

ಜಿಂದ್ (ಹರಿಯಾಣ): ಹರಿಯಾಣದ 37 ವರ್ಷದ ಮಹಿಳೆಯೊಬ್ಬರು ಹತ್ತು ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಪ್ರಕರಣವು ಮತ್ತೊಮ್ಮೆ ತಾಯಿಯ ಆರೋಗ್ಯದ ಬಗ್ಗೆ ಕಳವಳ ಮತ್ತು ದೇಶದ ಕೆಲವು ಭಾಗಗಳಲ್ಲಿ ಸಮಾಜದಲ್ಲಿ ಗಂಡು ಮಕ್ಕಳಿಗೆ ಆದ್ಯತೆ ನೀಡುತ್ತಿರುವುದನ್ನು ಎತ್ತಿ ತೋರಿಸಿದೆ.
19 ವರ್ಷಗಳ ಹಿಂದೆ ವಿವಾಹವಾದ ಮಹಿಳೆ, ಜಿಂದ್ ಜಿಲ್ಲೆಯ ಉಚಾನಾ ಪಟ್ಟಣದ ಓಜಾಸ್ ಆಸ್ಪತ್ರೆ -ಹೆರಿಗೆ ಗೃಹದಲ್ಲಿ ತನ್ನ 11 ನೇ ಮಗುವಿಗೆ ಜನ್ಮ ನೀಡಿದರು. ಡಾ. ನರವೀರ್ ಶಿಯೋರನ್, ತಾಯಿಗೆ ಮೂರು ಯೂನಿಟ್ ರಕ್ತದ ಅಗತ್ಯವಿತ್ತು. ತಾಯಿ ಮತ್ತು ನವಜಾತ ಶಿಶು ಇಬ್ಬರ ಆರೋಗ್ಯ ಈಗ ಸ್ಥಿರವಾಗಿದ್ದಾರೆ ಎಂದು ಹೇಳಿದರು.
ಜನವರಿ 3 ರಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮರುದಿನ ಮಗುವನ್ನು ಹೆತ್ತರು. ಅದೇ ದಿನ ಡಿಸ್ಚಾರ್ಜ್ ಆದರು. 38 ವರ್ಷದ ದಿನಗೂಲಿ ಕಾರ್ಮಿಕ ಮಗುವಿನ ತಂದೆ ಸಂಜಯ್ ಕುಮಾರ್, ಗಂಡು ಮಗುವಿನ ಆಸೆಯನ್ನು ಹೊಂದಿದ್ದರು.
2007 ರಲ್ಲಿ ವಿವಾಹವಾದ ದಂಪತಿಯ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ, ಹಿರಿಯ ಮಗಳು 12 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ತಮ್ಮ ಸೀಮಿತ ಆದಾಯದ ಹೊರತಾಗಿಯೂ, ತಮ್ಮ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.
ಗಂಡು ಮಗುವಿನ ಆಸೆ
ನಮಗೆ ಗಂಡು ಮಗು ಬೇಕಿತ್ತು, ನಮ್ಮ ಬಡತನ ನಡುವೆ ನನ್ನ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ಏನೇ ಆಗಿದ್ದರೂ ಅದು ದೇವರ ಚಿತ್ತ, ನಾನು ಅದರಲ್ಲಿ ಸಂತೋಷವಾಗಿದ್ದೇನೆ" ಎಂದರು.
ಆದರೆ ಈ ಮಕ್ಕಳ ತಂದೆ 10 ಮಕ್ಕಳ ಹೆಸರು ಹೇಳಲು ಹೆಣಗಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಂದು ಹೆಣ್ಣುಮಕ್ಕಳು ಸಾಕಷ್ಟು ಸಾಧನೆ ಮಾಡುತ್ತಿರುವಾಗ ಈ ದಂಪತಿಯ ಮನಃಸ್ಥಿತಿಗೆ ಜನರು ಟೀಕೆ ಮಾಡುತ್ತಿದ್ದಾರೆ.
10 ಹೆಣ್ಣುಮಕ್ಕಳಿಗೆ ತಮ್ಮ ಹುಟ್ಟಿರುವುದು ಖುಷಿ ಸಿಕ್ಕಿದೆ. ನವಜಾತ ಪುಟ್ಟ ತಮ್ಮನಿಗೆ ದಿಲ್ಖುಷ್ ಎಂದು ಹೆಸರಿಟ್ಟಿದ್ದಾರೆ. 19 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಗಂಡು ಮಗುವಿನ ಜನನ ಕುಟುಂಬಸ್ಥರಿಗೆ ಖುಷಿ ನೀಡಿದೆ. ದೇವರು ಕೊಟ್ಟ ಉಡುಗೊರೆ ಎಂದು ಸಂಜಯ್ ಖುಷಿಯಾಗಿದ್ದಾರೆ.
ಹರಿಯಾಣದ ಲಿಂಗ ಅನುಪಾತ 1,000 ಪುರುಷರಿಗೆ 923 ಮಹಿಳೆಯರಿದ್ದಾರೆ, ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ.
Advertisement