ಎಚ್ಚರ! ಸಮೀಕ್ಷೆ ವೇಳೆ ಸುಳ್ಳೇಳಂಗಿಲ್ಲ...

ಮುಂಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾಟಾಚಾರವಾಗಿ ನಡೆಯುತ್ತಿಲ್ಲ. ಸಮೀಕ್ಷೆ ವೇಳೆ ಸಂಗ್ರಹಿಸುವ ಕೆಲವು ಮಾಹಿತಿಯ ಸತ್ಯಾಸತ್ಯತೆ...
ಜಾತಿ ಗಣತಿ
ಜಾತಿ ಗಣತಿ

ಬೆಂಗಳೂರು: ಮುಂಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾಟಾಚಾರವಾಗಿ ನಡೆಯುತ್ತಿಲ್ಲ. ಸಮೀಕ್ಷೆ ವೇಳೆ ಸಂಗ್ರಹಿಸುವ ಕೆಲವು ಮಾಹಿತಿಯ ಸತ್ಯಾಸತ್ಯತೆ
ಪರಾಮರ್ಶೆಯೂ ನಡೆಯುತ್ತದೆ. ಒಂದು ವೇಳೆ ನೀಡಿದ ಮಾಹಿತಿ ಸುಳ್ಳೆಂಬುದು ಗೊತ್ತಾದರೆ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯು ಈಗಾಗಲೇ ಸಾರ್ವಜನಿಕರು ವಿವಿಧ ಸೌಲಭ್ಯ ಬಳಸಿಕೊಳ್ಳಲು ಸರ್ಕಾರ ನೀಡಿದ ಮಾಹಿತಿ ಯನ್ನು ಕ್ರೋಡಿsಕರಿಸಿದೆ. ಹಾಗೆಯೇ ಮುಂದೆ ಈ ಸಮೀಕ್ಷೆ ನಡೆದ ನಂತರ ಸಂಗ್ರಹವಾಗುವ ಮಾಹಿತಿಯನ್ನು ವಿವಿಧ ಇಲಾಖೆಗೂ ಕಳುಹಿಸಲಾಗುತ್ತದೆ. ಈ ಸಂಗತಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೇ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಗ್ರಹಿಸಿದ ಮಾಹಿತಿಯ ಸಾಮ್ಯತೆ ನೋಡಲಾಗುತ್ತದೆ ಎಂದರು.



ಪ್ರಚಾರಕ್ಕೆ ಹಂಸಲೇಖ ಹಾಡು
ಸಮೀಕ್ಷೆಯ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿಯೇ  ಬೇರೆ ಬೇರೆ ತಂತ್ರ ರೂಪಿಸಲಾಗಿದೆ. ಈ ಪೈಕಿ ಹಂಸಲೇಖ ರಚಿಸಿ, ನಿರ್ದೇಶಿಸಿ ಚಿತ್ರಿಸಿರುವ ಹಾಡುಕೂಡ
ಒಂದು. ಈ ಹಾಡುಗಳನ್ನು ಸಚಿವ ಆಂಜನೇಯ ಗುರುವಾರ ಬಿಡುಗಡೆಗೊಳಿಸಿದರು. ಜಾತಿ ಗಣತಿ ಏಕೆ ಬೇಕು ಮತ್ತು ಅದರಿಂದಾಗುವ ಉಪಯೋಗದ ಕುರಿತಾಗಿ
ರಚಿತವಾಗಿರುವ ಸಣ್ಣ ಹಾಡು ಗಮನ ಸೆಳೆಯುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆಂಜನೇಯ ಅವರು ಹಾಡಿನ ವಿಡಿಯೋ  ತುಣುಕಿನಲ್ಲಿ ಬಂದುಹೋಗುತ್ತಾರೆ.
ಹಾಡಿನ ಕೊನೆಯಲ್ಲಿ ಸಿದ್ದರಾಮಯ್ಯನವರು ಪ್ರಾಸಭರಿತ ಜಾಗೃತಿ ವಾಕ್ಯಗಳೂ ಕೇಳಿಬರುತ್ತವೆ. ಹೀಗ ರಚಿತವಾದ ಹಾಡುಗಳನ್ನು ದೃಷ್ಯ-ಶ್ರವಣ ಮಾಧ್ಯಮದ
ಮೂಲಕ ಪ್ರತಿ ಜಿಲ್ಲೆಯಲ್ಲಿಯೂ ಪ್ರಸಾರ ಮಾಡಲಾಗುತ್ತದೆ.

