ಮಧ್ಯರಾತ್ರಿವರೆಗೂ ಕೈ ಸರ್ಕಸ್: ಕೊನೆಗೂ ಬಿಡುಗಡೆಯಾಗದ ಅಭ್ಯರ್ಥಿಗಳ ಪಟ್ಟಿ

ಬಿಬಿಎಂಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಥಾ ಪ್ರಕಾರ ಕಾಂಗ್ರೆಸ್ ವಿಳಂಬ ಸೂತ್ರಕ್ಕೆ ಅಪ್ಪಿಕೊಂಡಿದ್ದು ಗುರುವಾರ ಮಧ್ಯಾಹ್ನದಿಂದ ಭಾರಿ ಸರ್ಕಸ್ ನಡೆಸುತ್ತಿದೆ. ಆದರೆ ಈ ವರೆಗೂ ಪಟ್ಟಿ ಮಾತ್ರ ಬಿಡುಗಡೆಯಾಗಿಲ್ಲ.
ಬಿಬಿಎಂಪಿ ಚುನಾವಣೆ(ಸಾಂಕೇತಿಕ ಚಿತ್ರ)
ಬಿಬಿಎಂಪಿ ಚುನಾವಣೆ(ಸಾಂಕೇತಿಕ ಚಿತ್ರ)

ಬೆಂಗಳೂರು: ಬಿಬಿಎಂಪಿ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಥಾ ಪ್ರಕಾರ ಕಾಂಗ್ರೆಸ್ ವಿಳಂಬ ಸೂತ್ರಕ್ಕೆ ಅಪ್ಪಿಕೊಂಡಿದ್ದು ಗುರುವಾರ ಮಧ್ಯಾಹ್ನದಿಂದ ಭಾರಿ ಸರ್ಕಸ್ ನಡೆಸುತ್ತಿದೆ. ಆದರೆ ಈ ವರೆಗೂ ಪಟ್ಟಿ ಮಾತ್ರ ಬಿಡುಗಡೆಯಾಗಿಲ್ಲ.

ಬೆಂಗಳೂರಿನ ಹೊರ ವಲಯದಲ್ಲಿರುವ ಖಾಸಗಿ ರೆಸಾ ರ್ಟ್‍ನಲ್ಲಿ ಸಭೆ ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಬೆಂಗಳೂರು ನಗರವನ್ನು ಪ್ರತಿನಿ„ಸುವ ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ರೋಶನ್ ಬೇಗ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ಕಾರ್ಯದರ್ಶಿ ಬೋಸ್‍ರಾಜ್ ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ನಿಗದಿತ ಅವಧಿಗಿಂತ ಒಂದು ಗಂಟೆ ತಡವಾಗಿ ಆರಂಭಗೊಂಡ ಸಭೆ ಮಧ್ಯರಾತ್ರಿಯ ವರೆಗೂ ಮುಂದುವರೆಯಿತು. ಅದಾಗಿಯೂ ಪಟ್ಟಿಯನ್ನು ಅಂತಿಮಗೊಳಿಸುವುದು ಮಾತ್ರ ಸಾಧ್ಯವಾಗಿಲ್ಲ. ಪಕ್ಷ ಮತ್ತು ಸರ್ಕಾರ ನಿಗದಿಗೊಳಿಸಿದ ಮಾನದಂಡ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹಾಗೂ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸುವುದು ಮೊದಲ ಸಭೆಯಲ್ಲಿ ಕಷ್ಟಕರವಾಗಿ ಪರಿಣಮಿಸಿದೆ. ಕುತೂಹಲಕಾರಿ ಸಂಗತಿ ಎಂದರೆ ಮಾಜಿ  ಮೇಯರ್ ಕೆ.ಚಂದ್ರಶೇಖರ್ ಅವರಿಗೆ ಟಿಕೆಟ್ ಸಿಗದೆ ವಂಚಿತರಾಗಿದ್ದು. ಕಾಂಗ್ರೆಸ್ ಟಿಕೆಟ್ ಬಯಸಿ 1000ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಚಂದ್ರಶೇಖರ್ ಈ ನಿಯಮವನ್ನು ಪಾಲಿಸದೇ ಹನುಮಂತನಗರ ವಾರ್ಡ್‍ನಲ್ಲಿ ಪ್ರಚಾರ ಕೈಗೊಂಡಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ್ದರಿಂದ ಅಂತಿಮವಾಗಿ ಬಲರಾಂ ಎಂಬುವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com