ಅಕ್ರಮ ಟೋಲ್ ಗೇಟ್
ಬೆಂಗಳೂರು: ಬೂದಿಗೆರೆ ಕ್ರಾಸ್ ಬಳಿ ಇರುವ ಲ್ಯಾಮ್ಕೋ ಸಂಸ್ಥೆಯ ಮಾಲೀಕತ್ವದ ಟೋಲ್ ಗೇಟ್ ಅಕ್ರಮ ಎಂಬ ಆರೋಪಗಳು ಕೇಳಿಬರುತ್ತಿವೆ.
ಸ್ಖಳೀಯ ನಿವಾಸಿಗಳು ಮತ್ತು ಸ್ಥಳೀಯ ರಾಜಕೀಯ ಮುಖಂಡರು ಹೇಳಿರುವಂತೆ ಲ್ಯಾಮ್ಕೋ ಸಂಸ್ಥೆ ನಿರ್ಮಿಸಿರುವ ಟೋಲ್ ಗೇಟ್ ಅಕ್ರಮವಾಗಿದ್ದು, ಕಾನೂನು ಮೀರಿ ಇಲ್ಲಿ ಟೋಲ್ ಗೇಟ್ ಸ್ಥಾಪಿಸಲಾಗಿದೆ. ಕಾನೂನಿ ಪ್ರಕಾರ ಯಾವುದೇ ಟೋಲ್ ಗೇಟ್ ನಗರದಿಂದ ಸುಮಾರು 16 ಕಿ.ಮೀ ದೂರದಲ್ಲಿ ಇರಬೇಕು. ಆದರೆ ಈ ಲ್ಯಾಮ್ಕೋ ಸಂಸ್ಥೆ ಕೇವಲ 9 ಕಿ.ಮೀ ಅಂತರದಲ್ಲೇ ಟೋಲ್ ಗೇಟ್ ನಿರ್ಮಿಸಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಅಕ್ಕಪಕ್ಕದ ಊರುಗಳಿಗೆ ಹೋಗಲು ತೀವ್ರ ತೊಂದರೆಯಾಗುತ್ತಿದೆ.
ಪಕ್ಕದ ಊರಿಗೆ ಹೋಗಲು ಇಲ್ಲಿನ ಸಿಬ್ಬಂದಿ ದುಬಾರಿ ಟೋಲ್ ಕೇಳುತ್ತಿದ್ದಾರೆ. ಸ್ಥಳೀಯ ನಿವಾಸಿಗಳಿಗಾಗಿ ಸಂಸ್ಥೆ ನೀಡಿರುವ ಪಾಸ್ ಗಳನ್ನು ಇವರು ಅಂಗೀಕರಿಸುವುದೇ ಇಲ್ಲ. ಪ್ರತಿಯೊಂದಕ್ಕೂ ಹಣ ನೀಡಲೇ ಬೇಕು. ಇಲ್ಲವಾದರೆ ಜಗಳಕ್ಕೇ ಬರುತ್ತಾರೆ. ಟೋಲ್ ಸಿಬ್ಬಂದಿ ಮತ್ತು ಸ್ಥಳೀಯ ಗ್ರಾಮಸ್ಥರ ನಡುವೆ ಆಗ್ಗಿಂದಾಗ್ಗೆ ಜಗಳವಾಗುತ್ತಿದ್ದು, ಬೇಕೆಂದೇ ಸ್ಥಳೀಯ ಗ್ರಾಮಸ್ಥರನ್ನು ದುಬಾರಿ ಹಣ ಕೇಳುತ್ತಾರೆ ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