ಕತ್ತಲು ನಿವಾರಣೆಗೆ ಸರ್ಕಾರದ ಪ್ರಯತ್ನ

ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಕ್ಷಾಮ ತಡೆಯಲು ಸರ್ಕಾರ 750 ಮೆ.ವ್ಯಾ. ವಿದ್ಯುತ್ ಖರೀದಿಗೆ...
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಕ್ಷಾಮ ತಡೆಯಲು ಸರ್ಕಾರ 750 ಮೆ.ವ್ಯಾ. ವಿದ್ಯುತ್ ಖರೀದಿಗೆ ತೀರ್ಮಾನಿಸಿದೆ.
ಈಗಾಗಲೇ ವಿದ್ಯುತ್ ಖರೀದಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವ ಸರ್ಕಾರ ಜೆಎಎಸ್‍ಡಬ್ಲೂ ಕಂಪೆನಿ ಸೇರಿದಂತೆ 39 ಖಾಸಗಿ ಸಂಸ್ಥೆಗಳಿಂದ ಪ್ರತಿ ಯೂನಿಟ್ ವಿದ್ಯುತ್ ಅನ್ನು ರು.5.8ರ ದರದಲ್ಲಿ ಖರೀದಿಸಲು ಮುಂದಾಗಿದೆ.
ರಾಜ್ಯದಲ್ಲಿ ಅನೇಕ ವರ್ಷಗಳ ನಂತರ ಮುಂಗಾರು ವೈಫಲ್ಯವಾಗಿ 118 ತಾಲೂಕುಗಳಲ್ಲಿ ಬರ ಕಾಣಿಸಿಕೊಂಡಿದೆ. ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾಘಟಕಗಳಲ್ಲಿ ಶೇ.48ರಷ್ಟು ನೀರಿನ ಕೊರತೆ ಇದೆ. ಇದರಿಂದಾಗಿ 10,189 ಮೆ.ವ್ಯಾ. ಉತ್ಪಾದನಾ ಸಾಮಥ್ರ್ಯ ಹೊಂದಿರುವ ರಾಜ್ಯದ ಘಟಕಗಳಲ್ಲಿ ಈಗ ಕೇವಲ 6,600 ಮೆ.ವ್ಯಾ. ಮಾತ್ರ ಉತ್ಪಾದನೆಯಾಗುತ್ತಿದೆ.
ಆದರೆ ವಿದ್ಯುತ್ ಬೇಡಿಕೆ ಮಾತ್ರ 9000 ಮೆ.ವ್ಯಾ.ಗೂ ಹೆಚ್ಚಾಗಿದೆ. ಅಂದರೆ ಸುಮಾರು 3000ಕ್ಕೂ ಅಧಿಕ ಮೆ.ವ್ಯಾ. ಕೊರತೆ ಉಂಟಾಗಿದೆ. ವಿದ್ಯುತ್ ಖರೀದಿ ಸುವುದು ಅನಿವಾರ್ಯ ಎಂದು ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ತಿಳಿಸಿದರು. ರಾಜ್ಯದ ಪ್ರಮುಖ ವಿದ್ಯುತ್ ಮೂಲವಾದ ಯುಪಿಸಿಎಲ್ ಘಟಕದ ಇಂಧನ ಪೂರೈಕೆ ಪೈಪ್‍ಲೈನ್ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತವಾಗಿದೆ. ರಾಜ್ಯಕ್ಕೆ ಸಿಗುತ್ತಿದ್ದ 1200 ಮೆ.ವ್ಯಾ. ವಿದ್ಯುತ್ ಕೈ ತಪ್ಪಿದೆ. ಅದೇ ರೀತಿ ಬಿಟಿ ಪಿಎಸ್, ಆರ್‍ಟಿಪಿಎಸ್ ಮತ್ತು ಸಿಜಿಎಸ್ ಘಟಕಗಳು ಕೂಡ ತಾಂತ್ರಿಕಕಾರಣಗಳಿಂದ ಸ್ಥಗಿತವಾಗಿವೆ.

ಇನ್ನು ಪವನ ವಿದ್ಯುತ್‍ನಲ್ಲಿಯೂ ಸುಮಾರು500ಮೆ.ವ್ಯಾ. ಸಿಗುತ್ತಿಲ್ಲ. ಇದೆಲ್ಲದರಿಂದ ಸುಮಾರು 3,020 ಮೆ.ವ್ಯಾ. ವಿದ್ಯುತ್ ಕೊರತೆ ಯಾಗುತ್ತಿದ್ದು, ಇದನ್ನು ಸರಿದೂಗಿಸಲು ವಿದ್ಯುತ್ ಖರೀದಿಸಲಾಗುತ್ತಿದೆ ಎಂದು ವಿವರಣೆ ನೀಡಿದರು. ವಿದ್ಯುತ್ ಖರೀದಿಗಾಗಿ ನಡೆಸಿದ ಟೆಂಡರ್‍ನಲ್ಲಿ ಅನೇಕ ಸಂಸ್ಥೆಗಳು ರು.7 ವರೆಗೂ ದರ ಪ್ರಸ್ತಾವ ಮಾಡಿದ್ದವು. ಆದರೆ ಉತ್ಪಾದನಾ ಘಟಕಗಳು ರಾಜ್ಯದಲ್ಲೇ ಇರುವುದರಿಂದ ಅವುಗಳನ್ನು ವಿನಂತಿಸಿ ರು.5.8ರದರದಲ್ಲಿ ಪೂರೈಸುವಂತೆ ಅಂತಿಮಗೊಳಿಸಲಾಗಿದೆ. ಸದ್ಯದ ಯೋಜನೆಯಂತೆ ಮುಂದಿನ ಮೇವರೆಗೂ ವಿದ್ಯುತ್ ಖರೀದಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಪ್ರತಿ ತಿಂಗಳು ಸರ್ಕಾರಕ್ಕೆ ರು.378ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಹಾಗೆ ನೋಡಿದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಖಾಸಗಿ ಕಂಪನಿಗಳಿಂದ ಯೂನಿಟ್‍ಗೆ ರು.5.96ರ ದರದಲ್ಲಿ ಖರೀದಿಸುತ್ತಿದ್ದು, ರಾಜ್ಯ ಕಡಿಮೆ ಬೆಲೆಗೆ ಖರೀದಿಸಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com