'Greater Bengaluru Authority' ಹೆಸರಿಗೆ ಕನ್ನಡ ಸಂಘಟನೆಗಳ ವಿರೋಧ: ಕನ್ನಡದ ಹೆಸರಿಡುವಂತೆ ಆಗ್ರಹ

ಮುಂಬೈ ನಾಗರಿಕ ಸಂಸ್ಥೆಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಎಂದು ಹೆಸರಿಸಲಾಗಿದೆ. ಅದೇ ರೀತಿ ಚೆನ್ನೈನ ನಾಗರಿಕ ಸಂಸ್ಥೆಯನ್ನು 'ಪೆರುನಗರ ಚೆನ್ನೈ ಮಾನಾಗ್-ಆರಾಚಿ' ಎಂದು ಹೆಸರಿಸಲಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಎಂಬ ಹೆಸರಿಗೆ ಕನ್ನಡ ಪರ ಹೋರಾಟ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕನ್ನಡದ ಹೆಸರಿಡುವಂತೆ ಆಗ್ರಹಿಸಿವೆ.

ಮುಂಬೈ ಮತ್ತು ಚೆನ್ನೈನಂತಹ ಪುರಸಭೆಗಳು ತಮ್ಮ ರಾಜ್ಯದ ಅಧಿಕೃತ ಮತ್ತು ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಿವೆ. ಮುಂಬೈ ನಾಗರಿಕ ಸಂಸ್ಥೆಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಎಂದು ಹೆಸರಿಸಲಾಗಿದೆ. ಅದೇ ರೀತಿ ಚೆನ್ನೈನ ನಾಗರಿಕ ಸಂಸ್ಥೆಯನ್ನು 'ಪೆರುನಗರ ಚೆನ್ನೈ ಮಾನಾಗ್-ಆರಾಚಿ' ಎಂದು ಹೆಸರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಕನ್ನಡ ಹೆಸರಿಡುವಂತ ಕನ್ನಡ ಸಂಘಟನೆಗಳು ಆಗ್ರಹಿಸಿವೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಅವರು ಪತ್ರ ಬರೆದಿದ್ದು, ಕನ್ನಡ ಹೆಸರಿಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಹೇಳಿದ್ದರೂ, ಇಲ್ಲಿಯವರೆಗೆ ಕನ್ನಡ ಹೆಸರಿನ ಯಾವುದೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಕನ್ನಡೇತರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಐದು ನಿಗಮಗಳಲ್ಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವಂತೆ ಕೋರಿ ಈ ಹಿಂದೆ ಕೆಡಿಎ ಸರ್ಕಾರಕ್ಕೆ ಪತ್ರ ಬರೆದಿತ್ತು,

File photo
ಸೆಪ್ಟೆಂಬರ್ 2 ರಿಂದ ಗ್ರೇಟರ್ ಬೆಂಗಳೂರು ಆಡಳಿತ; ಐದು ಪಾಲಿಕೆಗಳ ರಚನೆ: ಸುಲಲಿತ ಆಡಳಿತಕ್ಕೆ ಸಿಬ್ಬಂದಿ ಕೊರತೆಯೇ ಪ್ರಮುಖ ಅಡ್ಡಿ!

ಗ್ರೇಟರ್ ಬೆಂಗಳೂರು ಅಥಾರಿಟಿ ಎಂಬ ಹೆಸರು ಹೆಚ್ಚಾಗಿ ಇಂಗ್ಲಿಷ್ ಭಾಷೆಯನ್ನು ಪ್ರತಿಬಿಂಬಿಸುವ ಪದವಾಗಿದ್ದು, ಹೆಸರಿಗೆ ಕನ್ನಡ ಸ್ಪರ್ಶ (ಕನ್ನಡತನ) ನೀಡುವ ಅವಶ್ಯಕತೆಯಿದೆ. ಕನ್ನಡ ಹೆಸರನ್ನು ಬಳಸಿದರೆ, ಭಾಷೆಗೆ ಅರ್ಹವಾದ ಗೌರವ ಸಿಗುವುದಲ್ಲದೆ, ಪ್ರಸ್ತಾವಿತ ಪ್ರಾಧಿಕಾರವು ಭಾವನಾತ್ಮಕವಾಗಿ ಕನ್ನಡಿಗರಿಗೆ ಹತ್ತಿರವಾಗುವ ಅವಕಾಶಗಳನ್ನು ಹೊಂದಿರುತ್ತದೆ.

ಈ ನಿಟ್ಟಿನಲ್ಲಿ, ಗ್ರೇಟರ್ ಬೆಂಗಳೂರು ಅಥಾರಿಟಿಗೆ ಪರ್ಯಾಯ ಕನ್ನಡ ಪದ ಬಳಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com