ವಾಸ್ತವವನ್ನೇ ಹೇಳಿದ್ದೇನೆ: ಬಿಜೆಪಿಗೆ ಸಿಎಂ ಸವಾಲು

ಕೇಂದ್ರ ಸರ್ಕಾರ ರಾಜ್ಯದ ಅನುದಾನ ಕಡಿತ ಮಾಡಿರುವ ಕುರಿತು ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ. ಬಿಜೆಪಿಯವರು ಬೇಕಾದರೆ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕೇಂದ್ರ ಸರ್ಕಾರ ರಾಜ್ಯದ ಅನುದಾನ ಕಡಿತ ಮಾಡಿರುವ ಕುರಿತು ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ. ಬಿಜೆಪಿಯವರು ಬೇಕಾದರೆ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ವಾಸ್ತವ ಸಂಗತಿ ಹೇಳಿದ್ದೇನೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನೀಡುತ್ತಿ ರುವ ಅನುದಾನ ಕಡಿತ ಮಾಡಲಾಗಿದೆ. ಇದರಿಂದ ಕರ್ನಾಟಕಕ್ಕೆ ರು.4,689 ಕೋಟಿ ಹೊರೆ ಬಿದ್ದಿದೆ. ನರ್ಮದಾ ಯೋಜನೆಗೆ ಅನುದಾನ ಸ್ಥಗಿತಗೊಳಿಸಿದ್ದಾರೆ. ಹಾಗಾದರೆ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಹೇಗೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಐಐಟಿಯನ್ನು ಯಾವ ಜಿಲ್ಲೆಗೆ ಕೊಟ್ಟರೂ ನನ್ನ ಅಭ್ಯಂತರವಿಲ್ಲ. ಐಐಟಿಯನ್ನು ಎಲ್ಲಿ ಸ್ಥಾಪಿಸಬೇಕು ಎಂದು ನಿರ್ಧರಿಸಿಲ್ಲ.ರಾಯಚೂರು, ಹಾಸನ, ಧಾರವಾಡ, ಮೈಸೂರು- ಹೀಗೆ ಹಲವಾರು ಜಿಲ್ಲೆಗಳವರು ಕೇಳಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಯಚೂರಿಗೆ ಕೇಳಿರುವುದು ನಿಜ. ಮುಖ್ಯಮಂತ್ರಿ ಪ್ರತಿನಿಧಿಸುವ ಜಿಲ್ಲೆಗೆ ಐಐಟಿ ನೀಡಬೇಕು ಎಂದೇನೂ ಇಲ್ಲ ನಾನು ಮೈಸೂರಿಗೆ ಮಾತ್ರ ಸಿಎಂ ಅಲ್ಲ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ಹೀಗಾಗಿ ರಾಜ್ಯದ ಎಲ್ಲಿಗೆ ಐಐಟಿ ಕೊಟ್ಟರೂ ಸ್ವಾಗತಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com