ಬಿಬಿಎಂಪಿ ಕಾಂಗ್ರೆಸ್ ತೆಕ್ಕೆಗೆ ತರಲೇಬೇಕು: ಕಾಂಗ್ರೆಸ್ ಹಿರಿಯ ಮುಖಂಡರ ಸೂಚನೆ

ಗೆಲ್ಲುವ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಹೇಗಾದರೂ ಮಾಡಿ ಬಿಬಿಎಂಪಿ ಯನ್ನು ಕಾಂಗ್ರೆಸ್ ತೆಕ್ಕೆಗೆ ತರಲೇಬೇಕು' ಎಂದು,,,
ಬಿಬಿಎಂ ಕಚೇರಿ
ಬಿಬಿಎಂ ಕಚೇರಿ

ಬೆಂಗಳೂರು: `ಗೆಲ್ಲುವ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಹೇಗಾದರೂ ಮಾಡಿ ಬಿಬಿಎಂಪಿ ಯನ್ನು ಕಾಂಗ್ರೆಸ್ ತೆಕ್ಕೆಗೆ ತರಲೇಬೇಕು' ಎಂದು ಕಾಂಗ್ರೆಸ್ ಹಿರಿಯ ಮುಖಂಡರು
ಸೂಚಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು ಪಕ್ಷದ ಗೆಲುವಿಗೆ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಹಿರಿಯ ಮುಖಂಡರಾದ ಸಿ.ಕೆ.ಜಾಫರ್ ಷರೀಫ್, ರೆಹಮಾನ್ ಖಾನ್, ಧರ್ಮಸಿಂಗ್, ಮಾರ್ಗರೆಟ್ ಆಳ್ವ, ಅಲ್ಲಂ ವೀರಭದ್ರಪ್ಪ, ಆರ್.ವಿ.ದೇಶಪಾಂಡೆ, ವೀರಣ್ಣ ಮತ್ತಿಕಟ್ಟಿ, ನ್ಯಾಮಗೌಡ ಸೇರಿದಂತೆ ವಿವಿಧ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಬಿಬಿಎಂಪಿ ಚುನಾವಣೆಗೆ ಎಲ್ಲರೂ ಒಗ್ಗಟ್ಟಿನಿಂದ ಹೋಗಲು ತೀರ್ಮಾನಿಸಲಾಯಿತು. ಬಿಬಿಎಂಪಿ ಚುನಾವಣೆಯಲ್ಲಿ ಹೇಗಾದರೂ ಕಾಂಗ್ರೆಸ್ ಅಧಿಕಾರ ಹಿಡಿಯುವ ಬಗ್ಗೆ ಚರ್ಚಿಸಲಾಯಿತು.

ಇದಕ್ಕಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಬೇಕು. ಯಾವುದೇ ಕಾರಣಕ್ಕೂ ಕ್ರಿಮಿನಲ್‍ಗಳಿಗೆ ಟಿಕೆಟ್ ನೀಡಬಾರದು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗಂತೂ
ಅವಕಾಶವನ್ನೇ ನೀಡಬಾರದು ಎಂದು ಮುಖಂಡರು ಸಲಹೆ ನೀಡಿದ್ದಾರೆ ಎಂದು  ಪರಮೇಶ್ವರ್ ಸುದ್ದಿಗಾರರಿಗೆ ಹೇಳಿದರು.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಬಗ್ಗೆ ನಮ್ಮಲ್ಲಿ ಮಾಹಿತಿ ಸಂಗ್ರಹಿಸಲಾಗಿ ದ್ದು, ಅವರ ವಿರುದಟಛಿದ ದೂರುಗಳು ಶಿಸ್ತು ಸಮಿತಿಯ ಮುಂದಿವೆ. ಕ್ರಮ ಕೈಗೊಳ್ಳಬೇಕಿರುವುದರಿಂದ
ಚುನಾವಣೆಯಲ್ಲಿ ಅವರಿಗೆ ಅವಕಾಶ ನೀಡಲಾ ಗದು ಎಂದು ಅವರು ಪ್ರತಿಕ್ರಿಯಿಸಿದರು. ಆ.6ರ ಒಳಗೆ ಅಂತಿಮ ಪಟ್ಟಿ: ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸುಮಾರು 600 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಯಾವರ ನ್ನು ಆಯ್ಕೆ ಮಾಡಬೇಕೆನ್ನುವ ಬಗ್ಗೆ ಬ್ಲಾಕ್ ಮತ್ತು ಜಿಲ್ಲಾ ನಾಯಕರು ಚರ್ಚಿಸುತ್ತಿದ್ದಾರೆ. ಆ.3ರ ಒಳಗಾಗಿ ಅಭ್ಯರ್ಥಿಗಳನ್ನು ಶಿಫಾರಸು ಮಾಡಲು ಸೂಚಿಸಲಾಗಿದೆ. ಪಟ್ಟಿಯನ್ನು ಶಾಸ ಕರ ನೇತೃತ್ವದ ಸಮಿತಿ ಪರೀಶೀಲಿಸಿ ಅಂತಿಮ ಗೊಳಿಸಲಿದೆ. ಆನಂತರ ನಾನು ಮತ್ತು ಮುಖ್ಯ ಮಂತ್ರಿಗಳು ಸೇರಿ ಅಂತಿಮಗೊಳಿಸಿ ಬಿಫಾರಂ ನೀಡುತ್ತೇವೆ. ಒಟ್ಟಾರೆ ಆಗಸ್ಟ್ 6ರ ಒಳಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಆಗಸ್ಟ್ 7ರಿಂದ ಬಿಫಾರಂ ಕೂಡ ನೀಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಬಿಬಿಎಂಪಿ ವಿಭಜನೆ ಈಗ ಅಪ್ರಸ್ತುತ: ಬಿಬಿಎಂಪಿ ಚುನಾವಣೆ ಮುಂದೂಡಲು ಸರ್ಕಾರ ಯತ್ನಿಸಿತು ಎನ್ನುವ ಚರ್ಚೆ ಈಗ ಬೇಡ. ಸರ್ಕಾರ ಮತ್ತೆ ಚುನಾವಣೆ ಮುಂದೂಡಲು ಯತ್ನಿಸುತ್ತದೆ ಎನ್ನುವ ಪ್ರತಿಪಕ್ಷದ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಪಕ್ಷದ ಅಧ್ಯಕ್ಷನಾಗಿ ನಾನು ಚುನಾವಣೆಗೆ ಸಜ್ಜಾಗುತ್ತಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com