ಕನ್ನಡ ಸಂಘಗಳ ಹುಟ್ಟಿಗೆ ರಾಜರತ್ನಂ ಕಾರಣ

ಕಾಲೇಜುಗಳಲ್ಲಿ ಇಂಗ್ಲಿಷ್ ವಾತಾವರಣದ ನಡುವೆ ಕನ್ನಡ ಸಾಹಿತ್ಯದ ಕೈಂಕರ್ಯ ಮಾಡುವುದನ್ನು ಕವಿ ಜಿ.ಪಿ.ರಾಜರತ್ನಂ ಕಲಿಸಿಕೊಟ್ಟಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಎಚ್.ಆರ್.ರಾಮಕೃಷ್ಣರಾವ್ ತಿಳಿಸಿದರು...
ಅಭಿನವ ಪ್ರಕಾಶನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಎಚ್.ಆರ್. ರಾಮಕೃಷ್ಣರಾವ್ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಲೇಖಕರಾದ ಕೃಷ್ಣಮೂರ್ತಿ ಬಿಳಿಗೆರೆ, ಮೋಳಿ ವರ್
ಅಭಿನವ ಪ್ರಕಾಶನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಎಚ್.ಆರ್. ರಾಮಕೃಷ್ಣರಾವ್ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಲೇಖಕರಾದ ಕೃಷ್ಣಮೂರ್ತಿ ಬಿಳಿಗೆರೆ, ಮೋಳಿ ವರ್

ಬೆಂಗಳೂರು: ಕಾಲೇಜುಗಳಲ್ಲಿ ಇಂಗ್ಲಿಷ್ ವಾತಾವರಣದ ನಡುವೆ ಕನ್ನಡ ಸಾಹಿತ್ಯದ ಕೈಂಕರ್ಯ ಮಾಡುವುದನ್ನು ಕವಿ ಜಿ.ಪಿ.ರಾಜರತ್ನಂ ಕಲಿಸಿಕೊಟ್ಟಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಎಚ್.ಆರ್.ರಾಮಕೃಷ್ಣರಾವ್ ತಿಳಿಸಿದರು.

ಅಭಿನವ ಪ್ರಕಾಶನ ಹಾಗೂ ಗಾಂಧಿ ಸಾಹಿತ್ಯ ಸಂಘ ಶನಿವಾರ ಆಯೋಜಿಸಿದ್ದ ಚಿ.ಶ್ರೀನಿವಾಸರಾಜು ಅವರು ಆರಂಭಿಸಿದ `ಜಿ.ಪಿ.ರಾಜರತ್ನಂ ಜನ್ಮದಿನ ಮತ್ತು ಪಿ.ಪಿ.ಗೆಳೆಯರ ಅಂಕಣ ಬಳಗ ಮಾಲಿಕೆಯ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜು ದಿನಗಳಲ್ಲಿ ಜಿ.ಪಿ.ರಾಜರತ್ನಂ ಅವರಿಂದಲೇ ಕನ್ನಡ ಸಂಘಗಳು ಹುಟ್ಟಿಕೊಂಡಿದ್ದವು. ಇಂಗ್ಲಿಷ್ ಕಲಿಸುತ್ತಿದ್ದ ಕಾಲೇಜುಗಳಲ್ಲಿ ಕನ್ನಡದ ವಾತಾವರಣ ಬೆಳೆಯಲು ಅವರೇ ಕಾರಣರಾಗಿದ್ದರು.

ಅವರ ಸಹವಾಸದಿಂದ ಅನೇಕ ವಿದ್ಯಾರ್ಥಿಗಳಿಗೆ ಸಾಹಿತ್ಯದ ಕೈಂಕರ್ಯ ಮಾಡುವ ಹಾಗೂ ಸಾಹಿತಿಗಳ ಸಹವಾಸ ಮಾಡುವ ಪರಿಪಾಠ ಹೆಚ್ಚಿತು. ನಗರದ ಕಾಲೇಜುಗಳಲ್ಲಿ ಕ್ರಮೇಣವಾಗಿ ಕನ್ನಡ ಸಂಘಗಳು ಹುಟ್ಟಿಕೊಂಡಿದ್ದವು. ಆದರೆ ಇದಕ್ಕೂ ಹಲವು ವರ್ಷಗಳ ಮುನ್ನವೇ ಸಾಹಿತ್ಯ, ಭಾಷೆಗಳ ಬಗ್ಗೆ ಪ್ರಾಧ್ಯಾಪಕರ ಮಟ್ಟದಲ್ಲಿ ಚರ್ಚೆಗಳಾಗುತ್ತಿತ್ತು. ಇದರ ಕಾರಣವಾಗಿ ನಂತರ ಸಂಘಗಳು ಅಸ್ತಿತ್ವಕ್ಕೆ ಬಂದವು ಎಂದರು.

