
ಬೆಂಗಳೂರು: ಬಿಬಿಎಂಪಿ ಚುನಾವಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಲು ಕ್ರಮಮಕೈಗೊಳ್ಳಲು ಅಧಿಕಾರಿಗಳಿಗೆ ಹಾಗೂ
ಪೊಲೀಸ್ ಸಿಬ್ಬಂದಿಗೆ ಚುನಾವಣಾ ಆಯೋಗ ಸೂಚಿಸಿದೆ. ಚುನಾವಣಾ ಆಯೋಗದ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆದಿದ್ದು, ನೀತಿ ಸಂಹಿತೆ ಪಾಲನೆಯಾಗುವಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಚುನಾವಣೆಯ ವೇಳೆ ಹೆಚ್ಚುತ್ತಿದ್ದು,ಈ ಬಗ್ಗೆ ಅಧಿಕಾರಿಗಳು ಕಣ್ಗಾವಲು ಇಡಬೇಕಿದೆ. ನೀತಿ ಸಂಹಿತೆ ಉಲ್ಲಂಘನೆಯಾದಂತೆ ಚುನಾವಣಾ ವೀಕ್ಷಕರು ಹಾಗೂ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.ಆದರೆ ಚುನಾವನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಎಚ್ಚರ ವಹಿಸಬೇಕು. ಮದ್ಯ ಸಾಗಾಟದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಲಿದ್ದಾರೆ. ಆದರೆ ಎಲ್ಲ ಅಧಿಕಾರಿಗಳು ನೀತಿ ಸಂಹಿತೆ ಪಾಲನೆಗೆ ಎಚ್ಚರ ವಹಿಸಿ, ಪಾರದರ್ಶಕ
ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿದೆ.
ರು. 5 ಲಕ್ಷ ಮಿತಿ: ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ರು.5 ಲಕ್ಷದ ಮಿತಿ ಹೇರಲಾಗಿದೆ. ಆದರೆ, ಈ ಮಿತಿ ಮೀರುವಂತೆ ಅಭ್ಯರ್ಥಿಗಳು ಖರ್ಚು ಮಾಡುವ ಸಾಧ್ಯತೆ ಯೂ ಇರುವುದರಿಂದ ಚುನಾವಣಾಧಿಕಾರಿ ಗಳು ಹಾಗೂ ಚುನಾವಣಾ ವೀಕ್ಷಕರು ಈ ಬಗ್ಗೆ ಕಣ್ಗಾವಲು ಇಡಲಿದ್ದಾರೆ.
Advertisement