

ಮಂಡ್ಯ : ರೈತರ ಸರಣಿ ಆತ್ಮಹತ್ಯೆ ಇನ್ನೂ ಮುಂದುವರಿಯುತ್ತಲೇ ಇದ್ದು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಒಟ್ಟು ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮಂಡ್ಯ ಜಿಲ್ಲೆಯ ಪಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ನಿವಾಸಿ ದೇವರಾಜ (23) ಎಂಬುವವರು ಬೆಳೆನಷ್ಟ ಹಾಗೂ ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅದೇ ವೇಳೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಲಗೂರು ಹೋಬಳಿ ಕಲ್ಲಕಟ್ಟ ಗ್ರಾಮದ ನಿವಾಸಿ ಉಮೇಶ್ (36) ಎಂಬ ರೈತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದರುವ ಬಗ್ಗೆಯೂ ವರದಿಯಾಗಿದೆ. ಇವರು ಮಳೆ ಬಾರದೆ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಮನನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಯಾದಗಿರಿ ತಾಲೂಕಿನ ಗುಂಜನೂರು ಗ್ರಾಮದ ತಾಯಮ್ಮ (40) ಎಂಬ ರೈತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶಿಡ್ಲಘಟ್ಟ ತಾಲೂಕಿನ ಎಣ್ಣಂದೂರು ಗ್ರಾಮದ ಮುನಿಸ್ವಾಮಪ್ಪ (40) ಎಂಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
Advertisement