79 ಅಭ್ಯರ್ಥಿಗಳ ಬಿಜೆಪಿ 2ನೇ ಪಟ್ಟಿ ಬಿಡುಗಡೆ

ಬಿಬಿಎಂಪಿ ಚುನಾವಣೆಗೆ ಬಿಜೆಪಿಯು 79 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಇದರೊಂದಿಗೆ ಒಟ್ಟು 175 ಅಭ್ಯರ್ಥಿಗಳ ಆಯ್ಕೆ...
ಬಿಜೆಪಿ ಲೋಗೋ
ಬಿಜೆಪಿ ಲೋಗೋ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಬಿಜೆಪಿಯು 79 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಇದರೊಂದಿಗೆ ಒಟ್ಟು 175 ಅಭ್ಯರ್ಥಿಗಳ ಆಯ್ಕೆ ಅಂತಿಮ ಗೊಂಡಂತಾಗಿದ್ದು ಇನ್ನೂ 23 ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಿದೆ. ಮೊದಲ ಹಂತದಲ್ಲಿ ಪಕ್ಷದಿಂದ 96 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಎರಡನೇ ಪಟ್ಟಿಯಲ್ಲೂ ಹೊಸ ಮುಖಗಳಿಗೆ ಅವಕಾಶ ದೊರೆತಿದೆ. ಮಾಜಿ ಮೇಯರ್ ಎನ್.ಶಾಂತಕುಮಾರಿ ಅವರಿಗೆ ಮಾರುತಿ ಮಂದಿರ ವಾರ್ಡ್‍ನಲ್ಲಿ ಸ್ಪರ್ಧಿ ಸಲು ಅವಕಾಶ ದೊರೆತಿದೆ. ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿದ್ದ ಅಶ್ವತ್ಥನಾರಾಯಣಗೌಡ ತಮ್ಮ ಹಳೆಯ ವಾರ್ಡ್ ಕೊಡಿಗೇಹಳ್ಳಿ; ಜಾಹೀರಾತು ನಕಲಿ ಸಹಿ ಆರೋಪಕ್ಕೆ ಗುರಿಯಾಗಿದ್ದ ಟಿ.ವಿ.ಕೃಷ್ಣ ತಮ್ಮ ಹಳೆಯ ವಾರ್ಡ್ ಬಾಪೂಜಿನಗರದಿಂದಲೇ ಅವಕಾಶ ಪಡೆದಿದ್ದಾರೆ. ಮಾಜಿ ಸದಸ್ಯ ಡಾ. ರಾಜು ಅತ್ತಿಗುಪ್ಪೆ ವಾರ್ಡ್‍ನಲ್ಲಿ ಸ್ಪರ್ದಿಸಲಿದ್ದಾರೆ.

