ಇಸ್ರೋ ಸಂಸ್ಥೆಯಿಂದ ಆಸ್ಟ್ರೋಸ್ಯಾಟ್ ಯೋಜನೆ ಜಾರಿ: ಕಿರಣ್ ಕುಮಾರ್

ಇಸ್ರೋ ಸಂಸ್ಥೆಯು ಆಸ್ಟ್ರೋಸ್ಯಾಟ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ನಕ್ಷತ್ರ ಮತ್ತು ನಕ್ಷತ್ರ ಸಮೂಹಗಳನ್ನು ಸಂಶೋಧನೆ ಮಾಡಲು ಈ ಯೋಜನೆಯಿಂದ ನೆರವು ಸಿಗಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್...
ಇಸ್ರೋ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ (ಸಂಗ್ರಹ ಚಿತ್ರ)
ಇಸ್ರೋ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ (ಸಂಗ್ರಹ ಚಿತ್ರ)

ಬಾಗಲಕೋಟೆ: ಇಸ್ರೋ ಸಂಸ್ಥೆಯು ಆಸ್ಟ್ರೋಸ್ಯಾಟ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ನಕ್ಷತ್ರ ಮತ್ತು ನಕ್ಷತ್ರ ಸಮೂಹಗಳನ್ನು ಸಂಶೋಧನೆ ಮಾಡಲು ಈ
ಯೋಜನೆಯಿಂದ ನೆರವು ಸಿಗಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ ಹೇಳಿದರು.

ಈ ಯೋಜನೆಯಿಂದ ನಕ್ಷತ್ರ ಮತ್ತು ನಕ್ಷತ್ರ ಸಮೂಹಗಳನ್ನು ಸಂಶೋಧನೆ ಮಾಡಲೂ ಅವಕಾಶವಿದೆ. ಈ ಬಗ್ಗೆ ಆಸಕ್ತ ವಿದ್ಯಾರ್ಥಿಗಳು ಇಸ್ರೋಗೆ ಮನವಿ ಸಲ್ಲಿಸಿದರೆ ಅವಕಾಶ ಕಲ್ಪಿಸಲಾಗುವುದು. ಭಾರತದ ಬಾಹ್ಯಾಕಾಶ ತಂತ್ರಜ್ಞಾನವು ದೇಶ ಆರ್ಥಿಕ ಮತ್ತು ವೈಜಾ್ಞನಿಕವಾಗಿ ಅಭಿವೃದ್ಧಿ ಹೊಂದಲು ಪೂರಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ದೇಶದ 30 ಉಪಗ್ರಹಗಳು ಸದ್ಯ ಕಾರ್ಯಾಚರಣೆಯಲ್ಲಿವೆ. ಏಳು ಇನ್ ಸ್ಯಾಟ್ ಸಂಪರ್ಕ ಉಪಗ್ರಹಗಳನ್ನು ಉಡ್ಡಯನ ಮಾಡುವ ಯೋಜನೆ ಇದ್ದು, ಈಗಾಗಲೇ 4 ಉಡ್ಡಯನವಾಗಿವೆ ಎಂದರು.

ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಭಾಗಗಳ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com