
ಬೆಂಗಳೂರು: ಕೆಎಎಸ್ 2011ನೇ ಸಾಲಿನ ಪರೀ ಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಕೆಪಿಎಸ್‍ಸಿಯ 8 ಸದಸ್ಯರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಅಕ್ರಮಗಳಲ್ಲಿ ಭಾಗಿಯಾಗಿರುವ 3 ನಿವೃತ್ತ ಹಾಗೂ 5 ಹಾಲಿ ಕೆಪಿಎಸ್‍ಸಿ ಸದಸ್ಯರ ಮೇಲೆ ಕ್ರಮ ಕೈಗೊಳ್ಳಲು ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ನೇಮಕ ಅವ್ಯವಹಾರ ಸ್ಪಷ್ಟವಾಗಿದ್ದರೂ, ಸರ್ಕಾರ ಇದುವರೆಗೂ ಅಧಿಕಾರಿಗಳ ಮೇಲೆ ತನಿಖೆಗೆ ಮುಂದಾಗಿರಲಿಲ್ಲ. ಇದೀಗ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಸತ್ಯಾಂಶ ಬಹಿರಂಗಕ್ಕೆ ಸಂಪುಟ ನಿರ್ಧರಿಸಿದೆ.
ಯಾರ್ ಯಾರ ಮೇಲೆ ಕ್ರಮ? ನಿವೃತ್ತ ಸದಸ್ಯರಾದ ಡಾ.ಬಿ.ಎಸ್ ಕೃಷ್ಣಪ್ರಸಾದ್, ಕನ್ನಿ ರಾಮ್, ಎಲ್.ಎನ್.ರಾಮಕೃಷ್ಣ, ಹಾಲಿ ಸದಸ್ಯ ರಾದ ಎಸ್.ಆರ್.ರಂಗಮೂರ್ತಿ, ಡಾ.ಎನ್.ಮಹದೇವ್, ಡಾ.ಎಚ್.ವಿ.ಪಾಶ್ರ್ವನಾಥ್, ದಯಾಶಂಕರ್, ಡಾ.ಎಚ್.ಡಿ. ಪಾಟೀಲ್ ಅವರನ್ನು ವಿಚಾರಣೆಗೊಳಪಡಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ. ಜೊತೆಗೆ ಸದಸ್ಯೆ ಮಂಗಳಾ ಶ್ರೀಧರ್ ಹಾಗೂ ಅಂದಿನ ಕೆಪಿಎಸ್‍ಸಿಯ ಕಾರ್ಯದರ್ಶಿಗಳನ್ನು ವಿಚಾರಣೆಗೊಳಪಡಿಸಲು ಕೋರಲಾಗುತ್ತದೆ.
Advertisement