ಬೆಂಗಳೂರು: ಮಾಜಿ ಮೇಯರ್ ಹಾಗೂ ಕಳೆದ 35 ವರ್ಷಗಳಿಂದ ಬಿಜೆಪಿಯಲ್ಲೇ ಇರುವ ವೆಂಕಟೇಶ ಮೂರ್ತಿಯ ವರು ಭಾನುವಾರ ತಮ್ಮ 500ಕ್ಕೂ ಹೆಚ್ಚು ಬೆಂಬಲಿಗ ರೊಂದಿಗೆ ಪ್ರತಿಭಟನೆ ನಡೆಸಿ ಪಕ್ಷಕ್ಕೆ ಬಂಡಾಯದ ಸಂದೇಶ ರವಾನಿಸಿದರು. ಹಾಗೆಯೇ, ಕಾರ್ಯಕರ್ತ ರೊಂದಿಗೆ ಮಾತನಾಡಿ, ಪಕ್ಷದ ಮುಖಂಡರೊಂದಿಗೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿ ಸೋಮವಾರ ನಿರ್ಧಾರ ಪ್ರಕಟಿಸುವುದಾಗಿ ವೆಂಕಟೇಶಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ವಿದ್ಯಾಪೀಠ ವೃತ್ತದ ಬಳಿ ಜಮಾಯಿಸಿದ್ದ 500ಕ್ಕೂ ಹೆಚ್ಚು ಜನರು ವೆಂಕಟೇಶ್ ಮೂರ್ತಿ ಯವರಿಗೆ ಟಿಕೆಟ್ ತಪ್ಪಿಹೋ ಗಿದ್ದರ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದರು. ನಂತರ
ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಮನೆಗೆ ತೆರಳಿ ಪ್ರಶ್ನಿಸಿದರು. ಅಷ್ಟೇ ಅಲ್ಲ, ಸಂಸದ ಅನಂತಕುಮಾರ್ ಬಿಹಾರದಲ್ಲಿರುವ ಕಾರಣ ವೆಂಕಟೇಶಮೂರ್ತಿಯವರಿಗೆ ಮುಖತಃ ಭೇಟಿ ಸಾಧ್ಯವಾಗಿಲ್ಲ.
ಇನ್ನು ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಸುಬ್ಬ ನರಸಿಂಹ ಅವರೊಂದಿಗೂ ಚರ್ಚಿಸಿದರು. ಅಲ್ಲಿಯೂ ವೆಂಕಟೇಶ ಮೂರ್ತಿಯವರಿಗೆ ಸ್ಪಷ್ಟ ಭರವಸೆ ಸಿಗಲಿಲ್ಲ. ಇಡೀ ದಿನದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸೋಮವಾರ ಸಭೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
Advertisement