ಇಂದು ಬೆಳಗ್ಗೆ ಕಠ್ಮಂಡುಗೆ ಹೋಗುತ್ತಿದ್ದೇವೆ ಎಂದಿದ್ದರು!

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಪ್ರವಾಸಕ್ಕೆ ತೆರಳಿದ್ದ ಮಂಡ್ಯ ಮೂಲದ 36 ಮಂದಿ ನಾಪತ್ತೆಯಾಗಿರುವುದು ಕುಟುಂಬದವರಲ್ಲಿ ಆತಂಕ ಸೃಷ್ಟಿಸಿದೆ...
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭೂಕಂಪವಾದ ಪರಿಣಾಮ ಛಿದ್ರಗೊಂಡ ಸ್ಥಳ
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭೂಕಂಪವಾದ ಪರಿಣಾಮ ಛಿದ್ರಗೊಂಡ ಸ್ಥಳ

ಮಂಡ್ಯ/ಪಾಂಡವಪುರ: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಪ್ರವಾಸಕ್ಕೆ ತೆರಳಿದ್ದ ಮಂಡ್ಯ ಮೂಲದ 36 ಮಂದಿ ನಾಪತ್ತೆಯಾಗಿರುವುದು ಕುಟುಂಬದವರಲ್ಲಿ ಆತಂಕ ಸೃಷ್ಟಿಸಿದೆ.

ಜಿಲ್ಲೆಯ ಪಾಂಡವಪುರ ತಾಲೂಕು ಹರಳಹಳ್ಳಿಯಿಂದ 35 ಮಂದಿ ಕಳೆದ 8 ದಿನಗಳ ಹಿಂದೆ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಭೂಕಂಪ ಸಂಭವಿಸಿದ ತರುವಾಯ ಅವರ ಬಗ್ಗೆ ಇಲ್ಲಿವರೆಗೂ ಕುಟುಂಬದವರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗ್ರಾಮದ ಅಪ್ಪಾಜಿಗೌಡ, ಗೌರಮ್ಮ, ಸುಶೀಲಮ್ಮ, ಸಿದ್ದಪ್ಪ, ಮಂಜುಳಮ್ಮ, ಕಚೇರಿ ಶಿವಣ್ಣ, ಸುಶೀಲಾ, ಬಲರಾಮï, ಶಂಕರಮ್ಮ, ಶಿವಣ್ಣ, ಸುಬ್ಬಮ್ಮ, ಪ್ರೇಮಮ್ಮ, ಮಂಜುಳಾ, ಅನಸೂಯ, ಕಮಲಾ, ಭಾಗ್ಯಮ್ಮ, ಕೆಂಪೇಗೌಡ, ಲಕ್ಷ್ಮಣ, ಮಂಗಳಾ, ಮಹದೇವ, ದೇವಮ್ಮ, ಯಶೋಧರ, ಮಂಜುನಾಥ, ನಾರಾಯಣ, ಕೃಷ್ಣೇಗೌಡ, ತಾಯಮ್ಮ, ಯಶೋಧ, ಆದ್ನೂರಕ್ಕ, ಸಬ್ಕಾಚಾರಿ, ಕುಮಾರ್, ಕಮಲಮ್ಮ, ರಮೇಶ ಸೇರಿದಂತೆ 36 ಮಂದಿ ನಾಪತ್ತೆಯಾದವರು.

ಇವರೆಲ್ಲರೂ ಅನೇಕ ತಿಂಗಳಿಂದ ಬಸ್ ಏಜೆಂಟ್ ಹಾರೋಹಳ್ಳಿ ಸ್ವಾಮಿ ಎಂಬವರ ಬಳಿ ಪ್ರವಾಸಕ್ಕೆ ಎಂದೇ ಚೀಟಿ ಹಣ ಕಟ್ಟುತ್ತಿದ್ದರು. ಅದರಂತೆ ಉತ್ತರ ಭಾರತದ ಪ್ರವಾಸಕ್ಕೆಂದು ಸಿಂಗದೂರು, ಬಾಂಬೆ, ಹರಿದ್ವಾರ, ಋಷಿಕೇಶ್, ಅಯೋಧ್ಯ, ಕಾಶಿ, ನೇಪಾಳ ಕಠ್ಮಂಡು ಸೇರಿ ವಿವಿಧ ಕ್ಷೇತ್ರಗಳಿಗೆ ಪ್ರವಾಸ ಹಮ್ಮಿಕೊಂಡಿದ್ದರು.

ಅದರಂತೆ ಕಳೆದ ಏ.9ರಂದು ರಾತ್ರಿ 9.15ಗಂಟೆಗೆ ತಾಲೂಕಿನ ಹರಳಹಳ್ಳಿಯಿಂದ ಉತ್ತರ ಭಾರತ ಪ್ರವಾಸಕ್ಕೆಂದು 33 ಮಂದಿ ಪ್ರವಾಸಿಗರು, ಕಾಮಧೇನು ಟ್ರಾವೆಲ್ಸ್ ಗೆ ಸೇರಿದ ಬಸ್ಸಿ (ಕೆಎ 11, ಎ 8334)ನಲ್ಲಿ ಚಾಲಕ ಹಾರೋಹಳ್ಳಿ ಸ್ವಾಮಿ, ಬಸ್ ಏಜೆಂಟ್ ಹಾಗೂ ಅಡುಗೆ ಭಟ್ಟರೊಂದಿಗೆ ಪ್ರವಾಸ ಕೈಗೊಂಡಿದ್ದಾರೆ.

ಏ.24ರ ಶುಕ್ರವಾರ ಸಂಜೆ 4 ಗಂಟೆಗೆ ಪ್ರವಾಸಿಗ ಕುಮಾರ್ ಸೇರಿ ಕೆಲವರು ಹರಳಹಳ್ಳಿ ಗ್ರಾಮದ ಕುಟುಂಬಸ್ಥರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದರಲ್ಲದೆ, ನಾಳೆ (ಶನಿವಾರ) ಬೆಳಗ್ಗೆ ನೇಪಾಳದ ಕಠ್ಮಂಡುವಿಗೆ ತೆರಳುತ್ತೇವೆ ಎಂದಿದ್ದರು ಎನ್ನುತ್ತಾರೆ ಕುಟುಂಬದವರು. ಆತಂಕ- ನೀರವ ಮೌನ: ಕಠ್ಮಂಡುವಿನಲ್ಲಿ ಸಂಭವಿಸಿದ ಭೂಕಂಪದ ಸಂಗತಿ ಮಾಧ್ಯಮಗಳಲ್ಲಿ ಬಿತ್ತರ ಗೊಳ್ಳುತ್ತಿದ್ದಂತೆ ಪ್ರವಾಸಕ್ಕೆ ತೆರಳಿದವರ ಕುಟುಂಬ ಗಳಲ್ಲಿ ಆತಂಕ ಮನೆ ಮಾಡಿದೆ. ಪ್ರವಾಸಕ್ಕೆ ಹೋದವರು ಸಂಪರ್ಕ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com