ಜಿ' ಕೆಟಗರಿ ಸೈಟ್ ಒಡೆಯರಾಗಿದ್ದ ಜಾರ್ಜ್; ಆಯೋಗಕ್ಕೆ ಮಾಹಿತಿ ನೀಡಿಲ್ಲ

ಈಗ ಗೃಹ ಸಚಿವರಾಗಿರುವ ಕೆ.ಜೆ.ಜಾರ್ಜ್ ಅವರು 1992ರಲ್ಲಿ `ಜಿ' ಕೆಟಗರಿ ನಿವೇಶನ ಪಡೆದಿದ್ದರು. ಇವರ ಕುಟುಂಬ ಸರ್ಕಾರ ಅಥವಾ ಗೃಹ ನಿರ್ಮಾಣ ಇಲಾಖೆಯಿಂದ ಮತ್ತೊಂದು ನಿವೇಶನ ಪಡೆಯುವಂತಿಲ್ಲ. ಆದರೂ ಪತ್ನಿ ಸೂಜಾ ಹೆಸರಿನಲ್ಲಿ ನಿವೇಶನ ಪಡೆದು ವಾಪಸ್ ಕೊಡುವ ನಾಟಕ ಮಾಡಿದ್ದಾರೆ...
ಗೃಹ ಸಚಿವ ಕೆ.ಜೆ.ಜಾರ್ಜ್
ಗೃಹ ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ಈಗ ಗೃಹ ಸಚಿವರಾಗಿರುವ ಕೆ.ಜೆ.ಜಾರ್ಜ್ ಅವರು 1992ರಲ್ಲಿ `ಜಿ' ಕೆಟಗರಿ ನಿವೇಶನ ಪಡೆದಿದ್ದರು. ಇವರ ಕುಟುಂಬ ಸರ್ಕಾರ ಅಥವಾ ಗೃಹ ನಿರ್ಮಾಣ ಇಲಾಖೆಯಿಂದ ಮತ್ತೊಂದು ನಿವೇಶನ ಪಡೆಯುವಂತಿಲ್ಲ. ಆದರೂ ಪತ್ನಿ ಸೂಜಾ ಹೆಸರಿನಲ್ಲಿ ನಿವೇಶನ ಪಡೆದು ವಾಪಸ್ ಕೊಡುವ ನಾಟಕ ಮಾಡಿದ್ದಾರೆ.

ಇದನ್ನು ಚುನಾವಣೆ ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ. ಹಾಗಾಗಿ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಎಸ್.ಆರ್. ಹಿರೇಮಠ್ ಆಗ್ರಹಿಸಿದ್ದಾರೆ. ಕೆ.ಜೆ.ಜಾರ್ಜ್ ವಿರುದ್ಧದ ನಿವೇಶನ ಹಗರಣ ವಿಚಾರ, ಜಾರ್ಜ್ ಅವರು ದಕ್ಷಿಣ ಆಫ್ರಿಕಾಕ್ಕೆ ಹೋಗುವ ಮುನ್ನ ದಾಖಲೆಯನ್ನು ಬಿಡುಗಡೆ ಮಾಡುವಂತೆ ಸವಾಲು ಹಾಕಿದ ಕಾರಣ ದಾಖಲೆ ಬಿಡುಗಡೆ ಮಾಡಿದ್ದೇನೆ. 2004ರಲ್ಲಿ ಜಾರ್ಜ್ ಪತ್ನಿ ಸೂಜಾ ಜಾರ್ಜ್ ಅವರು ವೈಯಾಲಿ ಕಾವಲ್ ಸಂಘದಿಂದ ಮತ್ತು ಜಾರ್ಜ್ ಸಹೋದರ ಕೆ.ಜೆ.ಕುರುವಿಲ್ಲಾ ನಿವೇಶನಗಳನ್ನು ಪಡೆದಿರುವುದು ಕಾನೂನು ಬಾಹಿರ ಎಂದು ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಾರ್ಜ್ ಪತ್ನಿ ನಿವೇಶನ ಹೊಂದಿದ್ದಾರೆ ಎಂಬ ಅಂಶವನ್ನು 2008ರ ಚುನಾವಣೆ ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟು ಅವರು ಅಪರಾಧವೆಸಗಿದ್ದಾರೆ. ಈ ಅಂಶಗಳು ಮುಂದೆ ಹೊರಬಂದರೆ ಆಗಬಹುದಾದ ಅಪಾಯವನ್ನು ಅರಿತು ಜಾರ್ಜ್ ಅವರ ಪತ್ನಿ ಹೆಸರಿನಲ್ಲಿದ್ದ ನಿವೇಶವನ್ನು 2013ರ ಚುನಾವಣೆ ಘೋಷಣೆಯಾದ ಒಂದು ದಿನದ ನಂತರ ಹಿಂದಿರುಗಿಸಿದ್ದಾರೆ. ಆದರೆ, ಅದೇ ನಿವೇಶವನ್ನು ನಾಲ್ಕು ತಿಂಗಳ ನಂತರ ಇಸ್ಮಾಯಿಲ್ ಷರೀಫ್ ಎಂಬುವವರು ಹಿಂದೆ ಸೂಜಾ ಖರೀದಿಸಿದ ಮೊತ್ತ (ರು.8.8 ಲಕ್ಷ ) ಕ್ಕೆ ಪಡೆದಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com