ಯಾವೆಲ್ಲಾ ಇಲಾಖೆಯೊಂದಿಗೆ ತಾಳೆ
1. ಚುನಾವಣಾ ಗುರುತಿನ ಚೀಟಿಯೊಂದಿಗೆ
2. ಶಿಕ್ಷಣ ಇಲಾಖೆ ಪ್ರತಿ ವರ್ಷ ಡಿಸೆಂಬರ್‍ನಲ್ಲಿ ಸಂಗ್ರಹಿಸುವಶಾಲೆ ಬಿಟ್ಟ ಮಕ್ಕಳ ದತ್ತಾಂಶದೊಂದಿಗೆ
3. ಕಂದಾಯ ಇಲಾಖೆಯ `ಭೂಮಿ' ದಾಖಲೆಯೊಂದಿಗೆ
4. ಆಹಾರ ಇಲಾಖೆಯ ಪಡಿತರ ಚೀಟಿ ದಾಖಲೆಯೊಂದಿಗೆ
5. ಸ್ಥಳೀಯ ಸಂಸ್ಥೆಗಳ ವಾಣಿಜ್ಯ ಮಳಿಗೆ ವ್ಯಾಪಾರ ವಹಿವಾಟು(ಅಂಗಡಿ ಮುಂಗಟ್ಟು ಮಾಹಿತಿ) ದಾಖಲೆಯೊಂದಿಗೆ

6. ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಸುಳ್ಳು ಪತ್ತೆಯಾದರೆ?
ಪ್ರಮುಖವಾಗಿ ಪಡಿತರ ಚೀಟಿ, ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆಗಳ ವ್ಯಾಪಾರ ವಹಿವಾಟು ಅನುಮತಿ, ವಾಣಿಜ್ಯ ತೆರಿಗೆ ಇಲಾಖೆಗೆ ಸಂಬಂ„ಸಿದಂತೆ ಕೆಲವು ಪ್ರಶ್ನೆಗಳು
ಸಮೀಕ್ಷೆಯಲ್ಲಿದೆ. ಅಲ್ಲಿ ಒಂದು ಮಾಹಿತಿ ನೀಡಿ, ನೈಜ ಮಾಹಿತಿ ಬೇರೆಯೇ ಇದ್ದರೆ ಸರ್ಕಾರಕ್ಕೆ ವಂಚನೆಯ ಪರಿಣಾಮ ಮತ್ತು ಪ್ರಮಾಣ ತಿಳಿದುಹೋಗುತ್ತದೆ. ಸಮಸ್ಯೆ
ಪರಿಹಾರಕ್ಕೂ ಅನುಕೂಲವಾಗುತ್ತದೆ.
ಇನ್ನು ಶಿಕ್ಷಣ ಇಲಾಖೆಯು ಪ್ರತಿ ವರ್ಷ ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಮಾಡಲು ದೊಡ್ಡ ಆಂದೋಲನವನ್ನೇ ನಡೆಸಿ ದಾಖಲೆಗಳ ಸಂಗ್ರಹ ಮಾಡುತ್ತದೆ. ಇದೀಗ ಶಾಲೆ ಬಿಟ್ಟ
ಮಕ್ಕಳ ನೈಜ ಚಿತ್ರಣ ಸಮೀಕ್ಷೆಯಲ್ಲಾಗಲಿದೆ. ಪ್ರತಿ ಪಡಿತರ ಚೀಟಿಯಲ್ಲಿ ಎಷ್ಟು ಸದಸ್ಯರಿದ್ದಾರೆ, ಅವರು ಪಡೆಯುತ್ತಿರುವ ಪಡಿತರ ಎಷ್ಟು, ಅವರ ಮನೆಯಲ್ಲಿ ಅಡುಗೆ
ಅನಿಲ ಇದೆಯೋ ಇಲ್ಲವೋ ಎಂಬುದೂ ಸಹ ಸಮೀಕ್ಷೆ ವೇಳೆ ದಾಖಲಾಗುತ್ತದೆ. ಹೀಗಾಗಿ ಆಹಾರ ಮತ್ತು ಪಡಿತರ ಇಲಾಖೆಗೂ ಒಂದಷ್ಟು ಸಹಕಾರಿಯಾಗುವುದು ದಿಟ.



