ಅಲ್ಲಲ್ಲಿ ಕಲ್ಲು ತೂರಾಟ; ಉಳಿದಂತೆ ಶಾಂತಿಯುತ

ಸಾರಿಗೆ ಸಂಸ್ಥೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಬೆಂಗಳೂರಿನಲ್ಲಷ್ಟೇ ಅಲ್ಲ, ಉಳಿದ ಕಡೆಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಎಸ್‍ಆರ್ ಟಿಸಿ ಬಸ್...
ಬಸ್‍ಗಳ ಮೇಲೆ ಕಲ್ಲು ತೂರಾಟ
ಬಸ್‍ಗಳ ಮೇಲೆ ಕಲ್ಲು ತೂರಾಟ

ಬೆಂಗಳೂರು: ಸಾರಿಗೆ ಸಂಸ್ಥೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಬೆಂಗಳೂರಿನಲ್ಲಷ್ಟೇ ಅಲ್ಲ, ಉಳಿದ ಕಡೆಗಳಲ್ಲೂ ಮಿಶ್ರ ಪ್ರತಿಕ್ರಿಯೆ  ವ್ಯಕ್ತವಾಯಿತು. ಕೆಎಸ್‍ಆರ್ ಟಿಸಿ ಬಸ್ ಮತ್ತು ಆಟೋಗಳಷ್ಟೇ ಸಂಚಾರ ನಿಲ್ಲಿಸಿದ್ದವು. ಮಧ್ಯಾಹ್ನದ ನಂತರ ಆಟೋಗಳ ಓಡಾಟ ಕೂಡ ಶುರುವಾಗಿತ್ತು

ಬೆಂಗಳೂರು ನಗರದಲ್ಲಿ ಹೇಗಿತ್ತು ಮುಷ್ಕರ?
 ಅನಿವಾರ್ಯ ಪರಿಸ್ಥಿತಿಯಲ್ಲಿ ಟ್ಯಾಕ್ಸಿಯವರಿಂದಲೂ ದುಪ್ಪಟ್ಟು ದರ ವಸೂಲಿ
 ಹಾಲು, ನಿತ್ಯ ಬಳಕೆಯ ವಸ್ತುಗಳು, ತರಕಾರಿ ತುಂಬಿದ ವಾಹನಗಳು
ಬೆಳಗ್ಗೆಯಿಂದಲೇ ಸುತ್ತಾಟ ನಡೆಸಿದವು. ತುರ್ತು ಸೇವೆಗಳಿಗೂ ಸಾರಿಗೆ ಬಿಸಿ ತಟ್ಟಲಿಲ್ಲ.
ಬೆಳಗ್ಗೆ ಆಟೋ ಸಂಚಾರ ವಿರಳ, ಬಳಿಕ ಮಾಮೂಲು ಸ್ಥಿತಿ
 ಮುಷ್ಕರಕ್ಕೆ ಬೆಂಬಲ ಸಿಕ್ಕಿದ್ದು ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಯಿಂದಲೇ.
ಅಲ್ಲೋ ಇಲ್ಲೋ ಗಂಟು ಮೂಟೆ ಹೊತ್ತು ತಿರುಗಾಡುತ್ತಿದ್ದ
ಪ್ರಯಾಣಿಕರು ದುಪ್ಪಟ್ಟು ಹಣ ಕೊಟ್ಟು ಆಟೋಗಳಲ್ಲಿ ತೆರಳಿದರು.
ಅನಿವಾರ್ಯತೆಯಿಂದಾಗಿ ಕೆಲವೆಡೆ ಬಿಎಂಟಿಸಿ ಸಂಚಾರ, ವೋಲ್ವೋ ಸಂಪೂರ್ಣ ಸ್ಥಗಿತ
 ಸಂಜೆ ವೇಳೆಗೆ ಎಲ್ಲ ಬಸ್ ಸಂಚಾರ ಎಂದಿನಂತೆ ಶುರುವಾಗಿದ್ದು, ಪ್ರಯಾಣಿಕರಲ್ಲಿ ನಿರಾಳತೆ ತಂದಿತು.

ಹುಬ್ಬಳ್ಳಿಯಲ್ಲಿ ಹೇಗಿತ್ತು?
 ಉ.ಕರ್ನಾಟಕದ ಬಹುತೇಕ ಎಲ್ಲ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ
 ಬೆಳಗ್ಗೆ ಸಂಚಾರಕ್ಕೆ ಯತ್ನಿಸಿದ ಬಸ್ಸುಗಳ ಮೇಲೆ ಹುಬ್ಬಳ್ಳಿ ಹಾಗೂ ಬಳ್ಳಾರಿಯಲ್ಲಿ ಕಲ್ಲೆಸೆದಿದ್ದು, ಬಳಿಕ ಬಸ್ ಸಂಚಾರ ಬಹುತೇಕ ಸ್ಥಗಿತ
 ಹುಬ್ಬಳ್ಳಿಯಲ್ಲಿ 7 ಬಸ್‍ಗಳ ಮೇಲೆ ಕಲ್ಲು ತೂರಾಟ, - ಚಾಲಕ ಧರ್ಮಣ್ಣ ಸವಣೂರಗೆ ಗಾಯ
 ಬಳ್ಳಾರಿಯಲ್ಲೂ ನಾಲ್ಕು ಬಸ್‍ಗಳಿಗೆ ಕಲ್ಲು

