರಮಾಣಪತ್ರ'ದ ನವೀಕರಣ ಕಾರ್ಯವನ್ನು ಅಧಿಕಾರಿಗಳು ಕೈಗೆತ್ತಿಕೊಳ್ಳಲಿದ್ದಾರೆ.

published on : 4th January 2021
1 2 3 4 5 6 >