ಮೋಸಕ್ಕೆ ಸಿಲುಕಿ ಮಲೇಷಿಯಾ ಜೈಲು ಸೇರಿದ

ವಿದೇಶದಲ್ಲಿ ನೌಕರಿ ಗಿಟ್ಟಿಸೋದು, ವಿಮಾನದಲ್ಲಿ ಹಾರುತ್ತ ಹೋಗೋ ಕನಸು ಕಾಣರಿಗೇನೂ ಕಡಿಮೆ ಇಲ್ಲ. ಈ ಪೈಕಿ ಕೊಂಚ ಎಡವಟ್ಟಾದರೂ ಜೈಲೇ ಗತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀದರ್: ವಿದೇಶದಲ್ಲಿ ನೌಕರಿ ಗಿಟ್ಟಿಸೋದು, ವಿಮಾನದಲ್ಲಿ ಹಾರುತ್ತ ಹೋಗೋ ಕನಸು ಕಾಣರಿಗೇನೂ ಕಡಿಮೆ ಇಲ್ಲ. ಈ ಪೈಕಿ ಕೊಂಚ ಎಡವಟ್ಟಾದರೂ ಜೈಲೇ ಗತಿ ಎಂಬುದನ್ನು ಮರೆಯದಿರಿ. ಇಂಥದ್ದೇ ಒಂದು ಎಡವಟ್ಟು ಜಿಲ್ಲೆಯ ವ್ಯಕ್ತಿಯೊಬ್ಬ ಮಲೇಶಿಯಾದ ಜೈಲಿನ ಕಂಬಿ ಎಣಿಸುವಂತೆ ಮಾಡಿದೆ.

ವಿದೇಶದಲ್ಲಿ ನೌಕರಿ ಗಿಟ್ಟಿಸಿಕೊಳ್ಳುವ ತವಕದಿಂದ ಎಡವಟ್ಟು ಮಾಡಿಕೊಂಡ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದ ದತ್ತಾತ್ರಿ ಪಾಟೀಲ್ ಎಂಬುವವರು ಏಜೆನ್ಸಿಯೊಂದರ ಮೋಸದ ಜಾಲಕ್ಕೆ ಸಿಲುಕಿ ಮಲೇಷಿಯಾದಲ್ಲಿ ಜೈಲು ಸೇರಿದ ಘಟನೆಯ ಹಿನ್ನೆಲೆಯಲ್ಲಿ ನೌಕರಿಯ ಆಮೀಷ ತೋರಿಸಿ ಮೋಸ ಮಾಡಿವರ ವಿರುದ್ಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಸವ ಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ನಿವಾಸಿ ಸುರೇಶ ಹೆಗಡೆ ಎಂಬುವರು ಮಂಗಳೂರಿನ ರಫೀಕ ಎನ್ನುವ ಏಜೆಂಟ್ ನೊಂದಿಗೆ ಸೇರಿ ಮೋಸ ಮಾಡಿದ್ದು, ಮಲೇಷಿಯಾ ದೇಶದಲ್ಲಿ ಕೆಲಸ ಕೊಡಿಸಿ ಎಂಪ್ಲಾಯ್ ಮೆಂಟ್ ವೀಸಾ ಮೇಲೆ ಅವರನ್ನು ವಿದೇಶಕ್ಕೆ ಕಳುಹಿಸುವುದಾಗಿ  ದತ್ತಾತ್ರಿ ಅವರನ್ನು ನಂಬಿಸಿ ಹಣ ಪಡೆದು ಟೂರಿಸ್ಟ್ ವೀಸಾದೊಂದಿಗೆ ಮಲೇಷಿಯಾಗೆ ಕಳುಹಿಸಿದ್ದಾರೆಂದು ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ. ಅರಿವಿಲ್ಲದೇ ಟೂರಿಸ್ಟ್ ವೀಸಾ ಮೇಲೆ ದತ್ತಾತ್ರಿ ಪಾಟೀಲ ಮಲೇಷಿಯಾಗೆ ತೆರಳಿದ್ದಾರೆ. ಅವಧಿ ಮುಗಿದರೂ ಅಲ್ಲಿಯೇ ಇದ್ದದ್ದರಿಂದ ದೇಶದ ಪೊಲೀಸರು ಬಂಧಿಸಿದ್ದಾರೆ.

ದತ್ತಾತ್ರಿ ಪಾಟೀಲರ ಅಣ್ಣ ದಿಗಂಬರ ಪಾಟೀಲ ದೂರಿನ ಮೇಲೆ ಖಟತ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ, ಆರೋಪಿ ಸುರೇಶ ಹೆಗಡೆಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com