• Tag results for girl

ಡೊನಾಲ್ಡ್‌ ಟ್ರಂಪ್ ಹಿರಿಯ ಮಗನ ಗರ್ಲ್‌ಫ್ರೆಂಡ್‌ಗೆ ಕೊರೋನಾ ಪಾಸಿಟಿವ್!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿಗೂ ಕೊರೊನಾವೈರಸ್ ಪಾಸಿಟಿವ್ ದೃಢವಾಗಿದೆ ಎಂದು ಅಮೆರಿಕಾ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

published on : 4th July 2020

ಕಾನೂನು ರಕ್ಷಣೆಯಲ್ಲಿದ್ದ ಸಂತ್ರಸ್ತ ಬಾಲಕಿ, ಮಗುವಿನ ಮೇಲೆ ಟಿಕ್‏ಟಾಕ್: ಎಫ್ಐಆರ್

ಸಂಬಂಧಗಳ ಘರ್ಷಣೆಯಲ್ಲಿ ಸಂತ್ರಸ್ತಳಾಗಿ ಇದೀಗ ಕಾನೂನಿನ ರಕ್ಷಣೆ ಮತ್ತು ಪೋಷಣೆಯಲ್ಲಿರುವ ಅಪ್ರಾಪ್ತ ಬಾಲಕಿ ಮತ್ತು ಆಕೆಗೆ ಜನಿಸಿ ಮಗುವಿನ ಚಿತ್ರವನ್ನು ಅಕ್ರಮವಾಗಿ ಬಳಸಿಕೊಂಡು ಸಾಮಾಜಿಕ ತಾಣಕ್ಕೆ ಅಪ್ಲೋಡ್ ಮಾಡಿದ ಪ್ರಕರಣವೊಂದು ಠಾಣೆಯ ಮೆಟ್ಟಿಲೇರಿದೆ.

published on : 2nd July 2020

ಭಾರತೀಯ ಸೇನಾ ಯುದ್ಧ ವಿಮಾನ ಪೈಲಟ್ ಆಗಿ ಆಯ್ಕೆಯಾದ ಕೊಡಗಿನ ಯುವತಿ ಪುಣ್ಯ ನಂಜಪ್ಪ 

ಮಡಿಕೇರಿಯ ಯುವತಿ ಪುಣ್ಯ ನಂಜಪ್ಪ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.  ಈ ಮೂಲಕ ಈ ಹುದ್ದೆಗೇರಿದ ಕೊಡಗಿನ ಮೊದಲ ಯುವತಿ ಎನಿಸಿಕೊಂಡಿದ್ದಾರೆ.  

published on : 30th June 2020

ಶಸ್ತ್ರಚಿಕಿತ್ಸೆಗೆ ಕೇಳಿದ್ದು 2 ಲಕ್ಷ, ಸಿಕ್ಕಿದ್ದು 50 ಲಕ್ಷ: ಕೇರಳದ ತಾಯಿ-ಮಗಳಿಗೆ ಸಿಕ್ಕಿತು ನೆರವಿನ ಮಹಾಪೂರ!

ಕೊರೋನಾ ಸಂಕಷ್ಟದ ನಡುವೆ ತನ್ನ ತಾಯಿಗೆ ಯಕೃತ್ ಕಸಿ(ಪಿತ್ತಜನಕಾಂಗ ಕಸಿ)ಗೆ ಹಣದ ಅವಶ್ಯಕತೆ ಇದೆ ಎಂದು ಮಗಳು ಆನ್ ಲೈನ್ ನಲ್ಲಿ ಮಾಡಿಕೊಂಡ ಮನವಿಗೆ ಹತ್ತಾರು ಮಂದಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

published on : 26th June 2020

ಮನೆಯಂಗಳದಲ್ಲಿ ಕವರ್ ಡ್ರೈವ್ ಮಾಡಿ ಜಾಗತಿಕ ಪ್ರಸಿದ್ದಿ ಗಳಿಸಿದ ಕಾರ್ಕಳ ಯುವತಿ!

ಯುವತಿಯೊಬ್ಬಳು ತನ್ನ ಮನೆಯಂಗಳದಲ್ಲಿ ಕ್ರಿಕೆಟ್ ಆಡುವಾಗ ಮಾಡಿದ್ದ ಕವರ್ ಡ್ರೈವ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ.

published on : 13th June 2020

ಬೆಂಗಳೂರು: ಯುವತಿ ಮೇಲೆ ಮಾಜಿ ಪ್ರಿಯಕರ ಹಲ್ಲೆ, ಆರೋಪಿ ಪೊಲೀಸ್ ವಶಕ್ಕೆ

ನಾಲ್ಕು ವರ್ಷ ಪ್ರೀತಿಸಿ ಪ್ರಿಯಕರನಿಗೆ ಕೈಕೊಟ್ಟು ನಂತರ ಆತನ ಸ್ನೇಹಿತನನ್ನು ಬಲೆಗೆ ಹಾಕಿಕೊಂಡಿದ್ದ ಯುವತಿ ಮೇಲೆ ಮಾಜಿ ಪ್ರಿಯಕರ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

published on : 10th June 2020

ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್ ಸಿನಿಮಾ ನೆಟ್ಪ್ಲಿಕ್ಸ್ ನಲ್ಲಿ ಬಿಡುಗಡೆ