ಜಾತಿ ಗಣತಿ ಅರ್ಜಿ ನಮೂನೆ ಹೇಗಿರುತ್ತೆ ಗೊತ್ತಾ ನಿಮಗೆ?

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಣತಿಯಲ್ಲಿ 55 ಪ್ರಶ್ನೆಗಳು ಅಥವಾ ಕಾಲಂಗಳು ಇರಲಿವೆ. ಇವುಗಳಿಗೆ ಕುಟುಂಬದ ಸದಸ್ಯರು ಮಾಹಿತಿ ನೀಡಬೇಕು. ಎಲ್ಲದ್ದಕ್ಕೂ ಕಡ್ಡಾಯವಾಗಿ ಮಾಹಿತಿ ನೀಡಬೇಕೆಂದೇನೂ ಇಲ್ಲ. ಆದರೆ, ಪ್ರಮುಖ ಪ್ರಶ್ನೆಗಳಿಗೆ ಮಾಹಿತಿ ನೀಡುವುದು ಅಗತ್ಯ. ಜಾತಿಗಣತಿಯ ಅರ್ಜಿ ನಮೂನೆ ಈ ರೀತಿ ಇರಲಿದೆ.
ಪ್ರಥಮವಾಗಿ- ಜಿಲ್ಲೆಯ ಹೆಸರು, ತಾಲೂಕು ಹೆಸರು, ಗ್ರಾಮ/ಪಟ್ಟಣ/ನಗರದ ಹೆಸರು, ಕುಟುಂಬದ ಕ್ರಮ ಸಂಖ್ಯೆ, ಜನಗಣತಿ ಮನೆ ಸಂಖ್ಯೆ, ಜಿಲ್ಲೆಯ ಸಂಕೇತ ಸಂಖ್ಯೆ, ತಾಲೂಕು ಸಂಕೇತ ಸಂಖ್ಯೆ, ಗ್ರಾಮ/ಪಟ್ಟಣ/ನಗರದ ಸಂಕೇತ ಸಂಖ್ಯೆ, ಗಣತಿ ಬ್ಲಾಕ್ ಸಂಖ್ಯೆ, ಉಪ ಬ್ಲಾಕ್ ಸಂಖ್ಯೆಯನ್ನು ಮೊದಲು ನಮೂದಿಸಲಾಗುತ್ತದೆ.
ನಂತರ ಅಂಚೆ ವಿಳಾಸ, ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆ, ಮಜರೆ ಗ್ರಾಮದ ಹೆಸರು, ವಾರ್ಡ್ ಸಂಖ್ಯೆ ದಾಖಲಿಸಲಾಗುತ್ತದೆ. ಈ ಅನುಬಂಧದಲ್ಲಿ ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರ ವೈಯಕ್ತಿಕ ವಿವರ ದಾಖಲಿಸಲಾಗುತ್ತದೆ. ಕುಟುಂಬದ ಎಲ್ಲ ಸದಸ್ಯರ ಮಾಹಿತಿಯನ್ನು ಕ್ರಮಸಂಖ್ಯೆಗನುಗುಣವಾಗಿ ದಾಖಲಿಸಲಾಗುತ್ತದೆ.



