ಬಿಬಿಎಂಪಿ ಚುನಾವಣೆ: ಗುರುವಾರ ಸಂಜೆ ವೇಳೆಗೆ ಬಹಿರಂಗ ಪ್ರಚಾರ ಅಂತ್ಯ

ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬೀಳಲಿದೆ. ಈ ಬಗ್ಗೆ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಬಹಿರಂಗ ಸಭೆ, ಸಮಾರಂಭ, ಪ್ರಚಾರ, ಟಿ.ವಿ, ಪತ್ರಿಕೆ, ಎಫ್.ಎಂ. ಜಾಹೀರಾತುಗಳನ್ನು ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ...
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)

ಬೆಂಗಳೂರು: ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬೀಳಲಿದೆ. ಈ ಬಗ್ಗೆ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಬಹಿರಂಗ ಸಭೆ, ಸಮಾರಂಭ, ಪ್ರಚಾರ, ಟಿ.ವಿ, ಪತ್ರಿಕೆ, ಎಫ್.ಎಂ. ಜಾಹೀರಾತುಗಳನ್ನು ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಲ್ಲ ವಾರ್ಡ್‍ಗಳಲ್ಲಿ ಅಭ್ಯರ್ಥಿಗಳು ಪಕ್ಷದ ಪರ ಘೋಷಣೆ ಕೂಗಿಕೊಂಡು, ಆಟೋಗಳಲ್ಲಿ ಮೈಕ್ ಅಬ್ಬರದೊಂದಿಗೆ ಪ್ರಚಾರ ನಡೆಸಿದ್ದರು. ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ತಡವಾಗಿ ಪ್ರಕಟಿಸಿದ್ದರಿಂದ ಪ್ರಚಾರಕ್ಕೂ ಕಡಿಮೆ ಅವಧಿ ದೊರೆತಿತ್ತು.

ಹೆಚ್ಚಿದ ಅಬ್ಬರ!: ಇದುವರೆಗೆ ಅಬ್ಬರದ ಪ್ರಚಾರವನ್ನು ಅಭ್ಯರ್ಥಿಗಳು ಮಾಡಿದ್ದಾರೆ. ಇನ್ನು ಕೊನೆಯ ದಿನವಾದ ಗುರುವಾರ ಅಬ್ಬರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹೊಸ ಅಭ್ಯರ್ಥಿಗಳಂತೂ ಹೊಸದಾಗಿ ಮತದಾರರ ಮುಂದೆ ಪ್ರಚಾರ ಮಾಡಬೇಕಿರುವುದರಿಂದ ಮಾಜಿಗಳಿಗಿಂತ ಹೆಚ್ಚು ಸವಾಲು ಇವರ ಮುಂದಿದೆ. ಹೀಗಾಗಿ ಇನ್ನು ಇರುವ
ಎರಡು ದಿನಗಳಲ್ಲಿ ಪ್ರಚಾರದ ಕಾವು ಜೋರಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com