ಮೆಟ್ರೋ ಸಂಚಾರ-2 ಗಂಟೆ ಹೆಚ್ಚಳ

ಪೀಣ್ಯ ಹಾಗೂ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಪಿಗೆ ರಸ್ತೆಯಿಂದ ನಾಗಸಂದ್ರದವರೆಗೆ ಮೆಟ್ರೋ ರೈಲಿನ ಸಂಚಾರ ಅವಧಿಯನ್ನು ಹೆಚ್ಚಿಸಲಾಗಿದೆ.
ಮೆಟ್ರೋ
ಮೆಟ್ರೋ

ಬೆಂಗಳೂರು: ಪೀಣ್ಯ ಹಾಗೂ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಪಿಗೆ ರಸ್ತೆಯಿಂದ ನಾಗಸಂದ್ರದವರೆಗೆ ಮೆಟ್ರೋ ರೈಲಿನ ಸಂಚಾರ ಅವಧಿಯನ್ನು ಹೆಚ್ಚಿಸಲಾಗಿದೆ.
ಈ ನಿಟ್ಟಿನಲ್ಲಿ ಸಂಪಿಗೆ ರಸ್ತೆ- ನಾಗಸಂದ್ರ ನಡುವಿನ ಮಾರ್ಗದಲ್ಲಿ ಮಂಗಳವಾರದಿಂದ ನಮ್ಮ ಮೆಟ್ರೋ ರೈಲು ಬೆಳಿಗ್ಗೆ 5 ರಿಂದ ರಾತ್ರಿ 11 ರ ವರೆಗೆ ಸಂಚಾರ ಆರಂಭಿಸಿದೆ. ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರ ಮನವಿ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ಗಂಟೆ ಕಾಲ, ಸೇರಿ ಒಟ್ಟು 2 ಗಂಟೆಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಈ ಮಾರ್ಗ ಒಟ್ಟು 13 ಕಿ.ಮಿ ಉದ್ದ ಇದ್ದು ರೈಲು ಇಷ್ಟು ದಿನ ಬೆಳಿಗ್ಗೆ 6 ರಿಂದ ರಾತ್ರಿ 10 ವರೆಗೆ ರೈಲು ಸಂಚರಿಸುತ್ತಿತ್ತು. ಆದರೆ ಮೆಟ್ರೋ ರೈಲಿನ ಸೇವೆಯನ್ನು ಎರಡು ಗಂಟೆಗಳ ಕಾಲ ವಿಸ್ತರಣೆ ಡಿಸೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಮಾಡಲಾಗಿದೆ.
ಬೆಳಿಗ್ಗೆ 5 ರಿಂದ 8 ಗಂಟೆಯವರೆಗೆ 15 ನಿಮಿಷಕ್ಕೊಂದು ರೈಲು ಬೆಳಿಗ್ಗೆ 8 ರಿಂದ ರಾತ್ರಿ 8 ವರೆಗೆ 10 ನಿಮಿಷಕ್ಕೊಂದು ಹಾಗೂ ರಾತ್ರಿ 8 ರಿಂದ ರಾತ್ರಿ 11 ಗಂಟೆವರೆಗೆ 15  ನಿಮಿಷಕ್ಕೊಂದು ರೈಲು ಸಂಚರಿಸಲಿವೆ.  ಇದರಿಂದ  ಪೀಣ್ಯ ಇಂಡಸ್ಟ್ರಿ, ಜಾಲಹಳ್ಳಿ ಕ್ರಾಸ್, ಟಿವಿಎಸ್ ಕ್ರಾಸ್, ಎನ್ ಟಿಟಿಎಫ್, ಪೀಣ್ಯ 2 ನೇ ಹಂತದ ನಿವಾಸಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ. ರೈಲಿನ ವೇಳಾಪಟ್ಟಿ ಬದಲಾಗಿರುವ ಬಗ್ಗೆ ಆ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲೂ ಅಲ್ಲಲ್ಲಿ ಫ್ಲೆಕ್ಸ್ ಹಾಕೀ ಜನರಲ್ಲಿ ಅರಿವು ಮೂಡಿಸಲಾಗಿದೆ.
ಜನರ ಬೇಡಿಕೆ ಮೇರೆಗೆ ರೈಲುಗಳ ಅವಧಿಯನ್ನು ವಿಸ್ತರಿಸಿದ್ದು, ಮುಂದಿನ 2 ತಿಂಗಳುಗಳ ಕಾಲ ಪ್ರಯಾಣಿಕರ ಸಂಚಾರ ಗಮನಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com