ಹೀಗಿರುತ್ತವೆ ಕಾಲಂಗಳು
1. ಕ್ರಮಸಂಖ್ಯೆ
2. ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರ ಹೆಸರು
3. ಕುಟುಂಬದ ಮುಖ್ಯಸ್ಥರೊಂದಿಗಿನ ಸದಸ್ಯರ ಸಂಬಂಧ
4. ಲಿಂಗ (ಗಂಡು-1, ಹೆಣ್ಣು-2, ತೃತೀಯ ಲಿಂಗ-3)
5. ಧರ್ಮ
6. ಜಾತಿ
7. ಉಪ ಜಾತಿ
8. ಜಾತಿಗೆ ಇರುವ ಇನ್ನಿತರೆ ಪರ್ಯಾಯ ಹೆಸರುಗಳು
(ಗರಿಷ್ಠ 3)
9. ಪೂರ್ಣಗೊಂಡ ವಯಸ್ಸು (ವರ್ಷಗಳಲ್ಲಿ)
10. ಮಾತೃಭಾಷೆ
11. ಆಧಾರ್ ಕಾರ್ಡ್ ಸಂಖ್ಯೆ(ಪಡೆದಿದ್ದಲ್ಲಿ)
12. ಚುನಾವಣಾ ಆಯೋಗದ ಗುರುತಿನ ಚೀಟಿ ಸಂಖ್ಯೆ
(ಪಡೆದಿದ್ದಲ್ಲಿ)
13. ಅಂಗವಿಕಲರೇ?
ಕುಟುಂಬದ ಅನುಸೂಚಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರಿನೊಂದಿಗೆ ಆರಂಭವಾಗುತ್ತದೆ. ಪ್ರಶ್ನೆ 14ರಿಂದ 23ನೇ ಪ್ರಶ್ನೆಗಳಿಗೆ ಸಂಬಂಧಿಸಿದ ವಿವಾಹ- ಶೈಕ್ಷಣಿಕ ಮಾಹಿತಿಗಳ ದಾಖಲೆಗಳ ಕ್ರೋಡೀಕರಣವಾಗುತ್ತದೆ.
14. ವೈವಾಹಿಕ ಸ್ಥಾನಮಾನ
15. ವಿವಾಹವಾದ ಸಮಯದಲ್ಲಿ ವಯಸ್ಸು
16. ಶಾಲೆಗೆ ಸೇರಿದ ಸಮಯದಲ್ಲಿ ವಯಸ್ಸು
17. ಶಾಲೆಯ ವಿಧ
18. ವಿದ್ಯಾಭ್ಯಾಸದ ವಿವರ (ಗರಿಷ್ಠ ವಿದ್ಯಾರ್ಹತೆ)
ಶಾಲೆ ಬಿಟ್ಟಿದ್ದರೆ ವಿವರಗಳು
(6ರಿಂದ 16 ವರ್ಷದವರಿಗೆ ಮಾತ್ರ)
19. ಶಾಲೆ ಬಿಟ್ಟಾಗಿನ ತರಗತಿ
20. ಶಾಲೆ ಬಿಟ್ಟಾಗಿನ ವಯಸ್ಸು
21. ಶಾಲೆ ಬಿಡಲು ಕಾರಣ?
22. 17ರಿಂದ 40 ವರ್ಷದವರು ಶಿಕ್ಷಣ
ಮುಂದುವರಿಸದಿರಲು ಕಾರಣ?
23. ಅನಕ್ಷರಸ್ಥರಾಗಿದ್ದರೆ ಕಾರಣ ಮುಂದುವರಿದ ಕುಟುಂಬದ ಅನುಸೂಚಿಯಲ್ಲಿ ಉದ್ಯೋಗ, ವರಮಾನ, ಕಸುಬು, ಕಸುಬಿನಿಂದಾದ
ಕಾಯಿಲೆ ಬಗ್ಗೆ ದಾಖಲಿಸಬೇಕಾದ ಅಂಶ
24. ನೀವು ಹಾಲಿ ಕೆಲಸ ಮಾಡುತ್ತಿದ್ದೀರಾ?
25. ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಸೇವೆ/ ಉದ್ಯೋಗ/ವ್ಯಾಪಾರ (ಮಾಸಿಕ ವೇತನದ ಮೇಲೆ)
26. ನೀವು ತೊಡಗಿರುವ ಹಾಲಿ ಉದ್ಯೋಗ/ವ್ಯಾಪಾರ (ಸ್ವಯಂ ಉದ್ಯೋಗ) ಯಾವುದು?
27. ನಿಮ್ಮ ಕುಟುಂಬದ ಕುಲ ಕಸುಬು ಯಾವುದು?
28. ಸದರಿ ಕಸುಬು ಮುಂದುವರಿದಿದೆಯೇ ?
