• Tag results for ವಿದ್ಯುತ್

ಕೊರೋನಾ ಆತಂಕದ ನಡುವೆಯೇ ಶರಾವತಿ ಜಲ ವಿದ್ಯುತ್ ಯೋಜನೆಗೆ ಸಮೀಕ್ಷೆ ಆರಂಭ

ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಜಲ ವಿದ್ಯುತ್ ಯೋಜನೆಯನ್ನು ಪರಿಸರ ತಜ್ಞರು ಮತ್ತು ಇಂಧನ ತಜ್ಞರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ಕೊರೋನಾ ವೈರಸ್ ಮತ್ತು ಜೂನ್ ನಲ್ಲಿ ಮಾನ್ಸೂನ್ ಆರಂಭವಾಗುತ್ತಿದ್ದರೂ ಶರಾವತಿ ಜಲ ವಿದ್ಯುತ್ ಯೋಜನೆಯ ಜಿಯೋಟೆಕ್ನಿಕಲ್ ಅಧ್ಯಯನಗಳನ್ನು, ಸಮೀಕ್ಷೆಯನ್ನು ಆರಂಭಿಸಲಾಗಿದೆ.

published on : 27th May 2020

ವಿದ್ಯುತ್ ಬಿಲ್ ಕಡಿಮೆ ಮಾಡಿ, ಇಲ್ಲವಾದಲ್ಲಿ ಹೋರಾಟ ಅನಿವಾರ್ಯ: ಸಿದ್ದರಾಮಯ್ಯ

ಇದು ವಿದ್ಯುತ್ ದರ ಹೆಚ್ಚಿಸುವ ಸಮಯವಲ್ಲ. ಸರ್ಕಾರ ಬಡವರ ಪರ ಎಂದು ಹೇಳಿಕೊಳ್ಳುತ್ತದೆ. ಆದರೆ ಬಡವರ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯುಕ ಸಿದ್ದರಾಮಯ್ಯ ಟೀಕಿಸಿದ್ದಾರೆ. 

published on : 14th May 2020

ಬೆಂಗಳೂರು: ಚಲಿಸುತ್ತಿರುವ ಗೂಡ್ಸ್ ಟ್ರೈನಿನಲ್ಲಿ ಟಿಕ್ ಟಾಕ್ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಂಡ ಯುವಕ

ಚಲಿಸುತ್ತಿರುವ ಗೂಡ್ಸ್ ಟ್ರೈನಿನಲ್ಲಿ ಟಿಕ್ ಟಾಕ್ ಮಾಡಲು ಹೋಗಿ 22 ವರ್ಷದ ಯುವಕನೊಬ್ಬ ಜೀವಕ್ಕೆ ಅಪಾಯ ತಂದಿಟ್ಟುಕೊಂಡ ಘಟನೆ ನಡೆದಿದೆ.

published on : 14th May 2020

ಗ್ರಾಹಕರಿಗೆ ಹೆಚ್ಚುವರಿ ವಿದ್ಯುತ್ ಬಿಲ್: ಬೆಸ್ಕಾಂ ಎಂಡಿ ರಾಜೇಶ್ ಗೌಡ ಸ್ಪಷ್ಟನೆ

ಕಳೆದ ಎರಡು ತಿಂಗಳಿನಿಂದ ಬೆಸ್ಕಾಂ ವಿದ್ಯುತ್ ಬಿಲ್ ನಲ್ಲಿ ತೀವ್ರ ಹೆಚ್ಚಳವಾಗಿದ್ದು ಲಾಕ್ ಡೌನ್ ಹಿನ್ನೆಲೆ ಎರಡೂ ತಿಂಗಳ ಬಿಲ್ ಸೇರಿ ಬಂದಿರುವುದರ ಬಗೆಗೆ ಬೆಸ್ಕಾಂ ಎಂಡಿ ರಾಜೇಶ್ ಗೌಡ  ಸ್ಪಷ್ಟನೆ ನೀಡಿದ್ದಾರೆ.  

published on : 13th May 2020

ರಿಲಯನ್ಸ್ ವಿದ್ಯುತ್ ಸ್ಥಾವರದಲ್ಲಿ ವಿಷಕಾರಿ ತ್ಯಾಜ್ಯ ಸೋರಿಕೆ: ಐವರು ನಾಪತ್ತೆ

ಮಧ್ಯಪ್ರದೇಶದ ಸಿಗ್ರೌಂಲಿ ಪ್ರದೇಶದಲ್ಲಿರುವ ರಿಲಯನ್ಸ್ ಮಾಲಿಕತ್ವದ ವಿದ್ಯುತ್ ಸ್ಥಾವರದಲ್ಲಿ ವಿಷಕಾರಿ ತ್ಯಾಜ್ಯ ಸೋರಿಕೆಯಾಗಿದ್ದು ಗ್ರಾಮದ ಐವರು ನಾಪತ್ತೆಯಾಗಿದ್ದಾರೆ.

