
ಬೆಂಗಳೂರು: ಖೋಟಾನೋಟು ಜಾಲದ ಪ್ರಮುಖ ಆರೋಪಿ ಶಂಕರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಭಾರತಕ್ಕೆ ಖೋಟಾ ನೋಟು ಬರುವ ಮತ್ತೊಂದು ಹೊಸ ಮಾರ್ಗ ಪತ್ತೆಯಾಗಿದ್ದು ಥಾಯ್ ಲ್ಯಾಂಡ್ ಮೂಲಕವೂ ಭಾರತಕ್ಕೆ ಖೋಟಾ ನೋಟುಗಳನ್ನು ತರಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಸಮೀರ್, ಸೈಯದ್ ಹೌನ್‍ರಾಜಿ ಹಾಗೂ ಮೀರ್ ಅಬ್ದುಲ್‍ರನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಚೆನ್ನೈನ ಪ್ರಮುಖ ಆರೋಪಿ ಶಂಕರ್‍ನನ್ನು
ಬಂಧಿಸಿ, ರು.500 ಮುಖಬೆಲೆಯ 80 ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಸಮೀರ್, ಸೈಯದ್, ಮೀರ್ ಥಾಯ್ ಲ್ಯಾಂಡ್ ನಲ್ಲಿ ಉದ್ಯೋಗದಲ್ಲಿದ್ದರು. ಜಾಲದ ಕಿಂಗ್‍ಪಿನ್ ಜಾವಿದ್ ಪರಿಚಯವಾಗಿ, ಆತನ ಜತೆಗೂಡಿ ನಕಲಿ ನೋಟು ಚಲಾಯಿಸುತ್ತಿದ್ದ ಆರೋಪಿಗಳು, 5 ತಿಂಗಳ ಹಿಂದೆ ಭಾರತಕ್ಕೆ ಮರಳಿ, ಜಾವಿದ್‍ನ ಶಿಷ್ಯ ಶಂಕರ್ ಜತೆ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಖೋಟಾನೋಟು ಚಲಾವಣೆಯಲ್ಲಿ ತೊಡಗಿದ್ದರು.
Advertisement