ಬಿಜೆಪಿ 2ನೇ ಪಟ್ಟಿ ಮಾರಪ್ಪನಪಾಳ್ಯ-ಗೋಪಾಲ್, ಶಕ್ತಿಗಣಪತಿನಗರ-ಕೌಶಲ್ಯ ಕೋದಂಡರಾಮ್, ಶಂಕರಮಠ-ಬಿ.ಎಂ. ಶ್ರೀನಿವಾಸ್, ವೃಷಭಾವತಿ ನಗರ-ಗಂಗಮ್ಮ ಶಂಕರಪ್ಪ, ರಾಮಜಮಹಲ್ ಗುಟ್ಟಹಳ್ಳಿ-ಹೇಮಲತಾ ಸತೀಶ್ ಸೇಠ್, ಸುಬ್ರಹ್ಮಣ್ಯ- ನಗರ ಬಿ. ಶಿವರಾಜಮೂರ್ತಿ, ಅಗರ-ಭವ್ಯ, ಗಾಂಧಿನಗರ-ಗೋಪಾಲಕೃಷ್ಣ, ಅಗ್ರಹಾರ ದಾಸರಹಳ್ಳಿ- ಶಿಲ್ಪಾ ಜಿ. ಶ್ರೀಧರ್, ಡಾ.ರಾಜ್‍ಕುಮಾರ್ -ಎಂ.ಜಿ. ಜಯರತ್ನ, ಮಾರುತಿಮಂದಿರ ಶಾಂತಕುಮಾರಿ, ವಿಜಯನಗರ-ಲತಾ ಗೋಪಿನಾಥ ರಾಜು, ಅತ್ತಿಗುಪ್ಪೆ-ಡಾ.ರಾಜು, ಬಾಪೂಜಿನಗರ-ಟಿ.ವಿ. ಕೃಷ್ಣ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ-ವೇದಾ ರಮೇಶ್. ಸುಂಕೇನಹಳ್ಳಿ-ರಮೇಶ್, ವಿಶ್ವೇಶ್ವರಪುರ-ವಾಣಿರಾವ್, ಸಿದ್ದಾಪುರ- ವಸಂತಕುಮಾರ್, ಹನುಮಂತನಗರ-ಕೆಂಪೇಗೌಡ, ಶ್ರೀನಗರ-  ಜೆ.ಎನ್.ಸವಿತಾ, ಗಿರಿನಗರ-ಮೀನಾ, ಕತ್ರಿಗುಪ್ಪೆ-ಸಂಗಾತಿ ವೆಂಕಟೇಶ್, ವಿದ್ಯಾಪೀಠ- ಶ್ಯಾಮಲಾ ಸಾಯಿಕುಮಾರ್, ಗಣೇಶಮಂದಿರ-ಲಕ್ಷ್ಮಿ ಉಮೇಶ್, ಕರಿಸಂದ್ರ-ಯಶೋಧಾ ಲಕ್ಷ್ಮಿಕಾಂತ್. ಕುಮಾರಸ್ವಾಮಿ ಲೇಔಟ್-ಎಲ್. ಶ್ರೀನಿವಾಸ್, ಹೊರಮಾವು-ಎನ್.ಭಾರತಿ ಮುನಿರಾಜು, ವಿಜ್ಞಾನಪುರ-ಎಸ್.ರಾಜು, ಬಸವನಪುರ- ಕೆ. ಸುಂದರ್‍ರಾಜು, ಜಕ್ಕೂರು-ಕೆ.ವಿ. ಮುನೀಂದ್ರ ಕುಮಾರ್, ಬ್ಯಾಟರಾಯನಪುರ-ಎಲ್. ನಂಜಪ್ಪ , ಕೊಡಿಗೇಹಳ್ಳಿ-ಅಶ್ವಥ್ ನಾರಾಯಣಗೌಡ, ಕುವೆಂಪುನಗರ-ರಾಮಪ್ಪ . ದೊಡ್ಡಬಿದರಕಲ್ಲು-ಮಾಲತೇಶ್, ಹೆರೋಹಳ್ಳಿ- ಎಚ್.ರಘುನಂದನ್, ಉಲ್ಲಾಳು-ಶಾರದಾ ಮುನಿರಾಜು, ಮಲ್ಲಸಂದ್ರ-ಎನ್.ಲೋಕೇಶ್, ಬಾಗಲಗುಂಟೆ ಕೆ.ನರಸಿಂಹ, ಟಿ.ದಾಸರಹಳ್ಳಿ-ಉಮಾದೇವಿ ನಾಗರಾಜ್, ಪೀಣ್ಯ ಕೈಗಾರಿಕಾ ಪ್ರದೇಶ-ಕಲಾ ಅಂದಾನಪ್ಪ, ಕುಶಾಲ್‍ನಗರ- ಕಾವಲ್ ಭೈರಸಂದ್ರ-ಗೌರಮ್ಮ, ದೇವರ ಜೀವನಹಳ್ಳಿ- ಪ್ರಮೋದ್, ಸಗಾಯಪುರ-ಶ್ರೀಕಾಂತ್ ಸೀತಾರಾಮ್, ಎಸ್.