published on : 11th April 2020

ಏಪ್ರಿಲ್ 5: ರಾಜ್ಯದಲ್ಲಿ ಆ 9 ನಿಮಿಷ ವಿದ್ಯುತ್ ಬಳಕೆಯಲ್ಲಿ 1200 ಮೆಗಾ ವ್ಯಾಟ್ ಇಳಿಕೆ!

ಕೊರೋನಾ ವಿರುದ್ಧದ ಹೋರಾಟದ ಸಲುವಾಗಿ ಪ್ರಧಾನಿ ನರೇಂದರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಕಾರ್ಯಕ್ರಮದಿಂದಾಗಿ 1200 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಕಡಿಮೆಯಾಗಿದೆ.

published on : 7th April 2020

ಅವೈಜ್ಞಾನಿಕ ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣ, ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಅವೈಜ್ಞಾನಿಕವಾಗಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ದಿಢೀರ್ ಪ್ರತಿಭಟಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು-ಸೋಮಹಳ್ಳಿಯಲ್ಲಿ ನಡೆದಿದೆ.

published on : 26th February 2020

ಕೃಷಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಚೆಸ್ಕಾಂ ಸಿಬ್ಬಂದಿ.. ವಿಷದ ಬಾಟಲಿ ಹಿಡಿದು ರೈತ ಕುಟುಂಬ ಹೈಡ್ರಾಮಾ!

ನಾಲ್ಕು ತಿಂಗಳಿಂದ ಜಮೀನಿಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ನೀರು ಹಾಯಿಸಲಾಗದೇ ಎರಡು ಎಕರೆ ಅರಿಶಿಣ ಫಸಲು ಒಣಗಿದೆ. ಚೆಸ್ಕಾಂ ಸಿಬ್ಬಂದಿಗೆ ಲಂಚ ನೀಡಿದರೂ ಸಂಪರ್ಕ ಮಾತ್ರ ಕೊಡದೇ ಸತಾಯಿಸುತ್ತಿದ್ದಾರೆ. ಸಮಸ್ಯೆಗೆ ಪರಿಹರಿಸದಿದ್ದರೇ ವಿಷ ಸೇವಿಸುವುದಾಗಿ ಪಟ್ಟು ಹಿಡಿದು ಕುಳಿತರು.

published on : 19th February 2020

ಯರಮರಸ್ ವಿದ್ಯುತ್ ಯೋಜನೆ ವಿಳಂಬದಿಂದ ಸರ್ಕಾರಕ್ಕೆ 2,517 ಕೋಟಿ ರೂ. ಹೆಚ್ಚುವರಿ ವೆಚ್ಚ; ಸಿಎಜಿ ವರದಿ

ರಾಯಚೂರಿನ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಸ್ಥಾವರದ ಕಾರ್ಯಾರಂಭ ವಿಳಂಬವಾಗಿದ್ದರಿಂದ ರಾಜ್ಯ ಸರ್ಕಾರ 2014ರಿಂದ 2018ರ ಅವಧಿಯಲ್ಲಿ 11,079 ಕೋಟಿ ರೂ. ಮೌಲ್ಯದ 23, 188 ದಶಲಕ್ಷ ಯೂನಿಟ್ ವಿದ್ಯುತ್ ಅನ್ನು ಖಾಸಗಿ ಉತ್ಪಾದಕರಿಂದ ಖರೀದಿಸಿದೆ.

published on : 18th February 2020

ಚುನಾವಣೆಯತ್ತ ದೀದಿ ಚಿತ್ತ: ಉಚಿತ ವಿದ್ಯುತ್, ಕಾರ್ಮಿಕರಿಗೆ ಮನೆ ಸೇರಿ ಹಲವು ಜನಪ್ರಿಯ ಯೋಜನೆ ಘೋಷಿಸಿದ ಮಮತಾ

2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಜನತೆಗೆ ಷರತ್ತುಬದ್ಧ ಉಚಿತ ವಿದ್ಯುತ್ ಸೇರಿದಂತ ಹಲವು ಜನಪ್ರಿಯ ಯೋಜನೆಗಳನ್ನು ಸೋಮವಾರ ಘೋಷಿಸಿದ್ದಾರೆ.

