
ಬೆಂಗಳೂರು: ಕಾಲಕಾಲಕ್ಕೆ ವೇತನ ನೀಡದಿರುವುದು, ಸಿಬ್ಬಂದಿ ನಡೆಸುವ ದೌರ್ಜನ್ಯ ಖಂಡಿಸಿ ನೂರಾರು ಕ್ಯಾಬ್ ಚಾಲಕರು ಓಲಾ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.
ಓಲಾ ಕಂಪನಿ ತನ್ನ ಚಾಲಕರಿಗೆ ಸೂಕ್ತ ವೇತನ, ಪ್ರೋತ್ಸಾಹ ಧನ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಎಚ್ ಎಎಲ್‍ನ ಮುರಗೇಶ್‍ಪಾಳ್ಯದಲ್ಲಿರುವ ಓಲಾ ಕಚೇರಿ ಮುಂದೆ 200ಕ್ಕೂ ಹೆಚ್ಚು ಚಾಲಕರು ಕಂಪನಿ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ವೇಳೆ ಚಾಲಕರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ಸಹ ನಡೆಯಿತು.
ಸರಿಯಾಗಿ ವೇತನ ನೀಡದಿರುವುದು ಸೇರಿದಂತೆ ಚಾಲಕರಿಗೆ ಅಗತ್ಯ ಸೌಕರ್ಯ ನೀಡಿಲ್ಲ. ಕಂಪನಿ ಸಿಬ್ಬಂದಿ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಇದು ನಿಲ್ಲಬೇಕು ಎಂದು ಪ್ರತಿಭಟನಾಕಾರರು ಆರೋಪಿಸಿದರು. ನೂರಾರು ಮಂದಿ ಕ್ಯಾಬ್ ಚಾಲಕರು ಬೆಳಗ್ಗಿನಿಂದಲೇ ಕಂಪನಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಸ್ಯೆ ಆಲಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ರೊಚ್ಚಿಗೆದ್ದರು. ಕಂಪನಿ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದರು. ಪರಿಸ್ಥಿತಿ ಕೆಲ ಕಾಲ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆಡಳಿತ ಮಂಡಳಿ ಹಾಗೂ ಚಾಲಕರ ನಡುವೆ ಮಾತಿನ ಚಕಮಕಿ ನಡೆಯಿತು.
ಪೊಲೀಸರು ಮಧ್ಯಪ್ರವೇಶಿಸಿ ಆಡಳಿತ ಮಂಡಳಿ ಹಾಗೂ ಚಾಲಕರೊಂದಿಗೆ ಚರ್ಚಿ ಸಿದರು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಓಲಾ ಕಂಪನಿ ಅಧಿಕಾರಿಗಳು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಹಿಂದೆಯೂ ಸಹ ಎಂ.ಜಿ.ರಸ್ತೆಯಲ್ಲಿರುವ ಕಚೇರಿ ಬಳಿ ನೂರಾರು ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿದ್ದರು.
Advertisement