ಕೆ. ಗಾರ್ಡನ್ ಸುನೀಲ್‍ಕುಮಾರ್, ಪುಲಿಕೇಶಿನಗರ-ವೇಲು, ನಾಗವಾರ-ಉಮ್ಮೆ ಕೌಸರ್, ಕಮ್ಮನಹಳ್ಳಿ- ಮುನಿಲಕ್ಷ್ಮ್ಮಮ್ಮ, ಮಾರುತಿ ಸೇವಾನಗರ-ಸುಮಾ ಗರುಡಾಚಾರ್‍ಪಾಳ್ಯ- ಅನಂತರಾಮಯ್ಯ, ದೊಡ್ಡನೆಕ್ಕುಂದಿ-ಶ್ವೇತಾ ವಿಜಯ್ಕು ಕುಮಾರ್. ಬೊಮ್ಮನಹಳ್ಳಿ-ಸಿ.ಆರ್.ರಾಮಮೋಹನ್ ರಾಜು, ಜರಗನಹಳ್ಳಿ-ಬಿ.ಎಂ.ಶೋಭಾ, ಬಿಳೇಕಹಳ್ಳಿ-ಕೆ.ನಾರಾಯಣ ರಾಜು, ಹೊಂಗಸಂದ್ರ-ಭಾರತಿ ರಾಮಚಂದ್ರ, ಯಲಚೇನಹಳ್ಳಿ-ವಿ.ಬಾಲಕೃಷ್ಣ, ಸಂತಪುರ-ವಿಜಯಾ ರಮೇಶ್. ಕೊಟ್ಟಿಗೆ ಪಾಳ್ಯ-ತಿಮ್ಮರಾಜು, ಜ್ಞಾನಭಾರತಿ-ತೇಜಸ್ವಿನಿ ಸೀತಾ ಮರಾಮಯ್ಯ, ಆರ್‍ಆರ್‍ನಗರ-ನಳಿನಿ ಮಂಜುನಾಥ್, ಶೆಟ್ಟಿಹಳ್ಳಿ-ಕೆ.ಸಿ.ವೆಂಕಟೇಶ್, ರಾಜಗೋಪಾಲನಗರ-ಅನಿತಾ ಸುರೇಶ್, ಹೆಗ್ಗನಹಳ್ಳಿ-ಭಾಗ್ಯಮ್ಮ ಕೃಷ್ಣಯ್ಯ, ಎಚ್‍ಬಿಆರ್ ಲೇಔಟ್--ಆರ್.ಪ್ರಕಾಶ್, ಬಾಣಸವಾಡಿ- -ಕೋದಂಡರೆಡ್ಡಿ, ಕಾಡುಗೊಂಡನಹಳ್ಳಿ-ಆನಂದ, ಲಿಂಗರಾಜಪುರ ಸಾವಿತ್ರಿ, ಬೆನ್ನಿಗಾನಹಳ್ಳಿ- ವಿಜಯಲಕ್ಷ್ಮಿ ಕೃಷ್ಣ, ಸಿವಿರಾಮನ್‍ನಗರ-ಅರುಣಾ ರವಿ, ತಿಪ್ಪಸಂದ್ರ-ಸಾವಿತ್ರಿ ವಿಜಯಕುಮಾರ್, ಸರ್ವಜ್ಞನಗರ ಶಶಿರೇಖಾ ಮುಕುಂದ, ಹೊಯ್ಸಳನ ಗರ-ಬಿ.ಎಂ.ಸೋಮು, ಜೀವನ್‍ಬೀಮಾನಗರ-- ವೀಣಾಕುಮಾರಿ ರಾಮಕೃಷ್ಣ, ರಾಮಮೂರ್ತಿ- ನಗರ- ಪದ್ಮಾವರಿ ಶ್ರೀನಿವಾಸ್, ದೇವಸಂದ್ರ- ಮಂಜುಲಾದೇವಿ ಶ್ರೀನಿವಾಸ್, ವಿಜ್ಞಾನನಗರ-- ಮೋಹನ್‍ಮೂರ್ತಿ, ಜಾಲಹಳ್ಳಿ-ರಾಕೇಶ್, ಎಚ್ ಎಂಟಿ ಬಡಾವಣೆ-ಮಂಜುನಾಥಬಾಬು, ಲಕ್ಷ್ಮಿ ದೇವಿನಗರ-ಮಾಕಳಿ ಪರಮೇಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com