ಮುಕ್ತ ವಿವಿಗೆ ಮಹಿಳೆಯರ ಸಂಖ್ಯೆ ಹೆಚ್ಚಳ

ಮುಕ್ತ ಮತ್ತು ದೂರ ಶಿಕ್ಷಣದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಬಯಸಿ ದಾಖಲಾತಿ ಪಡೆಯುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ
ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರು(ಸಾಂಕೇತಿಕ ಚಿತ್ರ)
ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರು(ಸಾಂಕೇತಿಕ ಚಿತ್ರ)

ಬೆಂಗಳೂರು: 2020 ರ ವೇಳೆಗೆ ಮುಕ್ತ ಮತ್ತು ದೂರ ಹೀಗೆ ಒಟ್ಟು ದಾಖಲಾತಿ ಅನುಪಾತದಲ್ಲಿ ಮಹಿಳೆಯರ ಸಂಖ್ಯೆ ಶೇ.30 ರಷ್ಟು ಆಗಬೇಕು ಎಂದು ವಿಶ್ರಾಂತ ಕುಲಪತಿ ಡಾ.ಎನ್. ಎಸ್ ರಾಮೇಗೌಡ ಹೇಳಿದರು.
ಜೆ.ಪಿ.ನಗರದ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ನಡೆದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 28 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪದವಿ ಪ್ರಮಾಣ ಪತ್ರ ನೀಡಿ ನಂತರ ಮಾತನಾಡಿದರು.

ಮಹಿಳೆಯರಿಗೆ ಹಾಗೂ ಉನ್ನತ ವ್ಯಾಸಂಗ ಬಯಸುವ ಉದ್ಯೋಗಿಗಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಮುಕ್ತ ಮತ್ತು ದೂರಶಿಕ್ಷಣ ಮಹತ್ವದ ಪಾತ್ರ ವಹಿಸುತ್ತಿದೆ. ಸರ್ವೆ ಪ್ರಕಾರ ಮುಕ್ತ ಮತ್ತು ದೂರ ಶಿಕ್ಷಣದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಬಯಸಿ ದಾಖಲಾತಿ ಪಡೆಯುತ್ತಿರುವವರ ಸಂಖ್ಯೆ ಕೇವಲ ಶೇ.13-ರಷ್ಟಿದೆ. ಅದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚುವಂತಾಗಬೇಕು ಅದಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ದೂರಶಿಕ್ಷಣ ವಿವಿಗಳು ನೀಡಲಿವೆ ಎಂದರು.

ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಜನತೆ (18-23 ವರ್ಷ) ದಾಖಲಾತಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. 2011ರಲ್ಲಿ ನಡೆದ ಸರ್ವೆ ಪ್ರಕಾರ ಒಟ್ಟು ದಾಖಲಾತಿ ಸಂಖ್ಯೆ(ಜಿಇಆರ್) ಶೇ.19.4  ರಷ್ಟಿದೆ. ಅದರಲ್ಲಿ ಪುರುಷರು ಶೇ.20.8  ಇದ್ದರೆ, ಮಹಿಳೆಯರು ಶೇ.17ರಷ್ಟಿದ್ದಾರೆ. ಕರ್ನಾಟಕದಲ್ಲಿನ ಜನಸಂಖ್ಯೆಯಲ್ಲಿ ಶೇ.25.5 ರಷ್ಟು ಮಂದಿ ಈ ದೂರಶಿಕ್ಷಣದ ಉಪಯೋಗ ಪಡೆಯುತ್ತಿದ್ದಾರೆ. ಅಂದರೆ, ದೇಶದ ಜಿಇಆರ್‍ಗಿಂತ ರಾಜ್ಯದಲ್ಲಿ ಇದರ ಸಂಖ್ಯೆ ಹೆಚ್ಚಿದೆ ಎಂದರು.

ರಾಜ್ಯದಿಂದ ಪದವಿ ಪಡೆದಿರುವ 2,500 ವಿದ್ಯಾರ್ಥಿಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ ಮೂವರಿಗೆ ಚಿನ್ನದ ಪದಕ ಹಾಗೂ ಪದವಿ ಪತ್ರ ನೀಡಿ ಗೌರವಿಸಲಾಯಿತು. ಇಗ್ನೊದ ಪ್ರಾದೇಶಿಕ ನಿರ್ದೇಶಕ ಡಾ. ಎಂ.ಎಸ್. ಪಾರ್ಥಸಾರಥಿ, ಅಧಿಕಾರಿಗಳು, ಸಿಬ್ಬಂದಿ ವರ್ಗ ಸೇರಿದಂತೆ ಪದವಿ ಪಡೆದ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com