ಖೋಟಾನೋಟು ನಿಲ್ಲದ ಹಾವಳಿ

ಅಂತಾರಾಷ್ಟ್ರೀಯ ಮಟ್ಟದ ಖೋಟಾ ನೋಟು ಚಲಾವಣೆ ಜಾಲವನ್ನು ಪತ್ತೆ ಹಚ್ಚಿರುವ ನಗರ ಸಿಸಿಬಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವ ಮೂಲಕ ರು.500ಮುಖಬೆಲೆಯ ರು.11.50 ಲಕ್ಷ ಮೌಲ್ಯದ ಖೋಟಾ...
ಖೋಟಾನೋಟು ನಿಲ್ಲದ ಹಾವಳಿ
ಖೋಟಾನೋಟು ನಿಲ್ಲದ ಹಾವಳಿ

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಖೋಟಾ ನೋಟು ಚಲಾವಣೆ ಜಾಲವನ್ನು ಪತ್ತೆ ಹಚ್ಚಿರುವ ನಗರ ಸಿಸಿಬಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವ ಮೂಲಕ ರು.500ಮುಖಬೆಲೆಯ ರು.11.50 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಒಂದು ವಾರದಲ್ಲೇ ಎರಡನೇ ಪ್ರಕರಣ ಬಯಲಿಗೆ ಬಂದಿದೆ. ಬೃಹತ್ ಪ್ರಮಾಣದ ಈ ಜಾಲದಲ್ಲಿ ನಗರದ ಈಜಿಪುರ ನಿವಾಸಿ ಸಮೀರ್( 25), ಚಿಕ್ಕಬಳ್ಳಾಪುರದ ಸೈಯದ್( 24), ಮೀರ್ ಅಬ್ದುಲ್ (23) ಬಂಧಿತರು. ಬುಧವಾರ ರಾತ್ರಿ ಈಜಿಪುರದಲ್ಲಿ ನಿವಾಸವೊಂದರ ಮೇಲೆ ದಾಳಿ ನಡೆಸಿ ಇವರನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ರುಪಾಯಿ ಖೋಟಾ ನೋಟು ದಂಧೆಯನ್ನು ಆರೋಪಿಗಳು ಪಾಕಿಸ್ತಾನದಿಂದ ಥಾಯ್ಲೆಂಡ್ ಮೂಲಕ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿರುವುದು ವಿಚಾರಣೆಯಲ್ಲಿ ಬಯಲಾಗಿದೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು, ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ಈಜಿಪುರ 19ನೇ ಕ್ರಾಸ್ನಲ್ಲಿರುವ ಆರೋಪಿ ಶಮೀರ್ ನಿವಾಸದ ಮೇಲೆ ದಾಳಿ ಮಾಡಿದಾಗ ಮೂವರು ಖೋಟಾ ನೋಟುಗಳ ಎಣಿಕೆಯಲ್ಲಿ ನಿರತರಾಗಿದ್ದರು.

ಮಹಡಿಯಿಂದಲೇ ಹಾರಿದ: ಆರೋಪಿ ಸಮೀರ್ ತಪ್ಪಿಸಿಕೊಳ್ಳಲು ತಾನು ವಾಸವಿದ್ದ ಮನೆಯ 2ನೇ ಮಹಡಿಯಿಂದಲೇ ರಸ್ತೆಗೆ ಜಿಗಿದ್ದಿದ್ದಾನೆ. ಅಲ್ಲಿಂದ ಜಿಗಿದ ರಭಸಕ್ಕೆ ಆತನ ಬಲಗಾಲಿಗೆ ತೀವ್ರ ಪೆಟ್ಟಾಗಿದೆ. ಅಲ್ಲಿಂದ ಎದ್ದು ಓಡಲಾಗದೆ, ಬಿದ್ದು ಒದ್ದಾಡುತ್ತಿದ್ದಾಗ ಪೊಲೀಸರು, ಆತನನ್ನು ಬಂಧಿಸಿ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ನಂತರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com