ಇಂಗ್ಲಿಷ್ ತಿರಸ್ಕರಿಸಬೇಡಿ, ನಮಸ್ಕರಿಸಿ: ಹಂಸಲೇಖ

ಇಂಗ್ಲಿಷ್ ಭಾಷೆಯನ್ನು ತಿರಸ್ಕಾರ ಮಾಡಬೇಡಿ. ನಮಸ್ಕಾರ ಮಾಡಿ. ನಾನು ಐವತ್ತನೇ ವಯಸ್ಸಿನಲ್ಲಿ ಇಂಗ್ಲಿಷ್ ಕಲಿತೆ. ಇದು ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖಾ ಬಹುಭಾಷಾಪ್ರೇಮ...
ಜಿ.ಎಸ್.ಮುಡಂಡಿತ್ತಾಯ ರಚಿತ ನೆನಪಿನ ಅಂಗಳ ಪುಸ್ತಕವನ್ನು ಸಂಗೀತ ನಿರ್ದೇಶಕ ಹಂಸಲೇಖ, ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಉಪಕುಲಪತಿ ಡಾ.ರಾಮಚಂದ್ರ ಭಟ್ ಕೋಟೆ ಮನೆ
ಜಿ.ಎಸ್.ಮುಡಂಡಿತ್ತಾಯ ರಚಿತ ನೆನಪಿನ ಅಂಗಳ ಪುಸ್ತಕವನ್ನು ಸಂಗೀತ ನಿರ್ದೇಶಕ ಹಂಸಲೇಖ, ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಉಪಕುಲಪತಿ ಡಾ.ರಾಮಚಂದ್ರ ಭಟ್ ಕೋಟೆ ಮನೆ

ಬೆಂಗಳೂರು: ಇಂಗ್ಲಿಷ್ ಭಾಷೆಯನ್ನು ತಿರಸ್ಕಾರ ಮಾಡಬೇಡಿ. ನಮಸ್ಕಾರ ಮಾಡಿ. ನಾನು ಐವತ್ತನೇ ವಯಸ್ಸಿನಲ್ಲಿ ಇಂಗ್ಲಿಷ್ ಕಲಿತೆ. ಇದು ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖಾ ಬಹುಭಾಷಾಪ್ರೇಮ.

ಬಾಲಮೋಹನ ವಿದ್ಯಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಿ.ಎಸ್. ಮುಡಂಬಡಿತ್ತಾಯ ರಚಿತ `ನೆನಪಿನ ಅಂಗಳದಲ್ಲಿ' ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ತಮ್ಮ ನೆನಪುಗಳಿಗೆ ಜಾರಿದರು. ನಾನೂ ಈ ಭಾಷೆ ಬಗ್ಗೆ ನಿಕೃಷ್ಟ ಮನೋಭಾವವನ್ನು ಹೊಂದಿದವನಾಗಿದ್ದೆ. ಬಳಿಕ ನನ್ನ ತಪ್ಪು ತಿಳಿವಳಿಕೆ ಬಗ್ಗೆ ಅರಿವಾಗಿದೆ. ನಾನು ಚಿಕ್ಕವನಾಗಿದ್ದಾಗಿಂದಲೂ ಇಂಗ್ಲಿಷ್ ಅನ್ನು ತಿರಸ್ಕರಿಸುತ್ತಲೇ ಇದ್ದೆ. ಯಾವಾಗ ಶಾಲೆಯನ್ನು ಪ್ರಾರಂಭ ಮಾಡಿದೆನೋ ಆಗ ಮನೋಭಾವನೆ ಬದಲಾಯಿತು ಎಂದು ವಿಮರ್ಶೆ ಮಾಡಿಕೊಂಡರು.

ಲೇಖಕ ಮುಡಂಬಡಿತ್ತಾಯ ಪರಿಚಯವಾದಾಗ ಇಂಗ್ಲಿಷ್ ಭಾಷೆ ಕಲಿಯುವ ಬಗ್ಗೆ ಇರುವ ಅನಿವಾರ್ಯತೆಯ ಅರಿವಾಯಿತು. ಕೊನೆಗೆ ನನ್ನ 50ನೇ ವಯಸ್ಸಿನಲ್ಲಿ ಕಲಿಯಲು ಪ್ರಾರಂಭಿಸಿದೆ. ಶಾಸ್ತ್ರಬದ್ಧವಾಗಿಯೇ ಈ ಭಾಷೆಯನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಉಪಕುಲಪತಿ ಡಾ. ರಾಮಚಂದ್ರ ಭಟ್ ಕೋಟೆಮನೆ ,ಒಬ್ಬ ಮನುಷ್ಯ ಪ್ರಚಾರ, ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು. ಎಲ್ಲಿಯೂ ಸಹ ನಾವು ನಮ್ಮತನವನ್ನು ಕಳೆದುಕೊಳ್ಳಬಾರದು. ಸಂಯಮದಿಂದ ವರ್ತಿಸಬೇಕು ಎಂದು ಹೇಳಿದರು.

ಲೇಖಕ ಮುಡಂಬಡಿತ್ತಾಯ ಮಾತನಾಡಿ, ನನಗೆ ಈ ಪುಸ್ತಕವನ್ನು ಬರೆಯಬೇಕು ಎಂಬ ಹಂಬಲ ಇರಲಿಲ್ಲ. ಎಲ್ಲರ ಒತ್ತಾಯದ ಮೇರೆಗೆ ಬರೆದಿದ್ದೇನೆ. ಇಲ್ಲಿ ಅಧಿಕಾರಿಗಳ ದರ್ಪ, ಸರ್ಕಾರಿ ಇಲಾಖೆಗಳ ದುಸ್ಥಿತಿ ಹಾಗೂ ಎತ್ತಿ ಹಿಡಿಯುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದರು.

ವಾಗ್ದೇವಿ ವಿದ್ಯಾಸಂಸ್ಥೆಯ ಕೆ. ಹರೀಶ್, ಕುರುಬರಹಳ್ಳಿ ಜ್ಲಾನದೀಪ್ತಿ ಶೈಕ್ಷಣಿಕ ದತ್ತಿಯ ನಿರ್ವಾಹಕ ನಿರ್ದೇಶಕ ಸತ್ಯಪ್ರಕಾಶ್ ಎಸ್. ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com