published on : 10th February 2020

ಬಸ್ಸಿನ ಮೇಲೆ ಮೇಲೆ ವಿದ್ಯುತ್ ತಂತಿ ಬಿದ್ದು 6 ಜನರ ದುರ್ಮರಣ

11 ಕೆವಿ ವಿದ್ಯುತ್ ತಂತಿ  ಚಲಿಸುತ್ತಿರುವ ಬಸ್ಸಿನ ಮೇಲೆ ತಂಡಾಗಿ ಬಿದ್ದ ಪರಿಣಾಮ , ಆರು ಮಂದಿ ಸಾವನ್ನಪ್ಪಿದ್ದು, ಇತರೆ 40 ಮಂದಿ ಗಾಯಗೊಂಡಿದ್ದಾರೆ.

published on : 9th February 2020

ಬಿಎಚ್‍ಇಎಲ್ ಗೆ ನೇಪಾಳದ 40 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆ ಗುತ್ತಿಗೆ

ನೇಪಾಳದಲ್ಲಿ 40 ಮೆಗಾವ್ಯಾಟ್ ಸಾಮರ್ಥ್ಯದ ರಾಹುಘಾಟ್ ಜಲವಿದ್ಯುತ್ ಯೋಜನೆಯ ಎಲೆಕ್ಟ್ರೋಮೆಕ್ಯಾನಿಕಲ್ (ಇಎಂ) ಕೆಲಸಗಳ ಗುತ್ತಿಗೆಯನ್ನು ಸಾರ್ವಜನಿಕ ವಲಯದ, ಬೆಂಗಳೂರು ಮೂಲದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್(ಬಿಎಚ್‍ಇಎಲ್) ಪಡೆದಿದೆ. 

published on : 3rd February 2020

ಪೂರ್ವ ಪಾವತಿಗೆ ತಕ್ಕಂತೆ ವಿದ್ಯುತ್ ಪೂರೈಕೆ ಕ್ರಮ ಸೂಕ್ತವಲ್ಲ : ಎಐಪಿಇಎಫ್

ಮುಂದಿನ ಮೂರು ವರ್ಷಗಳಲ್ಲಿ ಬಹುವಿಧ ವಿದ್ಯುತ್ ಪೂರೈಕೆ ಆಯ್ಕೆ ಮತ್ತು ಪೂರ್ವಪಾವತಿ ಸ್ಮಾರ್ಟ್ ಮೀಟರ್ ಪರಿಕಲ್ಪನೆ ಸೂಕ್ತವಲ್ಲ ಎಂದು ಅಖಿಲ ಭಾರತ ಪವರ್ ಎಂಜಿನಿಯರ್ಸ್ ಫೆಡರೇಷನ್ ಶನಿವಾರ ಟೀಕಿಸಿದೆ. 

published on : 2nd February 2020

'ಪರಿಸರ ಸ್ನೇಹಿ' ಮೊದಲ ಝಡ್ಎಸ್ ಇವಿ ಕಾರು ಖರೀದಿಸಿದ ಸರ್ಕಾರಿ ಸ್ವಾಮ್ಯದ ಇಇಎಸ್ಎಲ್ ಸಂಸ್ಥೆ

ಎಂಜಿ ಮೋಟಾರ್ ಇಂಡಿಯಾದ ಮೊದಲ ಪರಿಸರ ಸ್ನೇಹಿ ಝಡ್ಎಸ್ ಇವಿ ಕಾರನ್ನು ಸರ್ಕಾರಿ ಸ್ವಾಮ್ಯದ ಇಇಎಸ್ಎಲ್ (ಎನರ್ಜಿಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್) ಸಂಸ್ಥೆ ಖರೀದಿಸಿದೆ.

published on : 27th January 2020

ಗೋವಾದಲ್ಲಿ ಮಹದಾಯಿ ನದಿಗೆ ಅಡ್ಡಲಾಗಿ ಜಲವಿದ್ಯುತ್ ಘಟಕ?

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇನ್ನಿತರೆ ಭಾಗಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆ ಸಂಬಂಧ ಕರ್ನಾಟಕ ಮತ್ತು ಗೋವಾ ಸರ್ಕಾರಗಳ ನಡುವೆ ಅಸಮಾಧಾನ ಏರ್ಪಟ್ಟಿರುವ ಬೆನ್ನಲ್ಲೇ, ಮಹದಾಯಿ ನದಿಗೆ ಅಡ್ಡಲಾಗಿ ಜಲವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. 

published on : 30th December 2019
1 2 3 4 >