
ಬೆಂಗಳೂರು: ಸೋಲದೇವನಹಳ್ಳಿ ಚಿಕ್ಕಸಂದ್ರದಲ್ಲಿರುವ ಅನಾಥಶ್ರಮದಲ್ಲಿದ್ದ 12 ವರ್ಷದ ಬಾಲಕಿ ಮೇಲೆ ಮುಖ್ಯಸ್ಥನೇ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಆರೋಪಿ ವಿಜಯ್ ರಾಜ್(30) ಎಂಬಾತನನ್ನು ಬುಧವಾರ ಬಂಧಿಸಲಾಗಿದೆ. ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಬಾಲಕಿಯ ತಾಯಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಮಗಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದ ಕಾರಣ ಅನಾಥಶ್ರಮಕ್ಕೆ ಕಳುಹಿಸಿದ್ದರು. ಬುಧವಾರ ಮಧ್ಯಾಹ್ನ ಬಾಲಕಿ ಚಿಕ್ಕಸಂದ್ರದ ರಸ್ತೆಯೊಂದರಲ್ಲಿ ಅಳುತ್ತಾ ನಿಂತಿದ್ದಳು.
ಬಾಲಕಿಯನ್ನು ಗಮನಿಸಿದ ವೃದ್ಧೆಯೊಬ್ಬರು ವಿಚಾರಿಸಿದಾಗ, ಅನಾಥಾಶ್ರಮದ ಮುಖ್ಯಸ್ಥ ವಿಜಯ್ ರಾಜ್ ಎಂಬಾತ ಎರಡು ತಿಂಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಹೀಗಾಗಿ ಪರಾರಿಯಾಗಿದ್ದಾಗಿ ಹೇಳಿದ್ದಳು. ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನೆಡಸಲಾಗುತ್ತಿದೆ.
Advertisement