(ಹೌದು-1, ಇಲ್ಲ-2)
29. ಸದರಿ ಕಸುಬಿನಿಂದ ಕಾಯಿಲೆಗಳು
30. ಅಸಂಘಟಿತ ಕ್ಷೇತ್ರದಲ್ಲಿಯ ದಿನಗೂಲಿ ಕೆಲಸಗಾರರು
31. ವಾರ್ಷಿಕ ಆದಾಯ
32. ಆದಾಯ ತೆರಿಗೆ ಪಾವತಿದಾರರೇ?
(ಹೌದು-1, ಇಲ್ಲ-2)
33. ನೀವು ಬ್ಯಾಂಕ್ ಖಾತೆ ಹೊಂದಿದ್ದೀರಾ
(ಹೌದು-1, ಇಲ್ಲ-2)
ಅನುಬಂಧದ ಪ್ರಶ್ನೆ 34ರಿಂದ 39ರವರೆಗೆ ಮೀಸಲಿನಿಂದ ಪಡೆದಿರುವ ಸೌಲಭ್ಯಗಳ ಮಾಹಿತಿ ದಾಖಲಿಸಲಾಗುತ್ತದೆ.
ಪ್ರಮುಖವಾಗಿ ಶೈಕ್ಷಣಿಕ, ಉದ್ಯೋಗ, ರಾಜಕೀಯ ಮಾಹಿತಿಗಳ ಕ್ರೋಡೀಕರಣವಾಗುತ್ತದೆ.
34. ಶೈಕ್ಷಣಿಕ ಸೌಲಭ್ಯಗಳು (ಮೀಸಲು ನೀತಿಯಿಂದ ಪಡೆದಿರುವ ಸೌಲಭ್ಯಗಳು)
35. ಉದ್ಯೋಗ ಸೌಲಭ್ಯಗಳು (ಮೀಸಲು ನೀತಿಯಿಂದ ಪಡೆದಿರುವ ಸೌಲಭ್ಯಗಳು)
36. ನೀವು ಜಾತಿ ಪ್ರಮಾಣ ಪತ್ರ ಪಡೆದಿರುತ್ತೀರಾ?
(ಹೌದು-1, ಇಲ್ಲ-2)
37. ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ್ದೀರಾ?
(ಹೌದು-1, ಇಲ್ಲ-2)
38. ಜನಪ್ರತಿನಿಧಿಗಳಾಗಿದ್ದಲ್ಲಿ/ ಪದಾಧಿಕಾರಿಯಾಗಿದ್ದಲ್ಲಿ ವಿವರ (ರಾಜಕೀಯ ಪ್ರಾತಿನಿಧ್ಯ)
39. ನಿಗಮ-ಮಂಡಳಿ ಸಹಕಾರಿ ಸಂಘ/ಸರ್ಕಾರೇತರ ಸಂಸ್ಥೆಗಳಲ್ಲಿ ಸದಸ್ಯ/ಪದಾಧಿಕಾರಿಯಾಗಿದ್ದಲ್ಲಿ ವಿವರಗಳು (ರಾಜಕೀಯ ಪ್ರಾತಿನಿಧ್ಯ) ಅನುಸೂಚಿಯಲ್ಲಿ ಪ್ರಶ್ನೆ 40ರಿಂದ 55ರವರೆಗೆ ಕೌಟುಂಬಿಕ ಆಸ್ತಿ, ಮನೆಯ ಸ್ಥಿತಿಗತಿ ಮಾಹಿತಿಯ ಕ್ರೋಡೀಕರಣವಾಗುತ್ತದೆ.
40. ಕುಟುಂಬದ ಹೊಂದಿರುವ ಒಟ್ಟು ಜಮೀನು (ಕುಟುಂಬದ ಎಲ್ಲ ಸದಸ್ಯರಿಗೆ ಸೇರಿದಂತೆ)
ಎ.ಖುಷ್ಕಿ ಎಷ್ಟು? ಬಿ. ತರಿ ಎಷ್ಟು? ಸಿ. ಭಾಗಾಯ್ತು ಎಷ್ಟು? ಡಿ. ಪ್ಲಾಂಟೇಷನ್ ಎಷ್ಟು ? ಇ.ಇತರೆ ಎಷ್ಟು?
.ಒಟ್ಟೆಷ್ಟು?
ಸ್ವಾಧೀನದ ರೀತಿ ವಿಸ್ತೀರ್ಣ: III ಎಕರೆ  ಗುಂಟೆ, ಸೆಂಟ್ಸ್.
