
ಬೆಂಗಳೂರು: ಬೆಂಗಳೂರು ಶಿಕ್ಷಣವಂತರು, ಉದ್ಯೋಗಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಮೇಲಾಗಿ ಬುದ್ಧಿವಂತರು ಇರುವ ನಗರಿ ಎಂದೇ ಪ್ರತೀತಿ. ಆದರೂ ಇಲ್ಲಿಯ ನಾಗರಿಕರಿಗೆ ಇಲ್ಲಿ ಮತದಾನದ ಮಹತ್ವ ಕುರಿತು ಪಾಠ ಮಾಡಲೇಬೇಕಾದ ಪರಿಸ್ಥಿತಿ ಇದೆ. ಏಕೆಂದರೆ ಇತ್ತೀಚಿನ ಚುನಾವಣೆಗಳಲ್ಲಿ ಬೆಂಗಳೂರಿನಲ್ಲಿ ಅತಿ ಕಡಿಮೆ ಮತದಾನವಾಗಿದೆ.
ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಕೇವಲ ಶೇ.44ರಷ್ಟು ಜನ ಮಾತ್ರ ಮತದಾನ ಹಕ್ಕು ಚಲಾಯಿಸಿದ್ದರು. ಯಾವುದೇ ಚುನಾವಣೆ ಇರಬಹುದು ಅದರಲ್ಲಿ ಬೆಂಗಳೂರಿಗರು ಸಕ್ರಿಯವಾಗಿ ಭಾಗಿಯಾಗುತ್ತಿಲ್ಲ. ಒಂದೇ ಒಂದು ಸಮಾಧಾನ ಎಂದರೆ ಒಂದು ಚುನಾವಣೆಗಿಂತ ಮತ್ತೊಂದು ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಪ್ರಮಾಣ ಗಣನೀಯ ಅಲ್ಲ.
ಮತಕುಸಿತಕ್ಕೆ ಕಾರಣ?
Advertisement