ಆರೋಗ್ಯ ಮಾಹಿತಿ ಆ್ಯಪ್

ಆ್ಯಪ್ ಮೂಲಕ ರಾಜೀವ್ ಆರೋಗ್ಯ ಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯುವ ಫಲಾನುಭವಿ, ತಾನು ಆಯ್ಕೆ ಮಾಡಿಕೊಂಡ ಆಸ್ಪತ್ರೆಗೆ ಇರುವ ದೂರ ತಿಳಿಯುವುದರ ಜೊತೆಗೆ ಯೋಜನೆಯಲ್ಲಿ ನೋಂದಣಿಗೊಂಡಿರುವ ಆಸ್ಪತ್ರೆಗಳ ವಿವರ........
ಯು.ಟಿ ಖಾದರ್
ಯು.ಟಿ ಖಾದರ್

ಬೆಂಗಳೂರು: ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮೊಬೈಲ್ ಆ್ಯಪ್ ರಾಜ್ಯದ ಎಲ್ಲ ಎಪಿಎಲ್ ಕಾರ್ಡುದಾರರಿಗೆ ಲಭ್ಯವಾಗಲಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಇಂಥ ಆ್ಯಪ್ ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಆ್ಯಪ್ ಮೂಲಕ ರಾಜೀವ್ ಆರೋಗ್ಯ ಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯುವ  ಫಲಾನುಭವಿ, ತಾನು ಆಯ್ಕೆ ಮಾಡಿಕೊಂಡ ಆಸ್ಪತ್ರೆಗೆ ಇರುವ ದೂರ ತಿಳಿಯುವುದರ ಜೊತೆಗೆ ಯೋಜನೆಯಲ್ಲಿ ನೋಂದಣಿಗೊಂಡಿರುವ ಆಸ್ಪತ್ರೆಗಳ ವಿವರ, ಲಭ್ಯ ಚಿಕಿತ್ಸಾ ವಿಧಾನಗಳನ್ನು ಹಾಗೂ ಅರೆ ಖಾಸಗಿ ವಾರ್ಡಗಳ ದರಗಳ ಮಾಹಿತಿಯನ್ನು ಪಡೆಯಬಹುದು ಎಂದರು.
ರಾಜೀವ್ ಆರೋಗ್ಯ ಭಾಗ್ಯ ಯೋಜನೆ ಫಲಾನುಭವಿಗಳು ಯಾವುದೇ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಅರೆ ಖಾಸಗಿ ಅಥವಾ ಖಾಸಗಿ ವಾರ್ಡ್ ಗಳು ವಿಧಿಸುವ ದರಗಳು, ಆಸ್ಪತ್ರೆಯಿಂದ ಆಸ್ಪತ್ರೆಗೆ ವೆಚ್ಚದ ಹೋಲಿಕೆ, ಜತೆಗೆ ಅನುಕೂಲಕರ ಸ್ಥಳದ ಆಸ್ಪತ್ರೆ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಆ್ಯಪ್ ರೂಪಿಸಲಾಗಿದೆ. ಯೋಜನೆಯಡಿ ಮಾರಣಾಂತಿಕ ಕಾಯಿಲೆಗಳಾದ ಹೃದಯ ರೋಗ, ಕ್ಯಾನ್ಸರ್, ನರರೋಗ, ಮೂತ್ರ ಪಿಂಡದ ಕಾಯಿಲೆ, ಅಪಘಾತ, ಸುಟ್ಟಗಾಯ, ಹಾಗೂ ನವಜಾತ ಶಿಶುಗಳು ಮತ್ತು ಮಕ್ಕಳ ಕಾಯಿಲೆಗೆ ಸಂಬಂಧಿಸಿದಂತೆ  ಒಟ್ಟು 449 ಬಗೆಯ ಚಿಕಿತ್ಸೆ ಒದಗಿಸಲಾಗಿದೆ. ರಾಜ್ಯಾದ್ಯಂತ 132 ಆಸ್ಪತ್ರೆಗಳನ್ನು ನೋಂದಾಯಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com