ನೀರಾವರಿಯ ಮೂಲ  ಪ್ರಮುಖ ಬೆಳೆಗಳು
41. ಕುಟುಂಬ ಸಾಲ?
ಅ ಉದ್ದೇಶ ಆ ಮೂಲ
42. ಕೃಷಿ ಸಂಬಂಧಿತ ಚಟುವಟಿಕೆಗಳು?
43. ಕುಟುಂಬ ಹೊಂದಿರುವ ಜಾನುವಾರುಗಳು?
ಎ.ಹಸು, ಎತ್ತು, ಎಮ್ಮೆ, ಕೋಣ;
ಬಿ.ಕುರಿ, ಆಡು/ಮೇಕೆ;
ಸಿ. ಕೋಳಿ, ಬಾತುಕೋಳಿ;
ಡಿ. ಹಂದಿ
44. ಕುಟುಂಬವು ಹೊಂದಿರುವ ಸ್ಥಿರಾಸ್ತಿ? (ಕುಟುಂಬದ ಎಲ್ಲ ಸದಸ್ಯರಿಗೆ ಸೇರಿದಂತೆ) (ಸಂಕೇತಗಳಲ್ಲಿ ನಮೂದು)
45. ಕುಟುಂಬವು ಹೊಂದಿರುವ ಚರಾಸ್ತಿ? (ಕುಟುಂಬದ ಎಲ್ಲ ಸದಸ್ಯರಿಗೆ ಸೇರಿದಂತೆ) (ಸಂಕೇತಗಳ ನಮೂದು)
46. ಕುಟುಂಬವು ಸರ್ಕಾರದಿಂದ ಪಡೆದ ಸವಲತ್ತುಗಳು (ಕುಟುಂಬದ ಎಲ್ಲ ಸದಸ್ಯರಿಗೆ ಸೇರಿದಂತೆ) (ಸಂಕೇತ
ನಮೂದು)
47. ಪಡಿತರ ಚೀಟಿ ಸಂಖ್ಯೆ
48. ನೀವು ನೆಲೆಸಿರುವ ಸ್ಥಳ ಎಂತಹುದು?
49. ಹಾಲಿ ವಾಸವಿರುವ ಮನೆಯ ಮಾಲೀಕತ್ವದ ಸ್ವರೂಪ
50. ವಾಸವಿರುವ ಮನೆ ವಿಧ ಹಾಗೂ ಉಪಯೋಗ
51. ನಿವೇಶನ ಹೊಂದಿದ್ದೀರಾ?
52. ಕುಡಿಯುವ ನೀರಿನ ಮೂಲ
53. ಶೌಚಾಲಯ ವ್ಯವಸ್ಥೆ
54. ಅಡುಗೆಗೆ ಬಳಸುವ ಪ್ರಮುಖ ಇಂಧನ?
55. ದೀಪದ ಮೂಲ
ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ `ಜಾತಿ ಗಣತಿ' ನಾಳೆಯಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಸರ್ಕಾರಿ ಸೌಲಭ್ಯಗಳು, ಯೋ ಜನೆಗಳು ಅರ್ಹರಿಗೆ ದೊರೆಯಲಿ ಎಂಬುದು
ಸಮೀಕ್ಷೆಯ ಹಿಂದಿರುವ ಸರ್ಕಾರದ ಕಾಳಜಿ. ಇದು ಯಶಸ್ವಿಯಾಗಬೇಕಿದ್ದರೆ ಜನರು ಸರಿಯಾದ, ಸೂಕ್ತ ಹಾಗೂ ಸತ್ಯವಾದ ಮಾಹಿತಿಯನ್ನು ನೀಡಬೇಕಾದದ್ದು ಅಗತ್ಯ. ನಿಮ್ಮ ನಿಮ್ಮ ಮನೆಗಳ ಬಾಗಿಲಿಗೆ ಬರುವ ಗಣತಿದಾರರಿಗೆ ಸೂಕ್ತವಾದ ಮಾಹಿತಿಯನ್ನೇ ನೀಡಿ. ತಪ್ಪಾದ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಆಸ್ಪದ ನೀಡಬೇಡಿ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com