ಎಸ್.ಆರ್ ಪಾಟಿಲ್
ಜಿಲ್ಲಾ ಸುದ್ದಿ
ಸ್ಮಾರ್ಟ್ ವಿಲೇಜ್ ಆಗಿ ರೂಪುಗೊಳ್ಳುತ್ತಿದೆ ಎಸ್.ಆರ್ ಪಾಟೀಲ್ ಹುಟ್ಟೂರಿನ ಗ್ರಾಮ
ಎಸ್.ಆರ್ ಪಾಟಿಲ್ ಹುಟ್ಟೂರು ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮ ಭವಿಷ್ಯದ ಸ್ಮಾರ್ಟ್ ವಿಲೇಜ್ ಆಗಿ ಅವರ ರೂಪಾಂತರಗೊಳ್ಳುತ್ತಿದೆ.
ಬಾಗಲಕೋಟೆ: ಎಸ್.ಆರ್ ಪಾಟಿಲ್ ಹುಟ್ಟೂರು ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮ ಭವಿಷ್ಯದ ಸ್ಮಾರ್ಟ್ ವಿಲೇಜ್ ಆಗಿ ಅವರ ರೂಪಾಂತರಗೊಳ್ಳುತ್ತಿದೆ.
ಕರ್ನಾಟಕದಲ್ಲೇ ಇದು ಪ್ರಥಮ ಪ್ರಯತ್ನವಾಗಿದ್ದು ಖಾಸಗಿಯವರ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಸಚಿವ ಎಸ್.ಆರ್ ಪಾಟಿಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಮೇರಿಕಾದ ಇಂಜಿನಿಯರ್ ಗಳ ತಂಡ ಇ-ಕಿಸಾನ್ ಸಂಸ್ಥೆ ಆರಂಭಿಸಿದ್ದು ಅದರ ಅಡಿಯಲ್ಲಿ ಸ್ಮಾರ್ಟ್ ವಿಲೇಜ್ ಯೋಜನೆ ಕೈಗೆತ್ತಿಕೊಂಡಿದೆ. ಗ್ರಾಮದಲ್ಲಿ ನ್ಯಾನೋ ಟೆಕ್ನಾಲಜಿ ಆಧಾರಿತ ಶುದ್ಧ ಕುಡಿಯುವ ನೀರು, ವೈಜ್ಞಾನಿಕ ಪದ್ಧತಿಯನ್ನೊಳಗೊಂದ ಆರೋಗ್ಯ ತಪಾಸಣೆ, ವೈಜ್ಞಾನಿಕ ಪದ್ಧತಿಯಲ್ಲಿ ಮಣ್ಣು ಪರೀಕ್ಷೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುವದು ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