
ಬೆಂಗಳೂರು: ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಾಯಕ ನಟಿಯಾಗಿ ಹೆಸರು ಮಾಡಿ ಹಲವು ದಿನಗಳಿಂದ ಬಣ್ಣದ ಲೋಕದಿಂದ ಬಹುತೇಕ ನೇಪಥ್ಯಕ್ಕೆ ಸರಿದಿದ್ದಾರೆನ್ನಲಾಗುತ್ತಿದ್ದ ನಟಿ ಪ್ರೇಮಾ ಇದೀಗ ಬಿಬಿಎಂಪಿ ಚುನಾವಣೆ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಲೆಗೆ ಇಂತಹ ವೇದಿಕೆ ಬೇಕು ಎಂಬ ಯಾವುದೇ ನಿಯಂತ್ರಣ ಇಲ್ಲ ಎಂಬ ಸಂದೇಶ ಸಾರುವ ಮೂಲಕ ಇತ್ತೀಚೆಗಷ್ಟೇ ಸೀರೆಯೊಂದರ ರೂಪದರ್ಶಿಯಾಗುವ ಮೂಲಕ ಮಾಡೆಲ್ ಲೋಕಕ್ಕೆ ಕಾಲಿಟ್ಟಿದ್ದ ನಟಿ ಪ್ರೇಮಾ ಇದೀಗ ಬಿಬಿಎಂಪಿ ಚುನಾವಣೆ ಸ್ಪರ್ಧೆ ಮಾಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.
ಚಿತ್ರರಂಗಕ್ಕೂ ರಾಜಕೀಯಕ್ಕೂ ಬಹುತೇಕ ನಂಟಿರುವ ಹಲವು ಉದಾಹರಣೆಗಳನ್ನು ನಾವು ಕಾಣಬಹುದು. ನಟಿ ರಮ್ಯಾ, ಅಂಬರೀಷ್, ಮುಖ್ಯಮಂತ್ರಿ ಚಂದ್ರು ರಂತಹ ಅನೇಕ ವ್ಯಕ್ತಿಗಳು ಈಗಾಗಲೇ ರಾಜಕೀಯ ರಂಗಕ್ಕೆ ಧುಮುಕಿ ಸಮಾಜ ಸೇವೆ ಮಾಡುತ್ತಿರುವ ನಡುವೆಯೇ ನಟಿ ಪ್ರೇಮಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಮೂಲಗಳ ಪ್ರಕಾರ ನಟಿ ಪ್ರೇಮಾ ಅಗ್ರಹಾರ ದಾಸರಹಳ್ಳಿ ಅಥವಾ ಡಾ.ರಾಜ್ ಕುಮಾರ್ ವಾರ್ಡ್ ಗಳಲ್ಲಿ ಚುನಾವಣಾ ಸ್ಪರ್ಧೆಗಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement