
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮತ್ತೆ ಜೋರಾಗಿದೆ. ನಗರದ ವಿವಿದೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ.
ಸಂಜೆ 5.30 ರಿಂದ ಶುರವಾದ ಮಳೆ ಒಂದೇ ಸಮನೆ ಸುರಿಯುತ್ತಿದ್ದು, ವಿಧಾನಸೌಧದ ಸುತ್ತಮುತ್ತಲು ಆಲಿಕಲ್ಲು ಸಹಿತ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಮಳೆ ನೀರು ರಸ್ತೆಗಳಲ್ಲಿ ಹರಿಸುತ್ತಿರುವುದರಿಂದ ವಾಹನ ಸವಾರರು ಮಳೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಬಸವನಗುಡಿ, ಮಲ್ಲೇಶ್ವರಂ, ಚಾಮರಾಜಪೇಟೆ, ಗಂಗಾನಗರ, ಆರ್ ಟಿ ನಗರ, ಸದಾಶಿವನಗರ, ಹನುಮಂತನಗರ, ಮೈಸೂರು ರಸ್ತೆಯ ಪ್ರದೇಶ, ಹೆಬ್ಬಾಳ ಸುತ್ತಮುತ್ತಲು ಭಾರಿ ಮಳೆಯಾಗುತ್ತಿದೆ.
Advertisement