ಕರಾವಳಿ, ಕೊಡಗಿನಲ್ಲಿ ಮುಷ್ಕರ

ಮಂಗಳೂರು ಸೇರಿ ಕರಾವಳಿ ಪ್ರದೇಶದಲ್ಲಿ ಮುಷ್ಕರಕ್ಕೆ ಬೆಂಬಲ
ಫೆಡರೇಷನ್ ಕಪ್ ರಾಷ್ಟ್ರೀಯ ಕ್ರೀಡಾಕೂಟ ಹಿನ್ನೆಲೆಯಲ್ಲಿ ಟ್ಯಾಕ್ಸಿ
ಸೇವೆ ಸ್ಥಗಿತಗೊಳಿಸದಂತೆ ಜಿಲ್ಲಾ„ಕಾರಿ ಮನವಿ ಮಾಡಿದ್ದರು.
 ಬಸ್  ಮಾಲೀಕರ ಸಂಘದ ಅಧ್ಯಕ್ಷರು ಬಂದ್‍ನಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು.
 ಬೆಳಗ್ಗೆ ಬಸ್ ಸಂಚಾರ, ಕದ್ರಿ ಪರಿಸರದಲ್ಲಿ ಬಸ್‍ಗೆ ಕಲ್ಲು ತೂರಾಟ


ರು. 10 ಕೋಟಿ ನಷ್ಟ
ಬೆಂಗಳೂರು: ರಸ್ತೆ ಸಾರಿಗೆ ಸುರಕ್ಷತಾ ವಿಧೇಯಕ ವಿರೋಧಿಸಿ ಕರೆ ನೀಡಿದ್ದ ಮುಷ್ಕರದಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸುಮಾರು ರು. 10 ಕೋಟಿ ಆದಾಯ ಕಡಿಮೆ ಆಗಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸೇರಿದಂತೆ ಒಟ್ಟು ನಾಲ್ಕು ನಿಗಮಗಳಲ್ಲೂ ಗುರುವಾರ ಬಸ್ಸುಗಳ ಓಡಾಟ ಬಹುತೇಕ ಸ್ಥಗಿತಗೊಂಡಿದ್ದರಿಂದ ಆದಾಯಕ್ಕೆ ಹೊಡೆತ ಬಿದ್ದಿದೆ. ನಾಲ್ಕು ವಿಭಾಗಗಳ ಪೈಕಿ ಕೆಎಸ್‍ಆರ್‍ಟಿಸಿ ಅತ್ಯ„ಕ ಬಸ್ಸುಗಳನ್ನು ಹೊಂದಿದೆ. ನಿತ್ಯ ಕೆಎಸ್‍ಆರ್‍ಟಿಸಿ ಕಡೆಯಿಂದ ರಾಜ್ಯದ ನಾನಾ ಕಡೆಗಳಿಗೆ 8,400 ಬಸ್ಸುಗಳು ಓಡಾಟ ನಡೆಸುತ್ತವೆ. ಶೇ.95 ರಷ್ಟು ಬಸ್ಸುಗಳು ಓಡಾಟ ಸ್ಥಗಿತಗೊಳಿಸಿದ್ದವು. ಜತೆಗೆ, ಬೆಂಗಳೂರು ನಗರವೂ ಸೇರಿದಂತೆ
ನಾನಾ ಕಡೆಗಳಲ್ಲಿ ಖಾತರಿಯಾಗಿದ್ದ 1500 ಇ-ಬುಕ್ಕಿಂಗ್ ಟಿಕೆಟ್‍ಗಳು ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿಗೆ ಸುಮಾರು ರು. 4 ರಿಂದ ರು. 5 ಕೋಟಿ ಆದಾಯ ಕಡಿಮೆ ಆಗಿದೆ ಎಂದು ಮೂಲಗಳು ತಿಳಿಸಿವೆ. ಕೆಎಸ್‍ಆರ್‍ಟಿಸಿ ಬಿಟ್ಟರೆ ಬಿಎಂಟಿಸಿ ಎರಡನೇ ಸ್ಥಾನದಲ್ಲಿದೆ. ನಗರದಲ್ಲಿ ನಿತ್ಯ 6,300 ಕ್ಕೂ ಹೆಚ್ಚು ಬಸ್ಸುಗಳು ಓಡಾಡುತ್ತಿದ್ದು, ಒಟ್ಟು 50 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮುಷ್ಕರದಿಂದಾಗಿ ಬಹುತೇಕ ಬಸ್ಸುಗಳ ಓಡಾಟ ಸ್ಥಗಿತವಾಗಿದ್ದರಿಂದ ಕನಿಷ್ಟ ರು. 3 ರಿಂದ ರು. 4 ಕೋಟಿ ಆದಾಯ ಕಡಿಮೆ ಆಗಿದೆ. ಹಾಗೆಯೇ , ಈಶಾನ್ಯ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳಲ್ಲಿ ಅರ್ಧದಷ್ಟು ಆದಾಯ ಕಡಿಮೆ ಆಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

12 ಬಸ್‍ಗಳು ಜಖಂ
ಬೆಂಗಳೂರು: ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ವಿರೋಧಿಸಿ ಗುರುವಾರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದ ವೇಳೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 12 ಬಸ್ಸುಗಳು ಜಖಂಗೊಂಡಿವೆ. ರಾಮನಗರದಲ್ಲಿ 8, ಮೈಸೂರಿನಲ್ಲಿ 1, ಕೋಲಾರದಲ್ಲಿ 2 ಹಾಗೂ ತುಮಕೂರಿನಲ್ಲಿ 1 ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಬಸ್ಸುಗಳ ಗಾಜು ಒಡೆದಿವೆ. ಮುಷ್ಕರದ ಅಂಗವಾಗಿ ಪ್ರತಿಭಟನೆಗಳು ನಡೆದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಈ ರೀತಿಯ ನಷ್ಟ ಉಂಟಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com