
ಬೆಂಗಳೂರು: ನಗರದಲ್ಲಿ ಕಸದಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಡೆಲ್ಲಿ ಪಬ್ಲಿಕ್ ಶಾಲೆ, ದಕ್ಷಿಣ ಶಾಲೆ ಮಕ್ಕಳು ಸ್ವಚ್ಛತೆ ಕಾಪಾಡುವ ಮತ್ತು ಪರಿಸರ ಸಂರಕ್ಷಿಸುವ ಬೀದಿ ನಾಟಕವನ್ನು ಮಾಡಿ ಸಂದೇಶ ಸಾರಿದ್ದು ಈ ಬಾರಿಯ ಕಬ್ಬನ್ ಉದ್ಯಾನದ ಈ ಬಾರಿಯ ವಿಶೇಷವಾಗಿತ್ತು.
ಮಕ್ಕಳು, ಪೋಷಕರ ಜತೆ ಉದ್ಯಾನಕ್ಕೆ ಬರುವವರಿಗಿಂತ ಸಾಕು ನಾಯಿಯೊಂದಿಗೆ ಬರುವವರೇ ಹೆಚ್ಚಾಗಿದ್ದಾರೆ. ಇದರಿಂದ ನಾಯಿಗಳ ಮಧ್ಯೆ ಕಲಹಗಳು ಕೂಡ ನಡೆಯುತ್ತಿವೆ. ಇದರಿಂದ ವಿಹರಿಸುತ್ತಿರುವ ಸಾರ್ವಜ ನಿಕರಿಗೆ ತೊಂದರೆಯಾಗುತ್ತಿದೆ. ಉದ್ಯಾನದಲ್ಲಿ ಉದಯ ರಾಗ ಕಾರ್ಯಕ್ರಮದಲ್ಲಿ ಜನ್ನಗಟ್ಟಿ ಕೃಷ್ಣಮೂರ್ತಿ-ಯವರಿಂದ ಜಾನಪದ ಗಾಯನ ಮೂಡಿಬಂದಿತು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯ 4 ಹಾಗೂ 9ನೇ ಪಡೆಯಿಂದ ಪೊಲೀಸ್ ಬ್ಯಾಂಡ್ ನಡೆಯಿತು.
ಸಂಧ್ಯಾರಾಗದಲ್ಲಿ ಡಿ. ಶೈಲ ಕಂಪ್ಲಿಯವರಿಂದ ಭಾವಗೀತೆ, ವಚನ ಗಾಯನ, ಭಕ್ತಿಗೀತೆ, ದೇಶಭಕ್ತಿಗೀತೆ ಕಾರ್ಯಕ್ರಮಗಳು ನಡೆಯಿತು. ಸೃಜನಶ್ರೀ ಆರ್ಟ್ ಆಫ್ ಹಾರ್ಟ್ ಸೂರತ್‍ವತಿಯಿಂದ ಜೈಮಿನ್ ಕಣ್ಣನ್ ರವರ ಶಿಷ್ಯರಿಂದ ಭರತನಾಟ್ಯ, ನಾಟ್ಯ ಭೈರವಿ ನೃತ್ಯಶಾಲೆ ವತಿಯಿಂದ ನೃತ್ಯ ಪ್ರದರ್ಶನ, ಬೇಗಾರ್ ಶಿವಕುಮಾರ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಕಬ್ಬನ್‍ನಲ್ಲಿ ಯಕ್ಷಗಾನ ಪ್ರದರ್ಶನ ನೋಡುಗರ ಮನಮುಟ್ಟುವಂತಿತ್ತು.
Advertisement