ಬೆಳ್ಳಿ ವಸ್ತುಗಳ ಕಳ್ಳ ಸಾಗಣೆ: ಒಬ್ಬನ ಬಂಧನ

ತೆರಿಗೆ ವಂಚಿಸಿ ಬೆಳ್ಳಿ ಒಡವೆಗಳು ಹಾಗೂ ಪೂಜಾ ಸಾಮಗ್ರಿಗಳನ್ನು ವಿಮಾನದ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಬಂಧಿಸಿರುವ ಸಿಸಿಬಿ ಪೊಲೀಸರು ರು.45 ಲಕ್ಷ ಮೌಲ್ಯದ 118.5 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ...
ವಶಪಡಿಸಿಕೊಂಡಿರುವ ವಸ್ತುಗಳೊಂದಿಗೆ ಬಂಧಿತ ಆರೋಪಿ
ವಶಪಡಿಸಿಕೊಂಡಿರುವ ವಸ್ತುಗಳೊಂದಿಗೆ ಬಂಧಿತ ಆರೋಪಿ

ಬೆಂಗಳೂರು: ತೆರಿಗೆ ವಂಚಿಸಿ ಬೆಳ್ಳಿ ಒಡವೆಗಳು ಹಾಗೂ ಪೂಜಾ ಸಾಮಗ್ರಿಗಳನ್ನು ವಿಮಾನದ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಬಂಧಿಸಿರುವ ಸಿಸಿಬಿ ಪೊಲೀಸರು ರು.45 ಲಕ್ಷ ಮೌಲ್ಯದ 118.5 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರ್ತಪೇಟೆ ನಿವಾಸಿ ದಿಲೀಪ್ ಸಿಂಗ್(48) ಬಂಧಿತ. ಆರೋಪಿ ಸಾಮಾನ್ಯ ವಸ್ತುಗಳ ಹೆಸರಲ್ಲಿ ಬೆಳ್ಳಿ ವಸ್ತುಗಳನ್ನು ದೆಹಲಿ ಹಾಗೂ ಆಗ್ರಾದಿಂದ ವಿಮಾನ ಮೂಲಕ ಕಳ್ಳ ಸಾಗಣೆ ಮಾಡಿ ತೆರಿಗೆ ವಂಚಿಸುತ್ತಿದ್ದರು. ದೆಹಲಿಯ ಅಮಿತ್ ಮತ್ತು ಆಗ್ರಾದಲ್ಲಿರುವ ಆರ್.ಪಿ.ಗುಪ್ತ ಎಂಬುವರು ಕಾರ್ಗೋ ಕೋರಿಯರ್ ಹೆಸರಿನಲ್ಲಿ ವಿಮಾನದ ಮೂಲಕ ಬೆಳ್ಳಿ ಒಡವೆ ಹಾಗೂ ಪೂಜಾ ಸಾಮಗ್ರಿಗಳನ್ನು ನಗರಕ್ಕೆ ಕಳುಹಿಸಿತದ್ತಿದ್ದರು. ಬೆಂಗಳೂರಿನಲ್ಲಿ  ಸ್ಪೀಡ್ ಕಿಂಗ್ ಕೋರಿಯರ್‍ನ ಸಲೀಂ ಎಂಬಾತನ ಸೂಚನೆ ಮೇರೆಗೆ ಬೆಳ್ಳಿ ವಸ್ತುಗಳನ್ನು ಬಂಧಿತ ದಿಲೀಪ್ ಸಿಂಗ್ ಪಡೆದುಕೊಳ್ಳುತ್ತಿದ್ದ. ವಿಮಾನ ನಿಲ್ದಾಣದಿಂದ ಬೆಳ್ಳಿ ವಸ್ತುಗಳನ್ನು ಕರ್ಟನ್ ಬಾಕ್ಸ್ ಹಾಗೂ ಚೀಲಗಳಲ್ಲಿ ಹಾಕಿಕೊಂಡು ಬಿಲ್‍ಗಳಿಲ್ಲದೇ ನಗರದ ವಿವಿಧೆಡೆ ಕಳ್ಳಸಾಗಣೆ ಮಾಡುತ್ತಿದ್ದರು.

ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದಂಧೆಯಲ್ಲಿ ತೊಡಗಿರುವ ಇತರ ಆರೋಪಿಗಳ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com