
ನವದೆಹಲಿ: ಐಎಸ್ ಅಧಿಕಾರಿ ಡಿಕೆ ರವಿ ಅವರ ಪ್ರಕರಣ ವಿಶೇಷ ಪ್ರಕರಣವಾದ್ದರಿಂದ ಸಿಬಿಐಗೆ ಷರತ್ತು ವಿಧಿಸಲಾಗಿತ್ತು ಎಂದು ರಾಜ್ಯ ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ.
ರವಿ ಪ್ರಕರಣವನ್ನು ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ತಿರಸ್ಕರಿಸಿರುವ ಸಿಬಿಐ ಇಂದು ಷರತ್ತು ಹಿಂಪಡೆಯದ ಹೊರತು ತನಿಖೆ ಸಾಧ್ಯವಿಲ್ಲ ಎಂದು ಹೇಳಿದೆ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆಯೇ ಸರ್ಕಾರದ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಕಾನೂನು ಸಚಿವ ಟಿಬಿ ಜಯಚಂದ್ರ ಅವರು, ಡಿಕೆ ರವಿ ನಿಗೂಢ ಸಾವು ಪ್ರಕರಣ ವಿಶೇಷ ಪ್ರಕರಣವಾದ್ದರಿಂದ ಸಿಬಿಐ ಅಧಿಕಾರಿಗಳಿಗೆ ಷರತ್ತು ವಿಧಿಸಲಾಗಿತ್ತು. ರವಿ ಪ್ರಕರಣವನ್ನು ವರ್ಷಾನುಗಟ್ಟಲೆ ತನಿಖೆಗೊಳಪಡಿಸುವುದು ಅನಗತ್ಯ. ಹೀಗಾಗಿ 3 ತಿಂಗಳ ಗಡುವು ನೀಡಲಾಗಿತ್ತು ಎಂದು ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಜಯಚಂದ್ರ ಅವರು, "ಡಿಕೆ ರವಿ ಪ್ರಕರಣ ವಿಶೇಷ ಪ್ರಕರಣವಾದ್ದರಿಂದ ಸಿಬಿಐ ಅಧಿಕಾರಿಗಳಿಗೆ 3 ತಿಂಗಳ ಗಡುವು ನೀಡಲಾಗಿತ್ತು. ಅಲ್ಲದೆ ಡಿಕೆ ರವಿ ಪ್ರಕರಣದಲ್ಲಿ ವರ್ಷಾನುಗಟ್ಟಲೆ ತನಿಖೆ ನಡೆಸುವುದು ಅನಗತ್ಯ. ಹೀಗಾಗಿ ಸಿಬಿಐಗೆ ಷರತ್ತು ವಿಧಿಸಲಾಗಿತ್ತು. ಅವಧಿ ಕುರಿತಂತೆ ಸಿಬಿಐ ವಿಸ್ತರಣೆ ಬೇಕು ಎಂದು ಕೇಳಿದರೆ ಆ ಬಗ್ಗೆ ಚಿಂತಿಸಬಹುದು. ಕಾನೂನು ತಜ್ಞರು ಹಾಗೂ ಸಂಪುಟದಲ್ಲಿ ಚರ್ಚಿಸಿ ಸರ್ಕಾರದ ನಿರ್ಧಾವನ್ನು ಪ್ರಕಟಿಸುತ್ತೇವೆ ಎಂದು ಅವರು ಹೇಳಿದರು.
Advertisement