ಲಾಲ್ ಬಾಗ್ ನಲ್ಲಿ ಜೇನು ಕಚ್ಚಿ ಬಾಲಕಿ ಸಾವು

ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಹೋಗಿದ್ದಾಗ ಜೇನು ಹುಳು ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ...
ಲಾಲ್ ಬಾಗ್ ನಲ್ಲಿ ಜೇನು ಕಚ್ಚಿ ಬಾಲಕಿ ಸಾವು (ಸಂಗ್ರಹ ಚಿತ್ರ)
ಲಾಲ್ ಬಾಗ್ ನಲ್ಲಿ ಜೇನು ಕಚ್ಚಿ ಬಾಲಕಿ ಸಾವು (ಸಂಗ್ರಹ ಚಿತ್ರ)

ಬೆಂಗಳೂರು: ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಹೋಗಿದ್ದಾಗ ಜೇನು ಹುಳು ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ
ಮೃತಪಟ್ಟಿದ್ದಾಳೆ.

ಪದ್ಮನಾಭನಗರ ಗುರುಪ್ರಸಾದ್ ಹಾಗೂ ಸುಗುಣ ದಂಪತಿ ಪುತ್ರಿ ವೈಷ್ಣವಿ ಮೃತ ಬಾಲಕಿ. ಆ.15ರಂದು ಪಾಲಕರೊಂದಿಗೆ ಲಾಲ್‍ಬಾಗ್‍ಗೆ ಆಗಮಿಸಿದ್ದಾಗ ಜೇನು ಹುಳುಗಳು ಕಚ್ಚಿದ್ದವು.
ತಂದೆ ತಾಯಿ ಜತೆ ಲಾಲ್‍ಬಾಗ್ ಫಲಪುಷ್ಪ ವೀಕ್ಷಣೆಗೆ ತೆರಳಿದ್ದಳು. ಮಧ್ಯಾಹ್ನ 12 ಕ್ಕೆ ತಂದೆ ಜತೆ ಕಡಿಮೆ ಜನ ದಟ್ಟಣೆ ಇರುವ ಕೆಂಪೇಗೌಡ ಟವರ್ ಬಳಿ ತೆರಳಿದ್ದಳು. ಮರದ ಬಳಿ ಆಟವಾಡುತ್ತಿ ದ್ದಾಗ ಏಕಾಏಕಿ ಜೋರಾಗಿ ಕಿರುಚಲು ಆರಂಬಿsಸಿದ್ದಳು. ಏನಾಯಿತು ಎಂದು ತಂದೆ ಗುರುಪ್ರಸಾದ್ ನೋಡಿದಾಗ ಗುಂಪಾಗಿ ಹೆಜ್ಜೇನುಗಳು ವೈಷ್ಣವಿ ಮೇಲೆ ದಾಳಿ ನಡೆಸಿದ್ದವು.

ಜೇನು ದಾಳಿಯಿಂದ ರಕ್ಷಿಸಲು ಯತ್ನಿಸಿದಾಗ ಗುರುಪ್ರಸಾದ್ ಅವರ ಮೇಲೂ ಜೇನು ಹುಳುಗಳು ದಾಳಿ ಮಾಡಿವೆ. ಸ್ವಲ್ಪ ದೂರದಲ್ಲಿದ್ದ ಪತ್ನಿ ಸುಗುಣ ಸಹಾಯಕ್ಕೆ ಸಾರ್ವಜನಿಕರ ಬಳಿ ಮೊರೆ ಇಟ್ಟಿದ್ದಾರೆ. ಈ ವೇಳೆ ನೆರವಿಗೆ ಧಾವಿಸಿದ ಸ್ಥಳೀಯರು ಜೇನು ಹುಳುಗಳನ್ನು ಓಡಿಸಿದರು. ಬಳಿಕ ಗಾಯಗೊಂಡಿದ್ದ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಜೇನು ಕಚ್ಚಿದ್ದರಿಂದ ಗಂಭೀರ ಗಾಯವಾಗಿದ್ದ ವೈಷ್ಣವಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಅದೇ ದಿನವೇ ಹೆಚ್ಚು ಹುಳುಗಳು ಕಚ್ಚಿದ್ದ ಕಾರಣ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದರು. ಚಿಕಿತ್ಸೆ ಫಲಿಸದೆ ಗುರುವಾರ ಸಂಜೆ ವೈಷ್ಣವಿ ಮೃತಪಟ್ಟಿದ್ದಾಳೆ ಎಂದು ಸಿದ್ದಾಪುರ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com