ಈಜಲು ತೆರಳಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲು
ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಎಂಬಲ್ಲಿ ಬಂಡೆ ಹೊಂಡದಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳು ನೀರು ಪಾಲಾದ ದುರಂತ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ವಿದ್ಯಾರ್ಥಿಗಳು ಚೆನ್ನಹಳ್ಳಿ ಗ್ರಾಮದ ರೇವಣ ಸಿದ್ದೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಒಟ್ಟು 8 ಮಂದಿ ಗೆಳೆಯರು ಈಜಲು ತೆರಳಿದ್ದು ಇದರಲ್ಲಿ ೫ ಜನ ನೀರು ಪಾಲಾಗಿದ್ದಾರೆ.
ಈಜಲೆಂದು ನೀರಿಗೆ ಐದು ಜನರು ಹಾರಿದಾಗ ಮೂವರು ದಡದಲ್ಲೇ ನಿಂತಿದ್ದರು. ನೀರಿಗೆ ಹಾರಿದ ಐದು ಜನರಲ್ಲಿ ಒಬ್ಬನಿಗೆ ಈಜಲು ಬರುತ್ತಿರಲಿಲ್ಲ, ಆದ್ದರಿಂದ ಆತ ಮುಳುಗಿದ್ದಾನೆ. ಮುಳುಗುತ್ತಿರುವ ಗೆಳೆಯನನ್ನು ರಕ್ಷಿಸಲು ಇನ್ನುಳಿದ ನಾಲ್ಕು ಜನರು ಯತ್ನಿಸಿದಾಗ ಐವರೂ ಒಟ್ಟಿಗೆ ಮುಳುಗಿದ್ದಾರೆ. ಗೆಳೆಯರು ಮುಳುಗುತ್ತಿರುವುದನ್ನು ನೋಡಿ ದಡದಲ್ಲಿದ್ದ ಮೂವರು ಬೊಬ್ಬೆ ಹಾಕಿ ದಾರಿಹೋಕರಲ್ಲಿ ಹೇಳಿದ್ದಾರೆ.
ಮೃತರು ರೇವಣ್ಣ ಸಿದ್ದೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷ ಪದವಿ ವಿದ್ಯಾರ್ಥಿಗಳಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮೇಲಕ್ಕೆತ್ತುವ ಕಾರ್ಯ ನಡೆಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