ಪ್ರಭಾಕರ ಕೋರೆಗೆ ಶೋಕಾಸ್ ನೋಟಿಸ್

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬೇಕೆಂದು ವಕಾಲತ್ತು ವಹಿಸಿದ್ದ ಬಿಜೆಪಿ ಸಂಸದ ಪ್ರಭಾಕರ ಕೋರೆಗೆ ರಾಜ್ಯ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ...
ಬಿಜೆಪಿ ಸಂಸದ ಪ್ರಭಾಕರ ಕೋರೆ
ಬಿಜೆಪಿ ಸಂಸದ ಪ್ರಭಾಕರ ಕೋರೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬೇಕೆಂದು ವಕಾಲತ್ತು ವಹಿಸಿದ್ದ ಬಿಜೆಪಿ ಸಂಸದ ಪ್ರಭಾಕರ ಕೋರೆಗೆ ರಾಜ್ಯ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದೇಶದಂತೆಯೇ ಈ ನೋಟಿಸ್ ನೀಡಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮುಂದೆ ಉತ್ತರ ಕರ್ನಾಟಕದ ಸಂಸದರ ನಿಯೋಗದೊಂದಿಗೆ ಕೋರೆ ರಾಜ್ಯದಲ್ಲಿ ಬಿಜೆಪಿಗೆ ಮರಳಿ ಅದಿಕಾರಕ್ಕೆ ತರಲು ಯಡಿಯೂರಪ್ಪ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದರು. ಮತ್ತು ಅದೇ ಧಾಟಿಯಲ್ಲಿ ಮನವಿಯನ್ನು ಸಲ್ಲಿಸಿದ್ದರು.

ಬಹಿರಂಗವಾಗಿಯೇ ಕೋರೆ ಈ ರೀತಿ ಮನವಿ ಸಲ್ಲಿಸಿದ್ದಕ್ಕೆ ಶಾ ಕೋಪಗೊಂಡಿದ್ದರು. ಇದು ಪಕ್ಷದ ಶಿಸ್ತು ಉಲ್ಲಂಘನೆ, ಪಕ್ಷದ ನಿಯಮಗಳನ್ನು ಯಾರೂ ಉಲ್ಲಂಘಿಸಬಾರದು ಎಂಬ ನಿಯಮ ಕೋರೆ ಯವರಿಗೂ ಅನ್ವಯಿಸುತ್ತೆ. ಅಧ್ಯಕ್ಷ ಸ್ಥಾನ ಪಕ್ಷ ನಿರ್ಧರಿಸಲಿದೆ. ಯಾವುದಕ್ಕೂ ಯಾರೂ ಬಹಿರಂಗ ವಾಗಿ ಹೇಳಿಕೆ ನೀಡ ಬಾರದು ಎಂದು ಶಾ ಆದೇಶಿಸಿದ್ದಾರೆ.

ಈ ರೀತಿ ಹೇಳಿಕೆ ನೀಡಿದ್ದಕ್ಕೆ ಕೋರೆಗೆ ಕಾರಣ ಕೇಳಿ ನೋಟಿಸ್ ನೀಡಿ ಎಂದು ರಾಜ್ಯ ಪ್ರಭಾರಿ ಮುರುಳಿಧರ ರಾವ್‍ಗೆ ಶಾ ಸೂಚಿಸಿದ್ದರು. ಅದರಂತೆ ಮಂಗಳವಾರ ಹೈಕಮಾಂಡ್ ಆದೇಶದಂತೆ ರಾವ್ ಕೋರೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್ ರಾಜ್ಯ ಬಿಜೆಪಿಯಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com