ಮೀಸಲು ಅಂತಿಮ ಪಟ್ಟಿ; ಮಧ್ಯಂತರ ತಡೆಗೆ ನಕಾರ

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ 198 ವಾರ್ಡ್‍ಗಳಿಗೆ ರಾಜ್ಯ ಸರ್ಕಾರ ಏ.13 ರಂದು ಹೊರಡಿಸಿದ್ದ ಮೀಸಲು ಪಟ್ಟಿ ಸಮರ್ಪಕವಾಗಿಲ್ಲ ಹಾಗೂ ಮೀಸಲು ನಿಗದಿಯಲ್ಲಿ ರೋಸ್ಟರ್ ನಿಯಮಾವಳಿ...
ಮೀಸಲು ಅಂತಿಮ ಪಟ್ಟಿ; ಮಧ್ಯಂತರ ತಡೆಗೆ ನಕಾರ
ಮೀಸಲು ಅಂತಿಮ ಪಟ್ಟಿ; ಮಧ್ಯಂತರ ತಡೆಗೆ ನಕಾರ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ 198 ವಾರ್ಡ್‍ಗಳಿಗೆ ರಾಜ್ಯ ಸರ್ಕಾರ ಏ.13 ರಂದು ಹೊರಡಿಸಿದ್ದ ಮೀಸಲು ಪಟ್ಟಿ ಸಮರ್ಪಕವಾಗಿಲ್ಲ ಹಾಗೂ ಮೀಸಲು ನಿಗದಿಯಲ್ಲಿ ರೋಸ್ಟರ್ ನಿಯಮಾವಳಿಯನ್ನು ಅನುಸರಿಸಿಲ್ಲ. ಹೀಗಾಗಿ ಮೀಸಲು ಪಟ್ಟಿಗೆ ತಡೆ ನೀಡುವಂತೆ ಕೋರಿ ಜೆ.ಕೆ.ಲೊಕೇಶ್ ಹಾಗೂ ಮತ್ತಿತರರು ಹೈಕೋರ್ಟ್ ಗೆ ತಕರಾರು ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡಸಿದ ನ್ಯಾ.ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಏ.20 ಕ್ಕೆ ಮುಂದೂಡಿದೆ.

ಸರ್ಕಾರ ಹೊರಡಿಸಿದ ಮೀಸಲು ಪಟ್ಟಿ ಅಸಂಬದ್ಧ ಹಾಗೂ ಅವೈಜ್ಞಾನಿಕವಾಗಿದೆ. ಮೀಸಲಿಗೆ ಸಂಬಂಧಿಸಿದಂತೆ ಹೇಳಲಾಗುವ ಸಂವಿಧಾನ ಪರಿಚ್ಛೇದ 243 ಟಿ ಅನ್ನು ಸರ್ಕಾರ ಉಲ್ಲಂಘಿಸಿಲಾಗಿದೆ. ನಿಯಮಾವಳಿ ಪ್ರಕಾರ ಪರಿಶಿಷ್ಟ ಜಾತಿ ಸಮುದಾಯದ ಹೆಚ್ಚಿರುವ ಪ್ರದೇಶದಲ್ಲಿ ಆ ಸಮುದಾಯದ ಅಭ್ಯರ್ಥಿಗೆ ಮೀಸಲು ನೀಡಬೇಕಾಗುತ್ತದೆ. ಆದರೆ, ರಾಜ್ಯ ಸರ್ಕಾರ ರಾಜಕೀಯ ಪ್ರೇರಿತವಾಗಿ ಮೀಸಲು ಪಟ್ಟಿ ಪ್ರಕಟಿಸಿದೆ.

ಕೆಲವೊಂದು ವಾರ್ಡ್ ಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದವರ ಜನ ಹೆಚ್ಚಿದ್ದರೂ, ಅಲ್ಲಿ ಸಾಮಾನ್ಯ ಕೋಟಾಕ್ಕೆ ಮೀಸಲು ನೀಡಿದೆ. ಇನ್ನೂ ಕೆಲ ವಾರ್ಡ್ ಗಳಲ್ಲಿ ಮೀಸಲು ಬದಲಾಗಿಲ್ಲ. ಹೀಗಾಗಿ ಮೀಸಲು ಪಟ್ಟಿಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರ ಪರ ವಕೀಲರು ವಾದ ಮಂಡಿಸಿದರು.

ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಚುನಾವಣ ಆಯೋಗದ ಪರ ವಕೀಲರು, ಚುನೀವಣಾ ವೇಳೆ ಪಟ್ಟಿ ಪ್ರಕಟ ಸಂಬಂಧ ಸೋಮವಾರ ಆಯೋಗ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ, ಮೇ 30 ರೊಳಗೆ ಚುನಾವಣೆ ನಡೆಸಲು ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಆ ಅರ್ಜಿ ಏ.20 ರಂದು ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬರಲಿದೆ. ಹೀಗಾಗಿ ಮೀಸಲು ಪಟ್ಟಿ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.

ಅಧಿಸೂಚನೆ ಏಕಿಲ್ಲ

ಇನ್ನೂ ಏಕೆ ನೀವು ವೇಳಾಪಟ್ಟಿ ಅಧಿಸೂಚನೆ ಪ್ರಕಟಿಸಿಲ್ಲ ಎಂದು ಆಯೋಗದ ಪರ ವಕೀಲರನ್ನು ಖಡಕ್ಕಾಗಿ ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಆಯೋಗದ ಪರ ವಕೀಲರು, ಕಾನೂನು ಮತ್ತು ಸುವ್ಯವಸ್ಥೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರು ಚರ್ಚಿಸಲಿದ್ದಾರೆ. ಹೀಗಾಗಿ ವೇಳಾಪಟ್ಟಿ ಪ್ರಕಟಿಸಿಲ್ಲ ಎಂದು ಪೀಠದ ಗಮನಕ್ಕೆ ತಂದರು. ವಿಚಾರಣೆ ವೇಳೆ ಮೀಸಲಿಗೆ ಸಂಬಂಧಿಸಿದ ವಿಚಾರದಲ್ಲಿ ಬಿಬಿಎಂಪಿ ಸರ್ಕಾರವನ್ನು ರಕ್ಷಿಸಲು ಪ್ರಯತ್ನಿಸಬಾರದು. ಕೋರ್ಟ್ ಗೆ ಪರಿಣಾಮಕಾರಿಯಾಗಿ ಸಲಹೆ ನೀಡಬೇಕು ಎಂದು ಬಿಬಿಎಂಪಿ ವಕೀಲರಿಗೆ ಸೂಚಿಸಿ ನೋಟಿಸ್ ಜಾರಿ ಮಾಡಿತು. ಏ.20 ಕ್ಕೆ ವಿಚಾರಣೆ ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com