ರಾಜರತ್ನಂ ಅವರು ಕನ್ನಡ ಭಾಷೆಯನ್ನು ಹರಡುವ ಬಗ್ಗೆ ಸರಳವಾಗಿ ತಿಳಿಸುತ್ತಿದ್ದರು.ವಿಜ್ಞಾನದ ವಿಷಯಗಳು ಇಂಗ್ಲಿಷ್‍ನಲ್ಲಿದ್ದು, ಇದನ್ನು ಸರಳವಾಗಿ ಜನಸಾಮಾನ್ಯರಿಗೆ ಮುಟ್ಟಿಸುವುದು ಅವರ ಆಶಯವಾಗಿತ್ತು. ವಿಜ್ಞಾನದ ಮೇಷ್ಟ್ರಾಗಬೇಕೆಂದು ನಾನು ಬಯಸಿದಾಗ `ನೀನು ಏನನ್ನೂ ಬರೆಯಬೇಡ' ಎಂದು ಹೇಳಿದ್ದರು.  ಬರೆಯಲು ಸಾಕಷ್ಟು ಜನರಿದ್ದಾರೆ. ಹೀಗಾಗಿ ಬರೆಯುವ ಬದಲು ವಿಜ್ಞಾನದ ವಿಚಾರಗಳನ್ನು ಸರಳ ಕನ್ನಡ ಪದಗಳ ಮೂಲಕ ಜನರಿಗೆ ತಿಳಿಸು ಎಂದು ಹೇಳಿದರು. ನಂತರ ಗ್ರಾಮೀಣ ಪ್ರದೇಶಗಳಲ್ಲಿ ದೂರದರ್ಶಕ ಹಿಡಿದು ಮಕ್ಕಳಿಗೆ ವಿಜ್ಞಾನದ
ಪಾಠ ಮಾಡಲು ಇದೇ ಪ್ರೇರಣೆಯಾಯಿತು ಎಂದು ನೆನಪಿಸಿಕೊಂಡರು.

`ಖರ್ಚಾಗದ ಪದ್ಯಗಳು' ಕವನ ಸಂಕಲನದ ಬಗ್ಗೆ ಮಾತನಾಡಿದ ಕನ್ನಡ ಅಧ್ಯಾಪಕ ಶ್ರೀಧರ್ ಹೆಗಡೆ ಭದ್ರನ್, ರಮೇಶ್ ಹೆಗಡೆ ಅವರು ಈ ಕವನ ಸಂಕಲನದ ಮೂಲಕ ಕೈಗೆ ಸಿಗದ ಕಾವ್ಯವನ್ನು ವಶಪಡಿಸಿಕೊಳ್ಳಲು ಯತ್ನಿಸುವ ಹಠವನ್ನು ತೋರಿಸಿದ್ದಾರೆ. ಕೆಲವು ಕವಿತೆಗಳಲ್ಲಿ ಸೂಕ್ಷ್ಮವಾದ ಸಾಲುಗಳಿದ್ದು, ತನ್ನದೇ ಆದ ಕಾವ್ಯಪ್ರಪಂಚವನ್ನು ದಕ್ಕಿಸಿಕೊಳ್ಳಬೇಕು
ಎಂಬ ತುಡಿತ ಕಾಣುತ್ತದೆ ಎಂದರು.

ಪುಸ್ತಕ ಬಿಡುಗಡೆ: ರಮೇಶ ಹೆಗಡೆ ಅವರ `ಖರ್ಚಾಗದ ಪದ್ಯಗಳು', ಕೆ. ಸಚ್ಚಿದಾನಂದನ್ ಮಲೆಯಾಳಿಯಲ್ಲಿ ಬರೆದ ಮೋಳಿ ವರ್ಗಿಸ್ ಕನ್ನಡಕ್ಕೆ ಅನುವಾದಿಸಿದ `ಅಕ್ಕ ನುಡಿಯುತ್ತಾಳೆ', ಕೃಷ್ಣಮೂರ್ತಿ ಬಿಳಿಗೆರೆ ಮಕ್ಕಳ ಹಾಡುಗಳು `ಹಾಡೆ ಸುವ್ವಿ' ಕವನ ಸಂಕಲನ ಲೋಕಾರ್ಪಣೆಗೊಳಿಸಲಾಯಿತು. ಸರಸ್ವತಿ ಎನ್.ರಾಜು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com