ಜಾನ್ಹವಿ ಕಪೂರ್ ನಟನೆಯ ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಸಿನಿಮಾ ಸಾಮಾನ್ಯ ಸಿನಿಮಾಗಳಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. 

published on : 9th June 2020

ಕುಂದಾಪುರ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಯತ್ನ, ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಸೆರೆ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಕುಂದಾಪುರ ಪೋಲೀಸರು ಬಂಧಿಸಿದ್ದಾರೆ. 

published on : 2nd June 2020

ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲಾಗದೆ ಹತಾಶೆ: 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಗತ್ಯ ಸೌಲಭ್ಯಗಳಿಲ್ಲದ ಕಾರಣ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ವಾಲಂಚೇರಿ ಎಂಬಲ್ಲಿ ನಡೆದಿದೆ. 

published on : 2nd June 2020

ಕ್ವಾರಂಟೈನ್ ಭಯಾನಕತೆ: ಹಾವು ಕಚ್ಚಿ ಬಾಲಕಿ ಸಾವು!

ನೈನಿತಾಲ್ ನಲ್ಲಿನ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಆರು ವರ್ಷದ ಬಾಲಕಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಈ ಸಂಬಂಧ ಮೂವರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 27th May 2020

ಶ್ರಮಿಕ್ ರೈಲಿನಲ್ಲೇ ಗರ್ಭಿಣಿಯ ಪ್ರಸವ ಮಾಡಿಸಿ ಮಾನವೀಯತೆ ಮೆರೆದ ಸಿಬ್ಬಂದಿ

ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಲುಕಿರುವ ಹೊರರಾಜ್ಯದ ಕಾರ್ಮಿಕರನ್ನು ಅವರ ತವರೂರಿಗೆ ಕಳುಹಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ನೈಋತ್ಯ ರೈಲ್ವೆ ಸಿಬ್ಬಂದಿ, ಮಾರ್ಗಮಧ್ಯದಲ್ಲಿ ಗರ್ಭಿಣಿಯೋರ್ವರ ಪ್ರಸವ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

published on : 24th May 2020

ವೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದ ನಾಲ್ವರು ಯುವತಿರ ರಕ್ಷಣೆ: ಇಬ್ಬರ ಬಂಧನ

ಹೊರರಾಜ್ಯದ ಯುವತಿಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ತಂದು ವೇಶ್ಯವಾಟಿಕೆ ದಂಧೆಗೆ ದೂಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.

published on : 23rd May 2020

ಚಿಕ್ಕೋಡಿ: 20 ರೂ. ಆಸೆಗೆ ಬಾಲಕಿಯನ್ನು ಬಾವಿಗೆ ತಳ್ಳಿ ಕೊಂದ ಮಹಿಳೆ!

ಕೇವಲ 20 ರು. ಗೆ ಆಸೆಪಟ್ಟ ಮಹಿಳೆಯೊಬ್ಬಳು ನಾಲ್ಕು ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಕೊಂದಿರುವ ದಾರುಣ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.

published on : 14th May 2020

ಆಂಧ್ರ ಪ್ರದೇಶ: ಕೊರೋನಾ ವಿರುದ್ಧ ಹೋರಾಡಿ ಗೆದ್ದ ಮೂರು ವರ್ಷದ ಬಾಲಕಿ

ಸಾಂಕ್ರಾಮಿಕ ಪಿಡುಗಾದ ಕೊರೋನಾ ವೈರಸ್ ಸೋಂಕಿನ ವಿರುದ್ಧ ಮೂರು ವರ್ಷದ ಬಾಲಕಿ ಹೋರಾಡಿ ಜಯ ಸಾಧಿಸಿದ್ದಾಳೆ, ಮೊದಲ ಬಾರಿಗೆ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು, ಅನಂತರ ಬಾಲಕಿಯನ್ನು ಶಾಂತಿರಾಮ್ ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

published on : 13th May 2020

ತಮಿಳುನಾಡು: 14 ವರ್ಷದ ಶಾಲಾ ಬಾಲಕಿಯನ್ನು ಜೀವಂತವಾಗಿ ಸುಟ್ಟು ಹಾಕಿದ ದುಷ್ಕರ್ಮಿಗಳು

ತಮಿಳುನಾಡಿನಲ್ಲಿ ಆಡಳಿತರೂಢ ಎಐಎಡಿಎಂಕೆಗೆ ಸೇರಿದ ಇಬ್ಬರು ದುಷ್ಕರ್ಮಿಗಳು 14 ವರ್ಷದ ಶಾಲಾ ಬಾಲಕಿಯನ್ನು ಜೀವಂತವಾಗಿ ಸುಟ್ಟ ಅಮಾನವೀಯ ಘಟನೆ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ.

published on : 11th May 2020
1 2 3 4 5 6 >