ಪ್ಯಾರಿಸ್‍ನಲ್ಲಿ ಕನ್ನಡಿಗ ರಿಕ್ಕಿ ಕೇಜ್ ಆಲ್ಬಂ ಬಿಡುಗಡೆ

ಗ್ರಾಮಿ ಪುರಸ್ಕೃತ ಸಂಗೀತ ನಿರ್ದೇಶಕ, ಕನ್ನಡಿಗ ರಿಕ್ಕಿ ಕೇಜ್ ಅವರ ಆಲ್ಬಮ್`ಶಾಂತಿ ಸಂಸಾರ' ಮಂಗಳವಾರ ಪ್ಯಾರಿಸ್‍ನಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ಕುರಿತು ಸಮಾವೇಶದಲ್ಲಿ ಬಿಡುಗಡೆಯಾಯಿತು. ಪ್ರಧಾನಿ ನರೇಂದ್ರ ಮೋದಿ ಅಲ್ಬಮ್ ಫ್ರಾನ್ಸ್ ನ...
ಪ್ಯಾರೀಸ್‍ನಲ್ಲಿ ಶಾಂತಿ ಸಂಸಾರ ಆಲ್ಬಂ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಫ್ರಾ ನ್ಸ್ ಅಧ್ಯಕ್ಷ ಫ್ರಾಂಕ್ವಾ ಅಲೆಂದೆ.
ಪ್ಯಾರೀಸ್‍ನಲ್ಲಿ ಶಾಂತಿ ಸಂಸಾರ ಆಲ್ಬಂ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಫ್ರಾ ನ್ಸ್ ಅಧ್ಯಕ್ಷ ಫ್ರಾಂಕ್ವಾ ಅಲೆಂದೆ.

ಬೆಂಗಳೂರು: ಗ್ರಾಮಿ ಪುರಸ್ಕೃತ ಸಂಗೀತ ನಿರ್ದೇಶಕ, ಕನ್ನಡಿಗ ರಿಕ್ಕಿ ಕೇಜ್ ಅವರ ಆಲ್ಬಮ್`ಶಾಂತಿ ಸಂಸಾರ' ಮಂಗಳವಾರ ಪ್ಯಾರಿಸ್‍ನಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ಕುರಿತು ಸಮಾವೇಶದಲ್ಲಿ ಬಿಡುಗಡೆಯಾಯಿತು. ಪ್ರಧಾನಿ ನರೇಂದ್ರ ಮೋದಿ ಅಲ್ಬಮ್ ಫ್ರಾನ್ಸ್ ನ ಅಧ್ಯಕ್ಷ ಫ್ರಾಂಕ್ವಾ ಅಲೆಂದೆ ಬಿಡುಗಡೆ ಮಾಡಿದರು.

ಪರಿಸರ ಪ್ರಜ್ಞೆಯನ್ನು ಬೆಳೆಸುವ ಗೀತೆಗಳನ್ನು ಒಳಗೊಂಡಿರುವ ಆಲ್ಬಮ್ ಜಗತ್ತಿನ ವಿವಿಧ ಸಂಸ್ಕೃತಿಗಳೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಏಳು ಗ್ರಾಮಿ ಪುರಸ್ಕೃತರನ್ನು ಒಳಗೊಂಡಂತೆ ಒಟ್ಟು 300 ಸಂಗೀತ ಕಲಾವಿದರಿಂದ ಸಿದ್ಧವಾಗಿರುವ ಈ ಆಲ್ಬಮïನಲ್ಲಿ ಮುಖ್ಯವಾಗಿ ಹರಿಹರನ್, ಅಮಿತಾಬ್ ಬಚ್ಚನ್, ಶಂಕರ್ ಮಹಾದೇವನ್, ಕೆನಡಾದ ಗಾಯಕ ಜೆನ್ನಿಫರ್ ಗಾಸೊಯಿ, ದಕ್ಷಿಣ ಆಫ್ರಿಕಾ ಕೊಳಲು ವಾದಕ ವೂಟರ್ ಕೆಲ್ಲರ್‍ಮನ್ ಕಾಣಿಸಿಕೊಂಡಿದ್ದಾರೆ.

ಅಲ್ಜೀರಿಯಾ, ಸೆನೆಗಲ್ ಮತ್ತು ಭಾರತದ ಜಾನಪದ ಸಂಗೀತ, ಜುಲು ರೂಮಿ, ಟರ್ಕಿ ಕಾವ್ಯದ ಸಾಲುಗಳು, ಇಲ್ಲಿನ ಗೀತೆಗಳಲ್ಲಿ ಬಳಕೆಯಾಗಿದೆ. ಚೀನಾ, ವಿಯಟ್ನಾಮï, ಜಪಾನ್, ಕೊರಿಯಾದ ಸಂಗೀತ ಕಲಾವಿದರು ಗೀತೆಗಳನ ಸಂಯೋಜನೆಯಲ್ಲಿ ನೆರವಾಗಿದ್ದಾರೆ. ವಿವೇಕಾನಂದ ಇಂಟರ್‍ನ್ಯಾಷನಲ್ ಫೌಂಡೇಷನ್ ನಿರ್ಮಿಸಿರುವ ಈ ಆಲ್ಬಮ್ ನಲ್ಲಿ 14 ಹಾಡುಗಳು ಮತ್ತು ನಾಲ್ಕು ಮ್ಯೂಸಿಕ್ ವಿಡಿಯೋಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com