ತರಬೇತಿಗೆ ಗೈರಾದರೆ ಶಿಸ್ತು ಕ್ರಮ

ಬಿಬಿಎಂಪಿ ಚುನಾವಣೆಗಾಗಿ ಚುನಾವಣಾ ಆಯೋಗ ನಡೆಸಿದ ಮೊದಲ ತರಬೇತಿಯಲ್ಲಿ ಶೇ.70ರಷ್ಟು ಸಿಬ್ಬಂದಿ ಮಾತ್ರ ಹಾಜರಾಗಿದ್ದು...
ಜಿ. ಕುಮಾರ್ ನಾಯಕ್
ಜಿ. ಕುಮಾರ್ ನಾಯಕ್

ಬೆಂಗಳೂರು: ಬಿಬಿಎಂಪಿ ಚುನಾವಣೆಗಾಗಿ ಚುನಾವಣಾ ಆಯೋಗ ನಡೆಸಿದ ಮೊದಲ ತರಬೇತಿಯಲ್ಲಿ ಶೇ.70ರಷ್ಟು ಸಿಬ್ಬಂದಿ ಮಾತ್ರ ಹಾಜರಾಗಿದ್ದು, ಇದು ಎರಡನೇ ತರಬೇತಿಯಲ್ಲೂ ಪುನರಾವರ್ತನೆಯಾದರೆ ಜನ ಪ್ರತಿನಿಧಿ ಕಾಯ್ದೆ ಪ್ರಕಾರ ಕ್ರಮ ಜರುಗಿಸ ಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ. ಕುಮಾರ್ ನಾಯಕ್ ಎಚ್ಚರಿಸಿ ದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಆ.12ರಂದು 30 ಕೇಂದ್ರಗಳಲ್ಲಿ ನಡೆದ ಚುನಾವಣಾ ಸಿಬ್ಬಂದಿ ತರಬೇತಿಯಲ್ಲಿ ಶೇ.70 ರಷ್ಟು ಸಿಬ್ಬಂದಿ ಮಾತ್ರ ಹಾಜರಾಗಿದ್ದಾರೆ. ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಮನವಿ ಮಾಡಿ, 9,343 ಪ್ರಿಸೈಡಿಂಗ್ ಅಧಿಕಾರಿ ಹಾಗೂ 9,257 ಮತಗಟ್ಟೆ ಸಿಬ್ಬಂದಿ ಸೇರಿದಂತೆ ಒಟ್ಟು 35 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಇದರಲ್ಲಿ ಪ್ರಿಸೈಡಿಂಗ್ ಹಾಗೂ ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಗೆ 6,542 ಪ್ರಿಸೈಡಿಂಗ್ ಅಧಿಕಾರಿಗಳು ಮಾತ್ರ ಹಾಜರಾಗಿದ್ದು, 2,801 ಅಧಿಕಾರಿಗಳು ಬಂದಿಲ್ಲ. 6,808 ಮತಗಟ್ಟೆ ಸಿಬ್ಬಂದಿ ಹಾಜರಾಗಿದ್ದು, ಉಳಿದ 2,449 ಸಿಬ್ಬಂದಿ ಗೈರುಹಾಜರಾಗಿದ್ದಾರೆ.

ಪ್ರಿಸೈಡಿಂಗ್ ಅಧಿಕಾರಿಗಳು ಶೇ.30 ಹಾಗೂ ಮತಗಟ್ಟೆ ಸಿಬ್ಬಂದಿ ಶೇ.26 ರ ಪ್ರಮಾಣದಲ್ಲಿ ಗೈರು-ಹಾಜರಾಗಿದ್ದಾರೆ. ನಡೆಯಲಿದ್ದು, ಇದಕ್ಕೂ ಹಾಜರಾಗದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಅನಿವಾರ್ಯ ಕಾರಣಗಳಿಂದ ಕೆಲವೊಮ್ಮೆ ಗೈರು ಹಾಜರಾಗಬೇಕಾಗುತ್ತದೆ. ಆದರೆ ಗೈರು ಹಾಜರಾದವರ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಚುನಾವಣಾ ಪ್ರಕ್ರಿಯೆಗೆ ತೊಂದರೆಯಾ ಗುವ ಸಾಧ್ಯತೆಯಿದೆ. ಜನ ಪ್ರತಿನಿಧಿ ಕಾಯ್ದೆ 1951ರ 134ರ ಪ್ರಕಾರ ಜಾಹಿರಾತು ಅಥವಾ ಸುದ್ದಿ ಪ್ರಕಟಿಸಿ ನೋಟಿಸ್ ನೀಡಲಾಗುತ್ತಿದೆ. ನಂತರವೂ ತರಬೇತಿಗೆ ಬಾರದಿದ್ದರೆ ಕಾಯ್ದೆಯ ಸೆಕ್ಷನ್ 12 ರಪ್ರಕಾರ ದಂಡ ಹಾಕಲಾಗುವುದು. ಇದರಿಂದ ಸರ್ಕಾರಿ ನೌಕರರಿಗೆ ಬಡ್ತಿ ಅಥವಾ ಇನ್ಯಾವುದೇ ಉನ್ನತ ದರ್ಜೆಗೆ ಏರಲು ತೊಂದರೆಯಾಗುತ್ತದೆ. ಆದರೆ ಅನಿವಾರ್ಯವಿದ್ದಲ್ಲಿ ಮಾತ್ರ ಕ್ರಮ ಜರುಗಿಸಲಾಗುತ್ತದೆ. ಚುನಾವಣಾ ಸಮಯವಾಗಿರುವುದರಿಂದ ಸಿಬ್ಬಂದಿ ಕಡ್ಡಾಯ ಹಾಜರಾಗಿ ತರಬೇತಿ ಪಡೆಯಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com