
ಹುಬ್ಬಳ್ಳಿ: ನಂಜುಂಡಪ್ಪ ವರದಿಗೆ ಎಂಟು ವರ್ಷವಾಗಿದ್ದು, ಅದನ್ನು ಪುನಃ ಪರಾಮರ್ಶನ ವರದಿ ಸಿದ್ಧಪಡಿಸುವಂತೆ ಧಾರವಾಡದ ಸಿಎಂಡಿಆರ್ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ, ದಿ.ಎಸ್.ಆರ್. ಬೊಮ್ಮಾಯಿ ಪ್ರತಿಮೆ ಅನಾವರಣ ಹಾಗೂ ಸಾಂಸ್ಕೃತಿಕ ಭವನ ಲೋಕಾರ್ಪಣೆ ಮಾಡಿದ ಅವರು, ಜಿಲ್ಲಾವಾರು ಪ್ರಾತಿನಿಧ್ಯ ನೀಡುವ ಕುರಿತು ಮಾನವ ಅಭಿವೃದ್ಧಿ ಸೂಚ್ಯಂಕದ ವರದಿ ಸಿದ್ಧವಾಗುತ್ತಿದೆ. ಆ ಬಳಿಕ ಯಾವ ಜಿಲ್ಲೆಯ ಅಬಿsವೃದಿಟಛಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಚಿಂತಿಸಲಾಗುವುದು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಿಲ್ಲ ಎನ್ನುವುದಾದರೆ ಸೂಕ್ತ ವೇದಿಕೆಯಲ್ಲಿ ಚರ್ಚೆ ನಡೆಸೋಣ, ಅಭಿವೃದ್ಧಿಗೆ ಯೋಜನೆ ರೂಪಿಸೋಣ. ಅದನ್ನು ಬಿಟ್ಟು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಬಾಲಿಶತನದ ಹೇಳಿಕೆ ಏಕೆ? ಯಾರೇ ಆದರೂ ರಾಜ್ಯ ಒಡೆಯುವ ಮಾತನಾಡುವುದು ಬೇಡ. ಕೆಲವರು ರಾಜಕೀಯ ಸ್ವಾರ್ಥಕ್ಕಾಗಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿದ್ದಾರೆ. ಇವರಲ್ಲಿ ತಾತ್ವಿಕ ವಿಚಾರ ಅಥವಾ ಜನಪರ ನಿಲುವು ಇಲ್ಲ. ಅಖಂಡ ಕರ್ನಾಟಕಕ್ಕಾಗಿ ಮುಂಚೂಣಿಯಲ್ಲಿದ್ದ ಹೋರಾಟ ಮಾಡಿದ ಮುಖಂಡರ ತವರಲ್ಲೇ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿರುವುದು ಬೇಸರದ ಸಂಗತಿ. ಯಾರು ಏನೇ ಹೇಳಿದರೂ ಕರ್ನಾಟಕ ಅಖಂಡವಾಗಿರುತ್ತದೆ. ಇದನ್ನು ಇಬ್ಭಾಗ ಮಾಡಲು ಬಿಡುವುದಿಲ್ಲ ಎಂದರು.
ಸುಳ್ಳು ಆರೋಪ ನಿಲ್ಲಿಸಲಿ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ರಾಜಕೀಯ ಸ್ವಾರ್ಥ ಸಾಧನೆಗೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಲಿ. ಅವರು ಹೋದಲ್ಲೆಲ್ಲ ಮಾಡುತ್ತಿರುವ ನಿರಾಧಾರ ಆರೋಪಗಳಿಗೆ ಬಜೆಟ್ ಅಧಿವೇಶನದಲ್ಲಿ ತಕ್ಕ ಉತ್ತರ ನೀಡಿದ್ದೇನೆ. ಆಗ ಸುಮ್ಮನಿದ್ದು, ಇದೀಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೆರಿಗೆ ಸಂಗ್ರಹದಲ್ಲಿ ರಾಜ್ಯ ಹಿಂದಿದೆ ಎಂದು ಶೆಟ್ಟರ್ ಆರೋಪಿಸಿದ್ದಾರೆ. ಆದರೆ ಕರ್ನಾಟಕ ದಕ್ಷಿಣ ಭಾರತದಲ್ಲಿಯೇ ತೆರಿಗೆ ಸಂಗ್ರಹದಲ್ಲಿ ನಂಬರ್ 1 ರಾಜ್ಯ ಎನಿಸಿದೆ. 14ನೇ ಹಣಕಾಸು ಯೋಜನೆಯಲ್ಲಿ ನಾನಾ ವಲಯಗಳಿಗೆ ರಾಜ್ಯಕ್ಕೆ ರು.8320 ಕೋಟಿ ಕಡಿಮೆ ಹಣ ಬಂದಿದೆ. ಈ ಸಂಗತಿಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಾಗ ಸುಮ್ಮನಿದ್ದ ಶೆಟ್ಟರ್, ಈಗ ಕೇಂದ್ರ ಹೆಚ್ಚಿನ
ಅನುದಾನ ನೀಡಿದೆ ಎನ್ನುತ್ತಿದ್ದಾರೆ. ಅಲ್ಲದೆ, ತಮ್ಮ ಸರ್ಕಾರದ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದಾರೆಂದು ಲೇವಡಿ ಮಾಡಿದ್ದಾರೆ. ಅಭಿವೃದ್ಧಿ
ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಸರ್ಕಾರ ಬದಲಾದರೇನು? ಉದ್ಘಾಟನೆ ಮಾಡಬಾರದೇ? ಎಂದು ಮರು ಪ್ರಶ್ನಿಸಿದರು.
Advertisement